ರಾಷ್ಟ್ರಮಟ್ಟದ ಕುಸ್ತಿಪಟುವಿಗೆ ಹಮಾಲಿ ಕೆಲಸವೇ ಜೀವನಕ್ಕೆ ಆಧಾರ, ಮೂಟೆ ಹೊತ್ತು ದಿನಗೂಲಿ ಮಾಡುತ್ತಾರೆ ಅಪ್ಪಾಜಿ ತೇರದಾಳ

ಬಾಗಲಕೋಟೆಯ ರಾಷ್ಟ್ರಮಟ್ಟದ ಕುಸ್ತಿಪಟು ಅಪ್ಪಾಜಿ ತೇರದಾಳ ಅವರ ಮನೆಯಲ್ಲಿ ಮೆಡಲ್​ಗಳು ತುಂಬಿ ತುಳುಕುತ್ತಿವೆ. ಹೊರ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅನೇಕ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಮೆಡಲ್ ತಂದ ಇವರು ಸುಂದರ ಜೀವನ ಸಾಗಿಸುವ ಕನಸು ನನಸಾಗಲೆ ಇಲ್ಲ. ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ದಿನ ತರಕಾರಿ ಚೀಲಗಳನ್ನು ಹೊತ್ತು ಸಾಗಿಸುವ ಮೂಲಕ ಹಮಾಲಿ ಕೆಲಸ ಮಾಡಿ ಆದರಿಂದ ಬಂದಂತಹ 200ರೂ ಅಲ್ಪ ಆದಾಯದಿಂದ ತಮ್ಮ ಕುಟುಂಬವನ್ನು ನಡೆಸುತ್ತಿದ್ದಾರೆ.

ರಾಷ್ಟ್ರಮಟ್ಟದ ಕುಸ್ತಿಪಟುವಿಗೆ ಹಮಾಲಿ ಕೆಲಸವೇ ಜೀವನಕ್ಕೆ ಆಧಾರ, ಮೂಟೆ ಹೊತ್ತು ದಿನಗೂಲಿ ಮಾಡುತ್ತಾರೆ ಅಪ್ಪಾಜಿ ತೇರದಾಳ
ಅಪ್ಪಾಜಿ ತೇರದಾಳ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಆಯೇಷಾ ಬಾನು

Updated on:Sep 25, 2023 | 2:57 PM

ಬಾಗಲಕೋಟೆ, ಸೆ.25: ಕುಸ್ತಿ ನಮ್ಮ ನೆಲದ, ನಮ್ಮ ಮಣ್ಣಿನ ಕ್ರೀಡೆ. ಗರಡಿ ಮನೆಯಲ್ಲಿ ಮಣ್ಣಿನಲ್ಲಿ ಸೆಣಸಾಡುತ್ತಿದ್ದ ಕುಸ್ತಿಪಟುಗಳು ಇದೀಗ ಮ್ಯಾಟ್ ನಲ್ಲಿ, ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದ್ದಾರೆ. ಕುಸ್ತಿಗೆ (Pehlwani) ಇದೀಗ ಬಹಳ ಪ್ರಾಮುಖ್ಯತೆ ಇದ್ದು ಎಷ್ಟು ಜನ ಕುಸ್ತಿಪಟ್ಟುಗಳು ಕ್ರೀಡೆಯಲ್ಲಿ ತಮ್ಮ ಪಟ್ಟು ಪ್ರದರ್ಶಿಸಿ ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ. ಸುಂದರ ಬದುಕನ್ನು ರೂಪಿಸಿಕೊಂಡಿದ್ದಾರೆ. ಖಾಸಗಿ, ಸರ್ಕಾರಿ ನೌಕರಿ ಪಡೆದು ಅದ್ಭುತ ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಕುಸ್ತಿಪಟುವಿನ ಕಥೆಯನ್ನು ಕೇಳಿದರೆ ನಿಜವಾಗಲೂ ಕೂಡ ಮನ ಕಲುಕುತ್ತದೆ. ಸ್ಥಳೀಯ, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕುಸ್ತಿಯನ್ನು ಪ್ರದರ್ಶಿಸಿ ಎದುರಾಳಿ ಪೈಲ್ವಾನ್ ರನ್ನು ಬಗ್ಗು ಬಡಿದು ಹತ್ತಾರು ಮೆಡಲ್ ಗಳನ್ನು ಪಡೆದುಕೊಂಡಿರುವಂತಹ ರಾಷ್ಟ್ರಮಟ್ಟದ ಕುಸ್ತಿಪಟು ಜೀವನಕ್ಕಾಗಿ ತರಕಾರಿ ಮಾರುಕಟ್ಟೆಯಲ್ಲಿ ಹಮಾಲಿ‌ ಕೆಲಸ ಮಾಡುತ್ತಿದ್ದಾನೆ.

ಸುಮಾರು 42 ವರ್ಷದ, ರಾಷ್ಟ್ರಮಟ್ಟದ ಕುಸ್ತಿಪಟು ಅಪ್ಪಾಜಿ ತೇರದಾಳ ಅವರ ಮನೆಯಲ್ಲಿ ಮೆಡಲ್​ಗಳು ತುಂಬಿ ತುಳುಕುತ್ತಿವೆ. ಹೊರ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅನೇಕ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಮೆಡಲ್ ತಂದ ಇವರು ಸುಂದರ ಜೀವನ ಸಾಗಿಸುವ ಕನಸು ನನಸಾಗಲೆ ಇಲ್ಲ. ಯಾವುದೇ ರೀತಿ ಸೌಲಭ್ಯ ಹಾಗೂ ಸರ್ಕಾರಿ ನೌಕರಿ ಸಿಗದೆ ಇವರು ತಮ್ಮ ಜೀವನಕ್ಕಾಗಿ ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ದಿನ ತರಕಾರಿ ಚೀಲಗಳನ್ನು ಹೊತ್ತು ಸಾಗಿಸುವ ಮೂಲಕ ಹಮಾಲಿ ಕೆಲಸ ಮಾಡಿ ಆದರಿಂದ ಬಂದಂತಹ 200ರೂ ಅಲ್ಪ ಆದಾಯದಿಂದ ತಮ್ಮ ಕುಟುಂಬವನ್ನು ನಡೆಸುತ್ತಿದ್ದಾರೆ. ಅಪ್ಪಾಜಿ ತೇರದಾಳ ಅವರ ಮೂಲ ಊರು ಜಮಖಂಡಿ ತಾಲೂಕಿನ ಕುಂಬಾರಹಳ್ಳ. ಇವರು ಚಿಕ್ಕಂದಿನಿಂದಲೂ ಕುಸ್ತಿ ಬಲ್ಲವರು. ಕುಸ್ತಿ ಬಗ್ಗೆ ಬಹಳ ಆಸಕ್ತಿ ಹೊಂದಿ ಸೂಕ್ತವಾದಂತ ತರಬೇತಿಯನ್ನು ಪಡೆದು ಮೈಸೂರು ದಸರಾ ಉತ್ಸವ ಸೇರಿದಂತೆ ಎಲ್ಲೇ ಕುಸ್ತಿ ಸ್ಪರ್ಧೆಗಳಿದ್ದರೂ ಕೂಡ ಅಲ್ಲಿ ಹೋಗಿ ತಮ್ಮ ಪಟ್ಟನ್ನು ತೋರಿಸಿ ಎದುರಾಳಿಯನ್ನು ಮಣ್ಣು ಮುಕ್ಕಿಸುತ್ತಿದ್ದರು. ಇದಷ್ಟೇ ಅಲ್ಲದೆ ಒರಿಸ್ಸಾ, ಛತ್ತೀಸ್ ಗಢ, ಜಾರ್ಖಂಡ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಣಿಪುರ, ಹರಿಯಾಣ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕುಸ್ತಿಯನ್ನು ಆಡಿ ನೂರಾರು ಮೆಡಲ್​ಗಳನ್ನು ಗೆದ್ದು ತಂದಿದ್ದಾರೆ. ಅಷ್ಟೇ ಅಲ್ಲದೆ ಆ ಭಾಗದಲ್ಲಿ ನೂರಾರು ಕುಸ್ತಿಪಟುಗಳಿಗೆ ತರಬೇತಿ ನೀಡಿದ್ದಾರೆ‌.

ದುನಿಯಾ ವಿಜಯ್ ಅವರ ಕುಸ್ತಿ ಚಿತ್ರಕ್ಕೆ ತರಬೇತಿ ನೀಡಿದ್ದ ಅಪ್ಪಾಜಿ ತೇರದಾಳ

ದುನಿಯಾ ವಿಜಯ್ ಅವರ ಕುಸ್ತಿ ಚಿತ್ರಕ್ಕೆ ಅಪ್ಪಾಸಿ ತೇರದಾಳ ಕುಸ್ತಿ ಹೇಳಿ ಕೊಟ್ಟಿದ್ದರು. ಅಪ್ಪಾಸಿ ತೇರದಾಳ ಅವರು ಕುಸ್ತಿಯಲ್ಲಿ ಎಷ್ಟು ಪಳಗಿದ್ದಾರೆಂದರೆ ಇವರನ್ನು ದುನಿಯಾ ವಿಜಯ್ ಗುರುತಿಸಿ ತಮ್ಮ ಕುಸ್ತಿ ಚಿತ್ರಕ್ಕಾಗಿ ತರಬೇತಿಗೆ ಕರೆಸಿಕೊಂಡಿದ್ದರು. ಆಗ ಅಪ್ಪಾಸಿ ತೇರದಾಳ ಅವರು ದುನಿಯಾ ವಿಜಯ್ ಹಾಗೂ ಅವರ ಕುಸ್ತಿ ತಂಡಕ್ಕೆ‌ ಕುಸ್ತಿ ತರಬೇತಿ ನೀಡಿದರು.

ಇದನ್ನೂ ಓದಿ: ಏಷ್ಯನ್ ಗೇಮ್ಸ್​ನಿಂದ ಹಿಂದೆ ಸರಿದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್

ಇತ್ತೀಚಿಗೆ ಅಪ್ಪಾಸಿ ಅವರು ಮಲೇಷಿಯಾ ಕುಸ್ತಿ ಚಾಂಪಿಯನ್ಶಿಪ್ ಗೂ ಆಯ್ಕೆಯಾಗಿದ್ದರು. ಆದರೆ ಅವರಿಗೆ ಅಲ್ಲಿಗೆ ಹೋಗುವುದಕ್ಕೆ ಹಣಕಾಸಿನ ತೊಂದರೆ ಇರುವ ಕಾರಣ ಅಲ್ಲಿಗೆ ಹೋಗಲು ಆಗಿಲ್ಲ. ಅಪ್ಪಾಜಿ ತೇರದಾಳ ಬಿಎ. ಓದಿದ್ದಾರೆ. ಪತ್ನಿ‌, ಇಬ್ಬರು ಮಕ್ಕಳಿದ್ದಾರೆ. ಮಗ ನಾಲ್ಕನೇ ಕ್ಕಾಸ್‌ನಲ್ಲಿ ಓದುತ್ತಿದ್ದು, ಮಗಳು 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪುಣೆಯಲ್ಲಿ ಪತ್ನಿ‌ಮಕ್ಕಳು ವಾಸ ಮಾಡುತ್ತಿದ್ದಾರೆ. ಅಪ್ಪಾಸಿ ಈ ಹಿಂದೆ ಪೊಲೀಸ್ ಪರೀಕ್ಷೆ ಪಾಸ್ ಆಗಿದ್ದರು. ಹೈಟ್ ಸ್ವಲ್ಪ ಕಡಿಮೆಯಾದ ಕಾರಣ ಆಯ್ಕೆ ಆಗಲಿಲ್ಲ. 1990 ರಿಂದ ಕುಸ್ತಿ ಆಡಲು ಶುರು ಮಾಡಿರುವ ಅಪ್ಪಾಸಿ ಇಂದಿಗೂ ಎಲ್ಲೇ ಜಂಗಿ ನಿಕಾಲಿ ಕುಸ್ತಿ ಇತರೆ ಮುಕ್ತ‌ ಕುಸ್ತಿ ಇದ್ದರೂ ತೊಡೆ ತಟ್ಟುತ್ತಾರೆ. ಇದುವರೆಗೂ 200 ಕುಸ್ತಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ. ರಾಷ್ಟ್ರದ ಮಟ್ಟದ 20, ರಾಜ್ಯಮಟ್ಟದ 100ಕ್ಕೂ ಅಧಿಕ ಕುಸ್ತಿ ಅಖಾಡದಲ್ಲಿ ದುಮುಕಿದ್ದಾರೆ. ಇವರು ಕುಸ್ತಿ ಅಕಾಡೆಮಿ ತೆರೆದು ಬಡ ಮಕ್ಕಳಿಗೆ ಕುಸ್ತಿ ತರಬೇತಿ ನೀಡುವ ಕನಸು ಕಂಡಿದ್ದು ಇದಕ್ಕಾಗಿ ಒಂದೂವರೆ ಎಕರೆ ಭೂಮಿ ಆರ್ಥಿಕ ಸಹಾಯ ಬೇಕಾಗಿದೆ.

“ನಾನು ಜೀವನಕ್ಕಾಗಿ ಹಮಾಲಿ‌ ಮಾಡುತ್ತಿದ್ದೇನೆ, ಮೊದಲು ಪುಣೆಯಲ್ಲಿದ್ದಾಗಾಲೂ ಚಂದನ್ ನಗರಬೈಪಾಸ್, ಕರಾಡೆ ಪ್ರದೇಶದಲ್ಲಿ ಹಮಾಲಿ ಮಾಡುತ್ತಿದ್ದೆ. ಈಗ ಮುಧೋಳ ನಗರದ ತರಕಾರಿ ಮಾರುಕಟ್ಟೆಯಲ್ಲಿ ಚೀಲ ಹೊತ್ತು ಹಮಾಲಿ ಮಾಡುತ್ತೇನೆ. ದಿನಕ್ಕೆ 200ರೂ ಬರುತ್ತದೆ. ಅದರಲ್ಲೇ ಕುಟುಂಬಕ್ಕೆ ನೆರವಾಗುತ್ತಿದ್ದೇನೆ. ಇನ್ನು ಕುಸ್ತಿ ಅಕಾಡೆಮಿ ತೆರೆಯುವ ಮಹದಾಸೆಯಿದ್ದು, ಅದರ ಮೂಲಕ ಬಡತನ ಮಕ್ಕಳಿಗೆ ಕುಸ್ತಿ ತರಬೇತಿ ಕೊಡವ ಆಸೆ ಇದೆ. ಇದಕ್ಕೆ ಕರ್ನಾಟಕದಲ್ಲಿ ಎಲ್ಲೇ ಭೂಮಿ ಕೊಟ್ಟರೂ ಕುಸ್ತಿ ಅಕಾಡೆಮಿ ತೆರೆದು ತರಬೇತಿ ಕೊಡುತ್ತೇನೆ” ಎಂದು ಅಪ್ಪಾಜಿ ತೇರದಾಳ ತಿಳಿಸಿದರು.

ಪಂಜಾಬ್, ಹರಿಯಾಣಾ ಸೇರಿದಂತೆ ಅನೇಕ ಕಡೆ ಕುಸ್ತಿ ತರಬೇತಿ ನೀಡಿರುವ ಇವರು, ಮಹಿಳಾ ಕುಸ್ತಿಪಟುಗಳಾದ ಗೀತಾ ಪೊಗಟ್, ವಿನಿಶಾ ಪೋಗಟ್ ಅವರ ಶಿಷ್ಯಂದಿರಿಗೂ ತರಬೇತಿ ನೀಡಿದ್ದಾರೆ.

ಅಮೀರ ಖಾನ್ ನಟನೆಯ ದಂಗಲ್​ಗೂ ಕುಸ್ತಿ ಹೇಳಿಕೊಡಲು ಸರ್ಪಕ

ಇನ್ನು ಅಮೀರ್ ಖಾನ್ ಅವರ ದಂಗಲ್ ಚಿತ್ರಕ್ಕೆ ಕುಸ್ತಿ ತರಬೇತಿಗಾಗಿ ಅಪ್ಪಾಜಿ ಅವರನ್ನು ಸಿನಿಮಾ ತಂಡ ಸಂಪರ್ಕಿಸಿತ್ತು. ಆದರೆ ಇವರು ತಮ್ಮ ಗರಡಿಯಲ್ಲಿ ಬೆಳೆದ ಕೆಲ ಕುಸ್ತಿ ತರಬೇತಿದಾರರನ್ನು, ಬೇರೆಯವರನ್ನು ಕಳಿಸಿಕೊಟ್ಟಿದ್ರಂತೆ.

ನನ್ನ ಕುಸ್ತಿ ಸಾಧನೆ ಹಾಗೂ ನನ್ನ ಕಥೆಯನ್ನು ಕೇಳಿ ಅನೇಕ ಜನರು ಸಂಘ ಸಂಸ್ಥೆಗಳು ನನಗೆ ತಮ್ಮಿಂದ ಆದಷ್ಟು ಸಹಾಯವನ್ನು ಮಾಡಿದ್ದಾರೆ. ಇದರಿಂದ ನಾ ಎಲ್ಲ ಜನರಿಗೂ ಕೂಡ ಚಿರ ಋಣಿಯಾಗಿದ್ದೇನೆ ಎಂದು ಅಪ್ಪಾಜಿಯವರು ಎಲ್ಲರನ್ನು ಸ್ಮರಿಸುತ್ತಾರೆ.

ಒಟ್ಟಿನಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮ ಹೆಸರನ್ನು ಗಳಿಸಿದಂತಹ ಪ್ರಸಿದ್ಧ ಕುಸ್ತಿಪಟುವಿನ ಪರಿಸ್ಥಿತಿ ನೋಡಿದ್ರೆ ನಿಜವಾಗಲೂ ಕೂಡ ಎಲ್ಲರಿಗೂ ಬೇಸರವಾಗುತ್ತದೆ. ಇಂದು ಎಷ್ಟೋ ಜನ ಕುಸ್ತಿಪಟುಗಳು ಕುಸ್ತಿಯಲ್ಲಿ ತಮ್ಮ ಶಕ್ರಿ ಪ್ರದರ್ಶಿಸಿ ಎಷ್ಟೋ ಜಾಹಿರಾತುಗಳು ಹಾಗೂ ವಿವಿಧ ಮೂಲಗಳಿಂದ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಆದರೆ ಅಪ್ಪಾಸಿಯವರು ಮಾತ್ರ ಇಂದಿಗೂ ತಮ್ಮ ಜೀವನಕ್ಕಾಗಿ ಹಮಾಲಿ ಕೆಲಸ ಮಾಡುತ್ತ ಬದುಕುತ್ತಿರುವುದು ನಿಜವಾಗಲೂ ವಿಷಾಧಕರ ಸಂಗತಿ.  ಸರಕಾರ ಇವರ ಬೇಡಿಕೆಯಂತೆ ಕುಸ್ತಿ ಅಕಾಡೆಮಿಗೆ ಭೂಮಿ‌ಕೊಡುವ ಕಾರ್ಯ ಆಗಬೇಕಾಗಿದೆ. ಇವರಿಗೆ ಜನರು ತನುಮನ ಧನ ಸಹಾಯವನ್ನು ಮಾಡಿ ಶಕ್ತಿ ತುಂಬಬೇಕಾಗಿದೆ.

ಬಾಗಲಕೋಟೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:51 pm, Mon, 25 September 23

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ