AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನಶಂಕರಿದೇವಿ ಜಾತ್ರೆ: ಪರಸ್ಪರ ಹೆಗಲು ಕೊಟ್ಟು ಹೆಜ್ಜೆ ಹಾಕಿದ ಕುದುರೆ-ಎತ್ತಿನ ಜೋಡಿ

ಬಾಗಲಕೋಟೆ: ಕ್ಷಣ ಕ್ಷಣಕ್ಕೂ ಕುತೂಹಲ.. ನೋಡುತ್ತಲೇ ಮೈಮರೆಯುವಷ್ಟು ರೋಮಾಂಚನ. ಯಾವ ಜೋಡಿ ಖದರ್ ತೋರಿಸುತ್ತೆ ಅನ್ನೋ ಗೊಂದಲ. ಯಾಕಂದ್ರೆ ಅಲ್ಲಿದ್ದ ಸ್ಪೆಷಲ್ ಜೋಡಿಗಳು ಕಮಾಲ್ ಮಾಡಿದ್ವು. ರೋಡಿಗಿಳಿದಿದ್ದೇ ತಡ ಧೂಳೆಬ್ಬಿಸಿ ನುಗ್ಗಿದ್ವು. ಈ ಓಟದಲ್ಲಿ ಇನ್ನೊಂದು ಮೇನ್ ಹೈಲೆಟ್ ಏನ್ ಗೊತ್ತಾ. ಕುದುರೆ ಹಾಗೂ ಎತ್ತಿನ ಜೋಡಿ. ಎರಡೂ ಸಹ ಪರಸ್ಪರ ಹೆಗಲು ಕೊಟ್ಟು ಹೆಜ್ಜೆ ಹಾಕ್ತಿದ್ರೆ ಎಲ್ಲರ ಕಣ್ಣು ಅವುಗಳನ್ನೇ ಹಿಂಬಾಲಿಸಿತ್ತು. ಬನಶಂಕರಿ ದೇವಿ ಜಾತ್ರಾ ಪ್ರಯುಕ್ತ ಬಂಡಿ ಓಟ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ […]

ಬನಶಂಕರಿದೇವಿ ಜಾತ್ರೆ: ಪರಸ್ಪರ ಹೆಗಲು ಕೊಟ್ಟು ಹೆಜ್ಜೆ ಹಾಕಿದ ಕುದುರೆ-ಎತ್ತಿನ ಜೋಡಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Feb 15, 2020 | 8:27 AM

Share

ಬಾಗಲಕೋಟೆ: ಕ್ಷಣ ಕ್ಷಣಕ್ಕೂ ಕುತೂಹಲ.. ನೋಡುತ್ತಲೇ ಮೈಮರೆಯುವಷ್ಟು ರೋಮಾಂಚನ. ಯಾವ ಜೋಡಿ ಖದರ್ ತೋರಿಸುತ್ತೆ ಅನ್ನೋ ಗೊಂದಲ. ಯಾಕಂದ್ರೆ ಅಲ್ಲಿದ್ದ ಸ್ಪೆಷಲ್ ಜೋಡಿಗಳು ಕಮಾಲ್ ಮಾಡಿದ್ವು. ರೋಡಿಗಿಳಿದಿದ್ದೇ ತಡ ಧೂಳೆಬ್ಬಿಸಿ ನುಗ್ಗಿದ್ವು. ಈ ಓಟದಲ್ಲಿ ಇನ್ನೊಂದು ಮೇನ್ ಹೈಲೆಟ್ ಏನ್ ಗೊತ್ತಾ. ಕುದುರೆ ಹಾಗೂ ಎತ್ತಿನ ಜೋಡಿ. ಎರಡೂ ಸಹ ಪರಸ್ಪರ ಹೆಗಲು ಕೊಟ್ಟು ಹೆಜ್ಜೆ ಹಾಕ್ತಿದ್ರೆ ಎಲ್ಲರ ಕಣ್ಣು ಅವುಗಳನ್ನೇ ಹಿಂಬಾಲಿಸಿತ್ತು.

ಬನಶಂಕರಿ ದೇವಿ ಜಾತ್ರಾ ಪ್ರಯುಕ್ತ ಬಂಡಿ ಓಟ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಸುಳಿಬಾವಿ ಗ್ರಾಮದಲ್ಲಿ ಬನಶಂಕರಿದೇವಿ ಜಾತ್ರಾ ಪ್ರಯುಕ್ತ ಬಂಡಿ ಓಟ ಆಯೋಜಿಸಲಾಗಿತ್ತು. ಜೋಡೆತ್ತಿನ ಬಂಡಿ ಓಟ, ಕುದುರೆ ಎತ್ತು ಜೋಡಿಯ ಬಂಡಿ ಹಾಗೂ ಜೋಡು ಕುದುರೆ ಬಂಡಿ ಓಟ ಸ್ಪರ್ಧೆ ನಡೆಯಿತು. ಬಾಗಲಕೋಟೆ, ಬೆಳಗಾವಿ, ವಿಜಯಪುರ ಸೇರಿದಂತೆ ಹಲವು ಭಾಗಗಳಿಂಧ ಸ್ಪರ್ಧಿಗಳು ಭಾಗಿಯಾಗಿದ್ರು. ಮೊದಲು ಕುದುರೆ ಮತ್ತು ಎತ್ತಿನ ಜೋಡಿ ಬಂಡಿ ಓಟ ನಡೆಯಿತು. ಈ ವೇಳೆ ಯುವಕರು ಬೈಕ್ ಏರಿ ಅವುಗಳ ಹಿಂದೆ ಸಾಗಿ ಹುರಿದುಂಬಿಸಿದ್ರು.

ಎಲ್ಲರ‌ ಗಮನ ಸೆಳೆದ ಬಂಡಿ ಓಟ:  ಇನ್ನು ಸುಳಿಬಾವಿ ಗ್ರಾಮದಲ್ಲಿ ಪ್ರತಿವರ್ಷ ಬನಶಂಕರಿದೇವಿ ಜಾತ್ರೆ ಅದ್ಧೂರಿಯಾಗಿ ನಡೆಯುತ್ತೆ. ನಾಲ್ಕು ದಿನಗಳ ಜಾತ್ರೆಯಲ್ಲಿ ಒಂದೊಂದು ದಿನವೂ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತೆ. ಪ್ರತೀ ಬಾರಿ ವಿವಿಧ ಗ್ರಾಮೀಣ ಕ್ರೀಡೆಗಳನ್ನ ಆಡಿಸಲಾಗುತ್ತೆ. ಅದ್ರಲ್ಲೂ ಈ ಬಾರಿ ಬಂಡಿ ಓಟದ ಸ್ಪರ್ಧೆ ಎಲ್ಲರ‌ ಗಮನ ಸೆಳೆಯಿತು. ಐದು ಕಿಲೋ ಮೀಟರ್ ತೆರಳಿ ವಾಪಸ್ ಬರುವ ಸ್ಪರ್ಧೆಯಲ್ಲಿ ಯಾವ ಜೋಡಿ ಮೊದಲು ಬರುತ್ತದೆಯೋ ಆ ಜೋಡಿಗೆ ಬಹುಮಾನ ನಿಗದಿ ಮಾಡಲಾಗಿತ್ತು.

ಜೋಡೆತ್ತಿನ‌ ಬಂಡಿ ಓಟದಲ್ಲಿ ಫಸ್ಟ್ ಬಂದವ್ರಿಗೆ 15 ಸಾವಿರ, ಕುದುರೆ ಮತ್ತು ಎತ್ತಿನ ಜೋಡಿಯಲ್ಲಿ ಮೊದಲು ಬಂದವ್ರಿಗೆ 7ಸಾವಿರ ನೀಡಲಾಯ್ತು. ಹಳ್ಳಿ ಕ್ರೀಡೆಗಳ ಗಮ್ಮತ್ತೇ ಹಾಗೇ. ಅಲ್ಲಿ ಸಾಹಸದ ಜೊತೆ ಥ್ರಿಲ್ ಕೊಡೋ ನೋಟವೂ ಇರುತ್ತೆ. ಸದ್ಯ ಬಾಗಲಕೋಟೆಯಲ್ಲಿ ನಡೆದ ಈ ಬಂಡಿ ಓಟದ ಸ್ಪರ್ಧೆ ಕೂಡ ಸಖತ್ ಮಜಾ ಕೊಟ್ಟಿತ್ತು.

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್