ಬಾಗಲಕೋಟೆ: ಮುಧೋಳ ಕ್ಷೇತ್ರದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಚಿವರ ವಿರುದ್ಧ ವ್ಯಂಗ್ಯಭರಿತ ಪೋಸ್ಟ್ ಹಾಕಿರುವ ರೈತರು (Sugar cane growers) ಎಲ್ಲಿರುವರೋ ಗೋವಿಂದ..! ಬಾರೋ ಮನೆಗೆ ಗೋವಿಂದ..! ಮುಧೋಳ ಶಾಸಕರು (Govind Karjol) ಕಾಣೆಯಾಗಿದ್ದಾರೆ ಎಂದು ವ್ಯಂಗ್ಯಭರಿತ ಪೋಸ್ಟ್ ವಾಟ್ಸಾಪ್ ಗ್ರೂಪ್ನಲ್ಲಿ (social media) ಹರಿದಾಡುತ್ತಿದೆ.
ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದಲ್ಲಿ ಕಳೆದೆರಡು ವಾರಗಳಿಂದ ರೈತರು ನಿರಂತರ ಪ್ರತಿಭಟನೆ, ಧರಣಿ ನಡೆಯುತ್ತಿದ್ದಾರೆ. ಶಾಸಕರು ಮೌನವೇಕೆ! ಎಂಬ ತಲೆಬರಹದಲ್ಲಿ ವ್ಯಂಗ್ಯದ ಪೋಸ್ಟ್ಗಳು ಹರಿದಾಡುತ್ತಿವೆ. ಇನ್ನು ಕಬ್ಬು ಬೆಳೆಗಾರರ ಮತ್ತೊಂದು ಗುಂಪು ಕಾರ್ಖಾನೆಗಳನ್ನು ಓಪನ್ ಮಾಡಿಸುವಂತೆ ಹೋರಾಟ ಮಾಡ್ತಿದ್ದಾರೆ.
ಇದನ್ನೂ ಓದಿ: ರಾಜ್ಯದ ನೀರಾವರಿ ಯೋಜನೆಗಳ ಕುರಿತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆ ಪ್ರಲ್ಹಾದ್ ಜೋಶಿ ಮಹತ್ವದ ಮಾತುಕತೆ
ಇದನ್ನೂ ಓದಿ: ನಾಗಠಾಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಸಚಿವ ಗೋವಿಂದ ಕಾರಜೋಳ ಅಡ್ಡಿ: ಜಿಡಿಎಸ್ ಶಾಸಕ ದೇವಾನಂದ ಆರೋಪ