ಗುಜರಾತ್​ನಂತೆ ಕರ್ನಾಟಕದಲ್ಲೂ ಹಳಬರನ್ನು ಕೈಬಿಡುವ ಮಾತು ಕೇಳಿಬರುತ್ತಿದೆ ಎಂದ ಭೈರತಿ ಬಸವರಾಜ್

| Updated By: ವಿವೇಕ ಬಿರಾದಾರ

Updated on: Dec 09, 2022 | 5:52 PM

ಗುಜರಾತ್​ನಂತೆ ರಾಜ್ಯದಲ್ಲೂ ಹಳಬರನ್ನು ಕೈ ಬಿಟ್ಟು ಹೊಸಬರಿಗೆ ಮಣೆ ಹಾಲು ಬಿಜೆಪಿ ಹೈ ಕಮಾಂಡ ಮುಂದಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಗುಜರಾತ್​ನಂತೆ ಕರ್ನಾಟಕದಲ್ಲೂ ಹಳಬರನ್ನು ಕೈಬಿಡುವ ಮಾತು ಕೇಳಿಬರುತ್ತಿದೆ ಎಂದ ಭೈರತಿ ಬಸವರಾಜ್
ಸಚಿವ ಭೈರತಿ ಬಸವರಾಜ
Follow us on

ಬಾಗಲಕೋಟೆ: ಬಿಜೆಪಿ (BJP) ಹಲವು ಹೊಸ ಪ್ರಯತ್ನಗಳನ್ನು ಮಾಡಿ ಯಶಸ್ಸು ಕಾಣುತ್ತಿದೆ. ತನ್ನ ಸರ್ಕಾರದಲ್ಲಿ ಅಧಿಕಾರ ಹಿಡಿಯಲು ನಾಯಕರಿಗೆ ವಯೋಮಿತಿ ನಿಗದಿ ಮಾಡಿ ಶಾಕ್​ ನೀಡಿತ್ತು. ಹಾಗೇ ಗುಜರಾತ್​​ನಲ್ಲಿ (Gujarat) ಹಾಲಿ ಸಚಿವರಿಗೆ ಮತ್ತು ಶಾಸಕರಿಗೆ ಈ ಭಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಕೇಟ್​​ ನೀಡಿದೆ ಹೊಸ ಪ್ರಯೋಗಕ್ಕೆ ಕೈ ಹಾಕಿ ಯಶಸ್ಸು ಕಂಡಿತು. ಗುಜರಾತ್​ನ ಹಿಂದಿನ ದಾಖಲೆಗಳನ್ನು ಸರಗಟ್ಟಿ ಹೆಚ್ಚು ಸ್ಥಾನದಲ್ಲಿ ಗೆದು ಬೀಗುತ್ತಿದೆ. ಇದೇ ರೀತಿಯಾಗಿ ರಾಜ್ಯದಲ್ಲೂ ಪ್ರಯೋಗ ಮಾಡಲು ಬಿಜೆಪಿ ಕೈ ಕಮಾಂಡ್​​ ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ (Byrati Basavaraj) ಮಾತನಾಡಿ ಹೌದು ಅದೇ ರೀತಿ ಮಾಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ ಎಂದು ಹೇಳುವ ಮೂಲಕ ಹೊಸಬರಿಗೆ ಮಣೆ ಹಾಕುವ ಸುಳಿವು ನೀಡಿದ್ದಾರೆ.

ಇಳಕಲ್​ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಯಾವ ರೀತಿ ಪರಿಣಾಮಕಾರಿಯಾಗಿ ಮಾಡುತ್ತಾರೋ ನೋಡಬೇಕು. ಈ ಎಲ್ಲದರ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮರಳಿ ಕಾಂಗ್ರೆಸ್‌ ಸೇರಲು ವಿಶ್ವನಾಥ್ ತೆರೆಮರೆಯ ಕಸರತ್ತು: ಖರ್ಗೆ, ಸಿದ್ದು ಬಳಿಕ ಡಿಕೆಶಿ ಭೇಟಿಯಾದ ಹಳ್ಳಿಹಕ್ಕಿ!

ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ

ಗುಜರಾತ್​​ ಫಲಿತಾಂಶ ರಾಜ್ಯದಲ್ಲಿ ಪ್ರಭಾವ ಬೀರಲ್ಲವೆಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಏನೇ ಹೇಳಿದರೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಬಸ್​ ಯಾತ್ರೆಗೆ ಮುಹೂರ್ತ ಫಿಕ್ಸ್: ಬಸವಕಲ್ಯಾಣದಿಂದ ಆರಂಭ

ಪ್ರಧಾನಿ ಮೋದಿ ಈಗ ವಿಶ್ವನಾಯಕರಾಗಿ ಹೊರಹೊಮ್ಮಿದ್ದಾರೆ. ಅಮೆರಿಕ ಅಧ್ಯಕ್ಷರು ಕೂಡ ಮೋದಿಗೆ ಸೆಲ್ಯೂಟ್ ಮಾಡುತ್ತಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಅಭಿವೃದ್ಧಿಗೆ ಮೋದಿ ಶ್ರಮಿಸುತ್ತಿದ್ದಾರೆ. ಕೊರೊನಾ ವೇಳೆ ಲಸಿಕೆ ನೀಡಿ ದೇಶದ ಜನರನ್ನು ರಕ್ಷಿಸಿದ್ದಾರೆ. ಇವತ್ತು ಅದು ಜಾಸ್ತಿ, ಇದು ಜಾಸ್ತಿ ಆಗಿದೆ ಎಂದು ಹೇಳಬಹುದು, ಅದರೆ ಅದೆಲ್ಲಾ ಮುಖ್ಯವಲ್ಲ, ದೇಶದ ಸುಭದ್ರತೆ ನಮಗೆ ಮುಖ್ಯ ಎಂದರು.

ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ತೀವ್ರ ಹಿನ್ನಡೆಯಾಗಿದೆ

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೋತಿರುವ ವಿಚಾರವಾಗಿ ಹುನಗುಂದ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಒಂದು ಸಂಪ್ರದಾಯ ಇದೆ. ಒಂದು ಬಾರಿ ಆಯ್ಕೆಯಾದವರನ್ನು ಮತ್ತೊಮ್ಮೆ ಆಯ್ಕೆ ಮಾಡಲ್ಲ. ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ತೀವ್ರ ಹಿನ್ನಡೆಯಾಗಿದೆ. ಬಿಜೆಪಿ ಅಂತಹ ಸ್ಥಿತಿಗೆ ಬಂದಿಲ್ಲ ಎಂದು ಸಮರ್ಥಿಸಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:47 pm, Fri, 9 December 22