ಉಚಿತ ಬಸ್ ಯೋಜನೆ ಮಹಿಳೆಯರಿಗೆ ಶಕ್ತಿ ತುಂಬಿದ್ದರೆ, ಬಾಗಲಕೋಟೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಕುಂಠಿತಗೊಳಿಸುತ್ತಿದೆ!
ಬಸ್ ಇಲ್ಲದೆ ವಿದ್ಯಾರ್ಥಿಗಳು ಕಾಲೇಜಿಗೆ ಬರೋದನ್ನೇ ನಿಲ್ಲಿಸಿದ್ದಾರೆ. ಹಳ್ಳಿ ಭಾಗದಿಂದ ಬರಲು ಸಮರ್ಪಕ ಬಸ್ ಇಲ್ಲದ ಕಾರಣ ಕಾಲೇಜಿನ ವೇಳಾಪಟ್ಟಿಯಲ್ಲೇ ಬದಲಾವಣೆ ಮಾಡಲಾಗಿದೆ. ಬಾಗಲಕೋಟೆ ಸರಕಾರಿ ಪದವಿ ಕಾಲೇಜಿನಲ್ಲಿ ಈ ಹಿಂದೆ ಬೆಳಿಗ್ಗೆ ೮.೧೫ ಕ್ಕೆ ಮೊದಲ ಕ್ಲಾಸ್ ಆರಂಭ ಆಗ್ತಿತ್ತು. ಆದರೆ ವಿದ್ಯಾರ್ಥಿಗಳು ಬರೋದು ತಡ ಆಗುತ್ತಿರೋದರಿಂದ ಬೆಳಿಗ್ಗೆ ಮೊದಲ ಕ್ಲಾಸ್ ೯.೧೫ ಕ್ಕೆ ಶುರು ಮಾಡುತ್ತಿದ್ದಾರೆ!

ಶಕ್ತಿ ಯೋಜನೆಯಿಂದ ರಾಜ್ಯಾದ್ಯಂತ ಮಹಿಳೆಯರು (women) ಉಚಿತವಾಗಿ ಬಸ್ ನಲ್ಲಿ ಓಡಾಡುತ್ತಿದ್ದಾರೆ.ಇದರಿಂದ ಕೆ ಎಸ್ ಆರ್ ಟಿ ಸಿ ಬಸ್ ಗಳು ದಿನಾಲು ಭರ್ತಿಯಾಗಿ ಹೊರಟಿವೆ.ಆದರೆ ಶಕ್ತಿ ಯೋಜನೆ (shakti scheme) ವಿದ್ಯಾರ್ಥಿಗಳ ಶಿಕ್ಷಣವನ್ನು ನಿಶ್ಯಕ್ತಿಗೊಳಿಸುತ್ತಿದೆ.ಬಸ್ ಇಲ್ಲದೆ ವಿದ್ಯಾರ್ಥಿಗಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ.ಇದಕ್ಕೆ ಸಾಕ್ಷಿ ಈ ಕಾಲೇಜಿನಲ್ಲಿ ಕಂಡು ಬಂದ ದೃಶ್ಯ. ಕಾಲು ಇಡೋಕು ಆಗದಷ್ಟು ರಶ್ ಆಗಿರುವ ಬಸ್‌ಗಳು. ಹೇಗಾದರೂ ಮಾಡಿ ಬಸ್ ನಲ್ಲಿ ಹೋಗಲೇಬೇಕೆಂದು ಬಾಗಿಲಿಗೆ ಜೋತು ಬಿದ್ದು ಹೊರಟ ವಿದ್ಯಾರ್ಥಿಗಳು.ಇನ್ನೊಂದು ಕಡೆ ಕಾಲೇಜಿನಲ್ಲಿ ಬೆಂಚ್ ಗಳು ಖಾಲಿ ಖಾಲಿ. ಕಾಲೇಜಿನಲ್ಲಿ ಕಡಿಮೆ ಆಗುತ್ತಿರುವ ವಿದ್ಯಾರ್ಥಿಗಳ (students) ಸಂಖ್ಯೆ. ಇದು ಶಕ್ತಿ ಗ್ಯಾರಂಟಿ ಯೋಜನೆ ಎಫೆಕ್ಟ್ ನಿಂದ ಬಾಗಲಕೋಟೆಯಲ್ಲಿ (Bagalkot ) ಕಂಡು ಬಂದ ದೃಶ್ಯ.
ಶಕ್ತಿ ಯೋಜನೆ ಮೂಲಕ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಓಡಾಡುತ್ತಿದ್ದಾರೆ,ಇದು ಮಹಿಳೆಯರಿಗೆ ಅನುಕೂಲ ಆಗಿದೆ.ಆದರೆ ವಿದ್ಯಾರ್ಥಿಗಳ ಮೇಲೆ ಬಾರಿ ದುಷ್ಪರಿಣಾಮ ಬೀರುತ್ತಿದೆ.ಗ್ರಾಮೀಣ ಭಾಗದಿಂದ ಬಸ್ ಮೂಲಕ ಕಾಲೇಜಿಗೆ ಬರೋದೆ ಒಂದು ದೊಡ್ಡ ಸಾಹಸ,ಅದೊಂದು ಯುದ್ದ ಮಾಡಿ ಬಂದ ಅನುಭವ ಎಂಬಂತಾಗಿದೆ.
ಸಮಯಕ್ಕೆ ಸರಿಯಾಗಿ ಬಸ್ ಬರೋದಿಲ್ಲ.ಬಂದರೂ ಕಾಲು ಇಡೋಕು ಜಾಗವಿರೋದಿಲ್ಲ.ಇದರಿಂದ ಕಾಲೇಜಿಗೆ ಬರಲು ತಡವಾಗುತ್ತಿದೆ.ಮೊದಲ ಅವಧಿಯ ಕ್ಲಾಸ್ ಅರ್ಧಕ್ಕೆ ಅರ್ಧದಷ್ಟು ಖಾಲಿಯಾಗಿರುತ್ತದೆ.ಇದಕ್ಕೆ ಸಾಕ್ಷಿ ಬಾಗಲಕೋಟೆ ಸರಕಾರಿ ಪದವಿ ಕಾಲೇಜಿನಲ್ಲಿ ಕಾಣುತ್ತಿರುವ ಈ ದೃಶ್ಯ.ಸರಿಯಾಗಿ ಬಸ್ ಬಾರದ ಕಾರಣ ಕ್ಲಾಸ್ ಮಿಸ್ ಆಗುತ್ತಿದ್ದು,ಅರ್ಧಕ್ಕೆ ಅರ್ಧದಷ್ಟು ಬೆಂಚ್‌ಗಳು ಖಾಲಿಯಾಗಿವೆ.ನಮಗೆ ಶಕ್ತಿ ಯೋಜನೆಯಿಂದ ಬಾರಿ ತೊಂದರೆಯಾಗುತ್ತಿದೆ.ಕ್ಲಾಸ್ ಮಿಸ್ ಆಗುತ್ತಿವೆ.ಇದರಿಂದ ನಮ್ಮ ಶಿಕ್ಷಣಕ್ಕೆ ಹೊಡೆತ ಬೀಳುತ್ತಿದೆ.ಗ್ರಾಮೀಣ ಭಾಗಲ್ಕೆ ಶಾಲಾಕಾಲೇಜು ಅವಧಿ ವೇಳೆ ಹೆಚ್ಚುವರಿ ಬಸದ ಬಿಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.
Also Read: ಡೀಸಲ್ ಇಲ್ಲದೇ ಅರ್ಧ ದಾರಿಯಲ್ಲೇ ನಿಂತ ಬಸ್! ಡೀಸಲ್ ಹಾಕಿಸದಷ್ಟು ಲಾಸ್ ಮಾಡಿಕೊಂಡಿದೆಯಾ KSRTC?
ಹೌದು ಶಕ್ತಿ ಯೋಜನೆಯಿಂದ ಬಸ್ ನಲ್ಲಿ ಮಹಿಳೆಯರ ಓಡಾಟ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.ಇದರಿಂದ ಪುರುಷರು,ವಿದ್ಯಾರ್ಥಿಗಳು ಬಸ್ ನಲ್ಲಿ ಕಾಲಿಡೋದೆ ದುಸ್ತರವಾಗಿದೆ.ಸರಕಾರಿ ಪದವಿ ಕಾಲೇಜು ಅಂದರೆ ಬಹುತೇಕ ಗ್ರಾಮೀಣ ಭಾಗದ ಬಡ ಮದ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಾಗಿ ಬರ್ತಾರೆ.ಎಲ್ಲರೂ ಬಸ್ ಮೇಲೆ ಅವಲಂಬಿತರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:02 pm, Sat, 2 December 23