ಮನೆ ಮೇಲ್ಚಾವಣಿ ಕುಸಿದು ಅಕ್ಕ-ತಮ್ಮ ದುರ್ಮರಣ; ಸ್ವಲ್ಪದರಲ್ಲೆ ಪಾರಾದ ಅಜ್ಜಿ

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ಮನೆ ಮೇಲ್ಚಾವಣಿ ಕುಸಿದು ಅಕ್ಕ-ತಮ್ಮ ಮೃತರಾಗಿದ್ದಾರೆ. ಮೃತ ಮಕ್ಕಳ ತಂದೆ-ತಾಯಿ ಮಕ್ಕಳಿಗೆ ಶಾಲೆಗೆ ಹೋಗಿ ಎಂದು ಬೆಳಗ್ಗೆ ಹೊಲದ ಕೆಲಸಕ್ಕೆ ಹೋಗಿದ್ದರು. ಆದರೆ, ಇವತ್ತು ಮೊದಲ ದಿನ ಎಂದು ಶಾಲೆಗೆ ಹೋಗದೇ ಮಕ್ಕಳು ಮನೆಯಲ್ಲೆ ಇದ್ದರು. ಈ ವೇಳೆ ದುರ್ಘಟನೆ ನಡೆದಿದೆ.

ಮನೆ ಮೇಲ್ಚಾವಣಿ ಕುಸಿದು ಅಕ್ಕ-ತಮ್ಮ ದುರ್ಮರಣ; ಸ್ವಲ್ಪದರಲ್ಲೆ ಪಾರಾದ ಅಜ್ಜಿ
ಮೃತ ಮಕ್ಕಳು
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:May 31, 2024 | 2:52 PM

ಬಾಗಲಕೋಟೆ, ಮೇ.31: ಮನೆ ಮೇಲ್ಚಾವಣಿ ಕುಸಿದು ಅಕ್ಕ-ತಮ್ಮ(Sister And Brother) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್(Ilkal) ತಾಲೂಕಿನ ಕಂದಗಲ್ ಗ್ರಾಮದಲ್ಲಿ ನಡೆದಿದ್ದು, ಸ್ವಲ್ಪದರಲ್ಲೆ ಅಜ್ಜಿ ಪಾರಾಗಿದ್ದಾರೆ. ಗೀತಾ ಆದಾಪುರಮಠ(14) ಹಾಗೂ ರುದ್ರಯ್ಯ(10) ಮೃತ ರ್ದುದೈವಿಗಳು. ಈಗಾಗಲೇ ಇಬ್ಬರ ಮೃತದೇಹಗಳನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಮನೆಯಲ್ಲಿ ಅಕ್ಕ-ತಮ್ಮ ಹಾಗೂ ಅವರ ಅಜ್ಜ, ಅಜ್ಜಿ ಇದ್ದರು ಎನ್ನಲಾಗಿದೆ.

ಮಕ್ಕಳಿಗೆ ಶಾಲೆಗೆ ಹೋಗಿ ಎಂದು ಹೇಳಿ ಹೊಲಕ್ಕೆ ಹೋಗಿದ್ದ ಪೋಷಕರು

ಇನ್ನು ಅದೃಷ್ಟವಶಾತ್​ ಮನೆ ಬೀಳುವ ಕೆಲವೇ ಕ್ಷಣಗಳ ಮೊದಲು ಅಜ್ಜ ಮನೆಯಿಂದ ಹೊರಗಡೆ ಹೋಗಿದ್ದ, ಅಜ್ಜಿ ಸಹ ಒಳಗಿಂದ ಹೊರಗಡೆ ಬಂದು ಕುಳಿತಿದ್ದಳು. ಹೀಗಾಗಿ ಅಜ್ಜ-ಅಜ್ಜಿ ಸ್ವಲ್ಪದರಲ್ಲೆ ಪಾರಾಗಿದ್ದಾರೆ. ಇತ್ತ ಮೃತ ಮಕ್ಕಳ ತಂದೆ-ತಾಯಿ ಮಕ್ಕಳಿಗೆ ಶಾಲೆಗೆ ಹೋಗಿ ಎಂದು ಬೆಳಗ್ಗೆ ಹೊಲದ ಕೆಲಸಕ್ಕೆ ಹೋಗಿದ್ದರು. ಆದರೆ, ಇವತ್ತು ಮೊದಲ ದಿನ ಎಂದು ಶಾಲೆಗೆ ಹೋಗದೇ ಮಕ್ಕಳು ಮನೆಯಲ್ಲೆ ಇದ್ದರು.

ಇದನ್ನೂ ಓದಿ:ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ, ಮಗು ಸಾವು? ವೈದ್ಯನ ವಿರುದ್ಧ ಕುಟುಂಬಸ್ಥರ ಆಕ್ರೋಶ

ಆಸ್ಪತ್ರೆ ಆವರಣದಲ್ಲಿ ಮುಗಿಲು ಮುಟ್ಟಿರುವ ಕುಟುಂಬದ ಆಕ್ರಂದನ

ಈ ವೇಳೆ ಮನೆಯಲ್ಲಿ ಮೊಬೈಲ್ ನೋಡುತ್ತ ಕುಳಿತಿದ್ದ ಗೀತಾ ಮತ್ತು ರುದ್ರಯ್ಯ ಅವರ ಮೇಲೆ ಮೇಲ್ಛಾವಣೆ ಕುಸಿದು ಬಿದ್ದು ದುರ್ಘಟನೆ ಸಂಭವಿಸಿದೆ. ಕಾರ್ಯಾಚರಣೆ ನಡೆಸಿ, ಮಣ್ಣಲ್ಲಿ ಸಿಲುಕಿದ್ದ ಇಬ್ಬರ ಶವ ಹೊರತೆಗೆಯಲಾಗಿದ್ದು, ಇಳಕಲ್ ತಾಲೂಕು ಆಸ್ಪತ್ರೆಗೆ ಎರಡು ಮಕ್ಕಳ ಶವವನ್ನು ರವಾನೆ ಮಾಡಲಾಗಿದೆ. ಮಕ್ಕಳನ್ನ ನೋಡಿ ಆಸ್ಪತ್ರೆ ಆವರಣದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Fri, 31 May 24

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ