ಬಾಗಲಕೋಟೆಯ ತಹಶೀಲ್ದಾರ್ ಕಚೇರಿಯಲ್ಲಿ ಪಹಣಿ ತಿದ್ದುಪಡಿ ಪ್ರಕರಣ: ತಹಶಿಲ್ದಾರ್ ಮತ್ತು ಪಿಎಸ್ಐ ವಿರುದ್ಧ ಪ್ರತಿದೂರು ನೀಡಿದ ಮಹಿಳಾ ಶಿರಸ್ತೇದಾರ್
ಜಿಲ್ಲೆಯ ತಹಶೀಲ್ದಾರ್ ಕಚೇರಿಯಲ್ಲಿ ಪಹಣಿ ತಿದ್ದುಪಡಿ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮಹಿಳಾ ಶಿರಸ್ತೇದಾರ್ ಶಾಂತಾ ತನ್ನ ಮೇಲೆ ಹೊರಸಿದ ಆರೋಪವನ್ನು ನಿರಾಕರಿಸಿ ಬಾಗಲಕೋಟೆಯ ನವನಗರ ಮಹಿಳಾ ಪೋಲಿಸ ಠಾಣೆಯಲ್ಲಿ ತಹಶಿಲ್ದಾರ್ ಮತ್ತು ಪಿಎಸ್ಐ ವಿರುದ್ಧ ದೂರು ದಾಖಲಿಸಿದ್ದಾರೆ.
ಬಾಗಲಕೋಟೆ: ಬಾಗಲಕೋಟೆಯ (Bagalakote) ತಹಶೀಲ್ದಾರ್ ಕಚೇರಿಯಲ್ಲಿ ಪಹಣಿ ತಿದ್ದುಪಡಿ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮಹಿಳಾ ಶಿರಸ್ತೇದಾರ್ ಶಾಂತಾ ವಿರುದ್ಧ ಆರೋಪ ಕೇಳಿ ಬಂದಿದ್ದು, ಶಾಂತ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ತನ್ನ ಮೇಲೆ ಹೊರಸಿದ ಆರೋಪವನ್ನು ನಿರಾಕರಿಸಿ ಬಾಗಲಕೋಟೆಯ ನವನಗರ ಮಹಿಳಾ ಪೋಲಿಸ ಠಾಣೆಯಲ್ಲಿ ತಹಶಿಲ್ದಾರ್ ಮತ್ತು ಪಿಎಸ್ಐ ವಿರುದ್ಧ ದೂರು ದಾಖಲಿಸಿದ್ದಾರೆ. ತಹಶಿಲ್ದಾರ್ ಗುರುಸಿದ್ದಯ್ಯ ಹಿರೇಮಠ ವಿರುದ್ಧ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ. ಅವರು ನನ್ನ ಮೇಲಿನ ದ್ವೇಷದಿಂದ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿರುವ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ಪಠ್ಯದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ?- ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪ್ರಶ್ನೆ
ಮಹಿಳಾ ಶಿರಸ್ತೇದಾರ್ ಶಾಂತಾ ಸುಳ್ಳು ದಾಖಲೆ ತಿದ್ದುಪಡಿ ಆರೋಪದ ಅಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಸದ್ಯ ಬಾಗಲಕೋಟೆ ತಹಶೀಲ್ದಾರ್ ವಿರುದ್ಧ ಮಹಿಳಾ ಶಿರಸ್ತೇದಾರ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಮೇಲಿನ ದ್ವೇಷದಿಂದ ಸುಳ್ಳು ಪ್ರಕರಣ ದಾಖಲಿಸಿ ಸಿಕ್ಕಿಸುವ ಪ್ರಯತ್ನ ಮಾಡಿದ್ದಾರೆ. ನನಗೆ ಸಂಬಂಧ ಇಲ್ಲದ ಕೆಲಸದಲ್ಲಿ ನನ್ನ ಮೇಲೆ ಸುಳ್ಳು ಆರೋಪ ಮಾಡಿ ಎಫ್ ಐ ಆರ್ ದಾಖಲಿಸಿದ್ದಾರೆ. ಅಭಿಲೇಖಾಲಯದಲ್ಲಿ ಪಹಣಿ ತಿದ್ದುಪಡಿ ವಿಚಾರದಲ್ಲಿ ನನ್ನದೇನು ಪಾತ್ರವಿಲ್ಲ. ಆದರೂ ನನ್ನ ಮೇಲೆ ಕೇಸ್ ದಾಖಲಿಸಲಾಗಿದೆ. ತಮ್ಮ ವಿರುದ್ಧ ಎಫ್ ಐ ಆರ್ ದಾಖಲಾಗಿರೋ ಹಿಂದೆ ಷಡ್ಯಂತ್ರವಿದೆ ಎಂದು ಶಾಂತಾ ಕುಟುಂಬ ಸದಸ್ಯರೊಂದಿಗೆ ಪೊಲೀಸ್ ಠಾಣೆ ಎದುರು ಕಣ್ಣೀರು ಹಾಕಿದ್ದಾರೆ.
ಜಗಳೂರು ತಾಲೂಕಿನ ನರೇನಹಳ್ಳಿಯ ಸಿಆರ್ಪಿಎಫ್ ಯೋಧ ಸಾವು
ದಾವಣಗೆರೆ: ಮಹಾರಾಷ್ಟ್ರ ದ ನಾಗಪುರನಲ್ಲಿ ಬಡಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಆರ್ಪಿಎಫ್ ಯೋಧ ಎನ್. ಜೆ.ಬಾಬು(48) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂದು ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ನರೇನಹಳ್ಳಿಗೆ ಪಾರ್ಥೀವ ಶರೀರ ಆಗಮಿಸಲಿದೆ. ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನು ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ: ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ಎಫ್ಐಆರ್ ದಾಖಲು
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಬು, ಇದೇ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರಿಯರು ಓರ್ವ ಪುತ್ರ ಹಾಗು ಅಪಾರ ಬಂಧುಗಳನ್ನ ಬಾಬು ಅಗಲಿದ್ದಾರೆ. ಗ್ರಾಮಕ್ಕೆ ಸಿಆರ್ ಪಿಎಫ್ ಯೋಧರು ಜಗಳೂರು ತಹಶಿಲ್ದಾರ ಹಾಗೂ ಪೊಲೀಸ್ ಅಧಿಕಾರಿಗಳ ಆಗಮಸಿದ್ದು, ಅಂತಿಮ ದರ್ಶನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಅಳ್ನಾವರ ಪಟ್ಟಣದಲ್ಲಿ ಬೀಗ ಮುರಿದು ಅಂಗಡಿಗಳ ಕಳ್ಳತನ
ಧಾರವಾಡ: ಅಳ್ನಾವರ ಪಟ್ಟಣದಲ್ಲಿ ಬೀಗ ಮುರಿದು ಅಂಗಡಿಗಳನ್ನು ಕಳ್ಳತನ ಮಾಡಿರೊ ಘಟನೆ ನಡೆದಿದೆ. ಬಟ್ಟೆ ಮತ್ತು ಔಷಧ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಸತೀಶ ತಿಗಡೊಳ್ಳಿ ಮತ್ತು ಭೂಮಣ್ಣವರ ಅನ್ನೋರ ಅಂಗಡಿಗಳು ಕಳ್ಳತನವಾಗಿವೆ. ಸ್ಥಳಕ್ಕೆ ಅಳ್ನಾವರ ಪೊಲೀಸರು ಭೇಟಿ ನೀಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲಿಸುತ್ತಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Sat, 28 May 22