Bulb art: ಜಮಖಂಡಿ ಗ್ರಾಮದ ವಿಜಯ್ ಪವಾರ ಅಪರೂಪದ ಕಲಾವಿದ: ಹಳೆಯ ಬಲ್ಬ್ ‌ಗಳಲ್ಲಿ ಕಲೆಯನ್ನು ಅರಳಿಸಿದ್ದಾನೆ! ನೀವೂ ನೋಡಿ

Light Bulb Artist,: ಜಮಖಂಡಿ ತಾಲ್ಲೂಕಿನ ವಿಜಯ್ ಸುಟ್ಟ ಬಲ್ಬ್ ಗಳಲ್ಲಿ ಅದ್ಭುತ ಲೋಕವನ್ನೇ ಸೃಷ್ಟಿಸಿದ್ದಾರೆ. ೬೦,೨೦೦ ವೋಲ್ಟ್ ಬಲ್ಬ್ ಗಳಲ್ಲಿ ಸುಂದರ ಗಣೇಶನೂರ್ತಿ ರಚಿಸಿದ್ದಾರೆ. ಜೊತೆಗೆ ತಾಜ ಮಹಲ್, ಗೋಳಗುಮ್ಮಟ, ವಿಧಾನಸೌಧ, ಕೂಡಲಸಂಗಮ, ಆಲಮಟ್ಟಿ ಜಲಾಶಯ, ಜಮಖಂಡಿ ಅರಮನೆ, ಶಿವಲಿಂಗ ಸೇರಿದಂತೆ ಅನೇಕ ಕಲಾಕೃತಿ ಬಿಡಿಸಿ ಒಟ್ಟು ಐದು ಬಾರಿ ಲಿಮ್ಕಾ ಅವಾರ್ಡ್ ಪಡೆದಿದ್ದಾರೆ.

ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on: Sep 25, 2023 | 11:29 AM

ಕಲೆ ಅನ್ನೋದು ಎಲ್ಲರಿಗೂ ಒಲಿಯೋದಲ್ಲ.ಅದಕ್ಕೆ ಆರಾಧನೆ ಬೇಕು,ಆದರ ಬೇಕು ಆಸಕ್ತಿ ಬೇಕು.ಕಲೆ‌ ಮೇಲೆ ಪ್ರೀತಿ ಇದ್ದರೆ ಎಲ್ಲಿ ಬೇಕಾದರೂ ಕಲೆಯನ್ನು ಅರಳಿಸಬಹುದು.ಇಲ್ಲೊಬ್ಬ ಕಲಾವಿದ ಮನೆ ಬೆಳಗುತ್ತಿದ್ದ ಹಳೆ ಬಲ್ಬ್ ‌ಗಳಲ್ಲಿ ಕಲೆಯನ್ನು ಅರಳಿಸಿದ್ದಾನೆ.ತುಂಬಾನೆ ಅಪರೂಪದ ಈ ಕಲೆ ಎಲ್ಲರ ಕಣ್ಮನ ಸೆಳೆಯುತ್ತಿದೆ.

1 / 9
 ಚಿಕ್ಕ ಚಿಕ್ಕದಾದ ಬಲ್ಬ್ ಗಳು ಬಲ್ಬ್ ಗಳಲ್ಲಿ ಕಣ್ಮನ ಸೆಳೆಯುವ ಕಲಾಕೃತಿಗಳು,ಒಂದಕ್ಕಿಂತ ‌ಒಂದು ನೋಡುವಂತಹ ಬಣ್ಣ ಬಣ್ಣದ ಕಲಾಹಂದರ.ಎಲ್ಲವೂ ಬಲ್ಬ್ ಗಳಲ್ಲಿ ಎಂಬುದೇ ವಿಶೇಷ.

2 / 9
ವಿಜಯ್  ಅವರು ಸುಟ್ಟ ಬಲ್ಬ್ ಗಳಲ್ಲಿ ಅದ್ಭುತ ಲೋಕವನ್ನೇ ಸೃಷ್ಟಿಸಿದ್ದಾರೆ.೬೦,೨೦೦ ವೋಲ್ಟ್ ಬಲ್ಬ್ ಗಳಲ್ಲಿ ಸುಂದರ ಗಣೇಶನೂರ್ತಿ ರಚಿಸಿದ್ದಾರೆ. ಜೊತೆಗೆ ತಾಜ ಮಹಲ್, ಗೋಳಗುಮ್ಮಟ,ವಿಧಾನಸೌಧ,ಕೂಡಲಸಂಗಮ,ಆಲಮಟ್ಟಿ ಜಲಾಶಯ,ಜಮಖಂಡಿ ಅರಮನೆ,ಶಿವಲಿಂಗ, ಎತ್ತಿನಗಾಡಿ,ಕಂಪ್ಯೂಟರ್ ಕ್ಯಾಲ್ಕುಲೇಟರ್, ಸೇರಿದಂತೆ ಅನೇಕ ಕಲಾಕೃತಿ ಬಿಡಿಸಿ ಒಟ್ಟು ಐದು ಬಾರಿ ಲಿಮ್ಕಾ ಅವಾರ್ಡ್ ಪಡೆದು ಸಾಧನೆ ಮಾಡಿದ್ದಾರೆ.

3 / 9
ಇಂತಹ ವಿಶೇಷ ಪ್ರತಿಭೆ ಇರೋದು ಈ ಕಲಾವಿದಲ್ಲಿ.ಹೆಸರು ವಿಜಯ್ ಪವಾರ ಬಾಗಲಕೋಟೆ ‌ಜಿಲ್ಲೆ ಜಮಖಂಡಿ ತಾಲ್ಲೂಕಿನ ಹುನ್ನೂರು ಗ್ರಾಮದ ನಿವಾಸಿ.

4 / 9
ಬಾಟಲ್‌ನಲ್ಲಿ ಎತ್ತಿನ ಗಾಡಿ ಬಿಡಿಸಿದ ಒಬ್ಬ ಕಲಾವಿದನ ಕಂಡು ಇವರು ಬಲ್ಬ್ ನಲ್ಲಿ ಯಾಕೆ ಮಾಡಬಾರದು ಅಂತ ಇಂತಹ ಸಾಹಸಕ್ಕೆ ಕೈ ಹಾಕಿದರು.ಮೊದಲು ಬಲ್ಬ್ ‌ನಲ್ಲಿ ಎತ್ತಿನ ಗಾಡಿ ಕಲಾಕೃತಿ ‌ರಚಿಸಿ ಇಂದು ೨೦೦ ಕ್ಕೂ ಅಧಿಕ ಬಲ್ಬ್ ‌ನಲ್ಲೇ ಕಲಾಕೃತಿ ರಚಿಸಿದ್ದಾರೆ.

5 / 9
ವಿಜಯ ಈ ಕಲೆಯನ್ನು ತಾವು ಒಂಬತ್ತನೇ ತರಗತಿಯಲ್ಲಿದ್ದಾಗ ಆರಂಭಿಸಿದ್ದಾರೆ.ಅಂದಿನಿಂದ ಇಂದಿನವರೆಗೆ ಬಲ್ಬ್ ನಲ್ಲಿ ನೂರಾರು ಕಲಾಕೃತಿ ರಚನೆ ಮಾಡಿದ್ದಾರೆ. ವಿವಿಧ ಕಲಾವಿದರ‌ ಮಧ್ಯೆ ಬಲ್ಬ್ ನಲ್ಲಿ ಕಲೆಯನ್ನು ಅರಳಿಸುವ ಈ ಕಲಾವಿದನ ಕಾರ್ಯ ಶ್ಲಾಘನೀಯ.

6 / 9
ಇದೊಂದು ಸೂಕ್ಷ್ಮ ಕಲೆಯಾಗಿದ್ದು ಇದಕ್ಕೆ ಬಹಳ ತಾಳ್ಮೆ ಬೇಕು.ಏಕಾಗ್ರತೆ ಬೇಕಾಗುತ್ತದೆ.ಅಂದಾಗ ಮಾತ್ರ ಇಂತಹ ಸೂಕ್ಷ್ಮ ಕಲೆ‌ ಹೊರ ಬರೋದಕ್ಕೆ ಸಾಧ್ಯ.ವಿಜಯ್ ಅವರು ದಪ್ಪನ ಹಾಳೆ,ಪೆವಿಕಾಲ್,ಪೇಂಟ್,ತಂತಿ,ಮೇಣ ಬಳಸಿ ಇಂತಹ ಕಲಾಕೃತ ರಚನೆ ಮಾಡುತ್ತಾರೆ.

7 / 9
ಈ ರೀತಿ ಬಲ್ಬ್ ನಲ್ಲಿ ವಿಭಿನ್ನ ಮಾದರಿಯಲ್ಲಿ ಕಲಾಕೃತಿ ರಚಿಸುವರು ಇವರು ಒಬ್ಬರೇ ಎನ್ನೋದು ಗಮನಿಸಬೇಕಾದ ಅಂಶ.ಈ ಕಲೆ‌ ಗುರುತಿಸಿ ಇವರಿಗೆ ಕಲಾ ಅಪರಂಜಿ,ಚಾಣುಕ್ಯ ವಿಕ್ರಮಾದಿತ್ಯ,ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸಿಕ್ಕಿವೆ.

8 / 9
ಆದರೆ‌ ಈ ಬಡ ಕಲಾವಿದನಿಗೆ ಇದರಿಂದ ಹೊಟ್ಟೆ ತುಂಬೋದಿಲ್ಲ.ಪೊಟೊಗ್ರಫಿ ಜೊತೆಗೆ ಹವ್ಯಾಸವಾಗಿ ಇದನ್ನು ಮಾಡುತ್ತಿದ್ದಾನೆ.ಇವರ ಈ ಬಲ್ಬ್ ಕಲೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಇಂತಹ ಕಲಾಕೃತಿಗಳನ್ನು ಇವರಿಂದ ಜನರು ಖರೀಧಿಸಬೇಕು ,ಖರೀಧಿಸಿ ಕಾರ್ಯಕ್ರಮಗಳಲ್ಲಿ ಉಡುಗೊರೆ ಕೊಡುವಂತಾಗಬೇಕು. ಆಗ ಕಲಾವಿದರಿಗೂ ಧನಸಹಾಯ ಆಗುತ್ತದೆ ಜೊತೆಗೆ ಎಲ್ಲರೂ ಇಂತಹ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಅಂತಾರೆ  ಇವರ ಕಲೆ ನೋಡಿದವರು.

9 / 9
Follow us
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ

ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು

ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ

ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್

ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು