ಗ್ರಾಮಗಳಲ್ಲಿ ಹೊಸ ಮದ್ಯದಂಗಡಿ ತೆರೆಯುವ ವಿಚಾರ ಚರ್ಚಾ ಹಂತದಲ್ಲಿದೆ: ಅಬಕಾರಿ ಸಚಿವ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದಂಗಡಿ ತೆರೆಯುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಹಾಗೇ ಸಾರ್ವಜನಿಕ ವಲಯದಿಂದಲೂ ವಿರೋಧಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ಬಾಗಲಕೋಟೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಬಾಗಲಕೋಟೆ ಸೆ.25: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದಂಗಡಿ (Liquor store) ತೆರೆಯುವ ಸರ್ಕಾರದ (Government) ನಿರ್ಧಾರವನ್ನು ವಿರೋಧಿಸಿ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಹಾಗೇ ಸಾರ್ವಜನಿಕ ವಲಯದಿಂದಲೂ ವಿರೋಧಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಯಾಗುತ್ತಿದೆ. ಈ ಬಗ್ಗೆ ಸ್ವತಃ ಅಬಕಾರಿ ಇಲಾಖೆ (Department of Excise) ಸಚಿವರೇ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲಿ ಪಾಕೇಟ್ನಲ್ಲಿಟ್ಟು ಕದ್ದುಮುಚ್ಚಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ಹೊರೆ ಆಗುತ್ತಿದೆ. ಇದನ್ನು ತಪ್ಪಿಸುವುದು ಹೇಗೆ ಎಂಬುವುದರ ಬಗ್ಗೆ ವಿಚಾರ ಮಾಡುತ್ತಿದ್ದಾಗ, ಆ ಏರಿಯಾದಲ್ಲಿ ಮದ್ಯದ ಅಂಗಡಿ ತರೆಯಲು ಅನುಮತಿ ಕೊಟ್ಟರೆ ಅನುಕೂಲ ಆಗುತ್ತದೆ ಎನ್ನುವ ಸಲಹೆ ಬಂದಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ (RB Timmapure) ತಿಳಿಸಿದರು.
ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇದನ್ನು ಅನುಷ್ಠಾನಕ್ಕೆ ತರಬೇಕೋ ಅಥವಾ ಬೇಡವೋ ಎಂಬುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೆ ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಇನ್ನು ಮದ್ಯದ ಅಂಗಡಿಗಳನ್ನು ಬಂದ್ ಮಾಡಬೇಕೆಂದು ಹಳ್ಳಿಗಳಲ್ಲಿ ಜನರು ಒತ್ತಾಯಿಸುತ್ತಿದ್ದಾರೆ. ಆದರೆ ಹೇಗೆ ಬಂದ್ ಮಾಡಬೇಕು ಅನ್ನುವುದನ್ನು ಸಲಹೆ ಕೊಡಲಿ. ಕುಡಿಯುವವರು ಕುಡಿಯುತ್ತಾರೆ ಎಂದು ಹೇಳಿದರು.
ಗ್ರಾಹಕರಿಗೆ ಹೊರೆ ಆಗುವುದನ್ನು ಗಮನ ಕೊಡಬೇಕಲ್ಲ. ಪಾಪ ಕುಡುಕರು ತಮ್ಮಲ್ಲಿ ಮದ್ಯ ಸಿಗಲ್ಲ ಅಂತ ದೂರದ ಊರಿಗೆ ಹೋಗಿ, ಹತ್ತು ರೂಪಾಯಿಗೆ ಸಿಗುವುದನ್ನು 15 ರೂ. ಕೊಟ್ಟು ಮದ್ಯ ಕೊಂಡುಕೊಳ್ಳುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾಗಿದ್ದು, ಮದ್ಯದಂಗಡಿ ಕಡಿಮೆ ಆಗಿವೆ. ಒಂದೊಂದು ಅಂಗಡಿಗೆ ಎರಡು, ಮೂರು ರೂಪಾಯಿ ಆಗುತ್ತೆ. ಮಧ್ಯವರ್ಗದವರಿಗೆ ಈ ಬಿಜಿನೆಸ್ ಮಾಡಲು ಆಗುತ್ತಿಲ್ಲ ಎಂದರು.
ಇದನ್ನೂ ಓದಿ: ದೇಶದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಮದ್ಯದ ಬೆಲೆ ಹೆಚ್ಚು: ವರದಿ
ಸರ್ಕಾರದಲ್ಲಿ ದುಡ್ಡು ಇಲ್ಲ, ಹಣ ಸಂಗ್ರಹಿಸಲು ಮದ್ಯದಂಗಡಿ ಮೊರೆ ಹೋಗುತ್ತಿದೆ ಎಂಬ ಟೀಕೆ ವಿಚಾರವಾಗಿ ಮತನಾಡಿ, ಅವರು ಅಧಿಕಾರದಲ್ಲಿ ಇದ್ದಾಗ ಹಣ ಎಲ್ಲಿಂದ ತರುತ್ತಿದ್ದರು? ಏನ್ ಮ್ಯಾಲಿಂದ ಉದುರಿಸುತಿದ್ರಾ? ಅವರು ಮಾಡಿದ್ದನ್ನೇ ನಾವು ಮಾಡುತ್ತಿದ್ದೇವೆ. ಅವರು ಬೆಲೆ ಏರಿಸಿದ್ದಾರೆ, ನಾವು ಬೆಲೆ ಏರಿಸಿದ್ದೇವೆ. ಗ್ರಾಹಕರಿಗೆ ಹೊರೆಯಾಗದ ಹಾಗೆ ನಾವು ವಿಚಾರ ಮಾಡುತ್ತಿದ್ದೇವೆ. ಮದ್ಯದ ಗಡಿ ತೆರೆದ ತಕ್ಷಣ ಕುಡುಕರ ಬರುತ್ತಾರೇನು? ಎಂದು ಪ್ರಶ್ನಿಸಿದರು.
ಮಾಲ್ಗಳಲ್ಲಿ ಮಾರುವುದರ ಬಗ್ಗೆಯೂ ಸಹ ಇನ್ನು ಚರ್ಚೆಯಲ್ಲಿದೆ. ಅಂಗಡಿಗಳಲ್ಲಿ 10 ರೂ. ಕೊಟ್ಟು ಕೊಂಡುಕೊಳ್ಳುವ ಗ್ರಾಹಕರು, ಮಾಲ್ಗಳಲ್ಲಿ ಹೋದರೇ 15 ರೂ. ಕೊಡಬೇಕು. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಮದ್ಯದ ಅಂಗಡಿ ತೆರಯುವ ವಿಚಾರ ಚರ್ಚೆಯಲ್ಲಿ ಇದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Mon, 25 September 23