ಭಾರತಕ್ಕೆ ಮರಳಿದ ಭಾರತೀಯ ರಾಯಭಾರ ಕಚೇರಿ ಭದ್ರತಾ ಸಿಬ್ಬಂದಿ; ಬಾಗಲಕೋಟೆ ಮೂಲದ ಐಟಿಬಿಪಿ ಕಮಾಂಡೊ ಮನೆಯಲ್ಲಿ ಕಡಿಮೆಯಾಗದ ಆತಂಕ
ಮಂಜುನಾಥ ಮಾಳಿ 2019ರಿಂದ ಕಾಬುಲ್ನ ಭಾರತೀಯ ರಾಯಭಾರ ಕಚೇರಿಗೆ ಭದ್ರತಾ ಸಿಬ್ಬಂದಿ ಆಗಿದ್ದರು. ಆಗಸ್ಟ್ 16 ರಾತ್ರಿ ಕಾಬುಲ್ನಿಂದ ತೆರಳಿ ಸೇನೆ ಜೊತೆ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು.
ಬಾಗಲಕೋಟೆ: ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ (Taliban) ಉಗ್ರರು ತನ್ನ ಅಧಿಪತ್ಯವನ್ನು ಸಾಧಿಸುತ್ತಿಸದ್ದಂತೆ, ಭಾರತ ಸರ್ಕಾರ ಭಾರತೀಯ ರಾಯಭಾರ ಕಚೇರಿ ಭದ್ರತಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡಿದೆ. ಬಾಗಲಕೋಟೆ ಮೂಲದ ಐಟಿಬಿಪಿ ಕಮಾಂಡೊ ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳಿದರೂ ಅವರ ಮನೆಯಲ್ಲಿ ಆತಂಕ ಹೆಚ್ಚಾಗಿದೆ. ಮುಧೋಳ ತಾಲೂಕಿನ ಕಸಬಾಜಂಬಗಿ ಗ್ರಾಮದ ಮಂಜುನಾಥ ಮಾಳಿ ಕಾಬುಲ್ನ ಭಾರತೀಯ ರಾಯಭಾರ ಕಚೇರಿಗೆ ಭದ್ರತಾ ಸಿಬ್ಬಂದಿಯಾಗಿದ್ದರು. ಆದರೆ ಇದೀಗ ಅಲ್ಲಿನ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆ ಭಾರತಕ್ಕೆ ವಾಪಸ್ಸಾಗಿದ್ದಾರೆ. ಮಂಜುನಾಥ ಮಾಳಿ 2019ರಿಂದ ಕಾಬುಲ್ನ ಭಾರತೀಯ ರಾಯಭಾರ ಕಚೇರಿಗೆ ಭದ್ರತಾ ಸಿಬ್ಬಂದಿ ಆಗಿದ್ದರು. ಆಗಸ್ಟ್ 16 ರಾತ್ರಿ ಕಾಬುಲ್ನಿಂದ ತೆರಳಿ ಸೇನೆ ಜೊತೆ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ನಂತರ ಆಗಸ್ಟ್ 17 ರಂದು ಗುಜರಾತ್ ಮಾರ್ಗವಾಗಿ ದೆಹಲಿಗೆ ಬಂದಿದ್ದಾರೆ. ಸದ್ಯ ಅವರು ದೆಹಲಿಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ಆದರೂ ಮಂಜುನಾಥರವರ ಮುಖ ನೇರವಾಗಿ ನೋಡುವವರೆಗೂ ಮನೆಯವರಿಗೆ ಸಮಾಧಾನವಾಗುತ್ತಿಲ್ಲ. ಮಂಜುನಾಥ ದೆಹಲಿಯಿಂದ ಬೇಗ ಮನೆಗೆ ಬರಲಿ ಅಂತ ತಂದೆ, ತಾಯಿ, ಪತ್ನಿ ಹಾಗೂ ಕುಟುಂಬಸ್ಥರು ಕಾದು ಕೂತಿದ್ದಾರೆ.
ಸೇನೆ ವಿಮಾನದ ಮೂಲಕ ಎಲ್ಲ ಭದ್ರತಾ ಸಿಬ್ಬಂದಿ ಜೊತೆ ಮಂಜುನಾಥ ಮಾಳಿ ಭಾರತಕ್ಕೆ ಬಂದಿದ್ದಾರೆ. ಇವರ ಜೊತೆ ಇನ್ನಿಬ್ಬರು ಕಮಾಂಡೊ ದೆಹಲಿಗೆ ವಾಪಸ್ ಆಗಿದ್ದಾರೆ. ಗದಗ ಜಿಲ್ಲೆಯ ಬಳಗಾನೂರು ಮೂಲದ ರವಿ ನೀಲಗಾರ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರು ಮೂಲದ ದಸ್ತಗೀರ್ ಮುಲ್ಲಾ ಭಾರತಕ್ಕೆ ಮರಳಿ ಬಂದಿದ್ದಾರೆ. ಕರ್ನಾಟಕದ ಈ ಮೂರು ಜನ ಅಫ್ಘಾನಿಸ್ತಾನದ ಕಾಬುಲ್ನ ಭಾರತೀಯ ರಾಯಭಾರಿ ಕಚೇರಿಗೆ ಐಟಿಬಿಪಿ ಭದ್ರತಾ ಕಮಾಂಡೊ ಆಗಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ಈ ಮೂವರು ದೆಹಲಿಯಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಇದನ್ನೂ ಓದಿ
ತಾಲಿಬಾನ್ ವಶಕ್ಕೆ ಕಾಬೂಲ್: 129 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಸ್ವದೇಶಕ್ಕೆ ಆಗಮನ
ಕಾಬೂಲ್ನಲ್ಲಿ ಸುರಕ್ಷಿತವಾಗಿದ್ದೇನೆ; ವಾಯ್ಸ್ ಮೆಸೇಜ್ ಮೂಲಕ ಭಾರತಕ್ಕೆ ತಿಳಿಸಿದ ಕನ್ನಡತಿ
(Indian Embassy security personnel return to India but bagalkot Family is still panic here is the details)