ಎಲ್ಲಾ ಅಸಮಾಧಾನ ಶಮನವಾಯ್ತು ಎನ್ನುವಷ್ಟರಲ್ಲೇ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿಗೆ ಶಾಕ್ ಕೊಟ್ಟ ವೀಣಾ!

ಇನ್ನೇನು ಬಂಡಾಯ, ಅಸಮಾಧಾನ ಎಲ್ಲವೂ ಸರಿ ಹೋಗಿದೆ ಅನ್ನುವಷ್ಟರಲ್ಲಿ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್​ಗೆ ಎರಡು ಬಿಗ್ ಶಾಕ್ ಎದುರಾಗಿದೆ. ಸಂಧಾನ ಆಯ್ತು ಎಲ್ಲವೂ ಸರಿ ಆಯ್ತು ಎನ್ನುವಾಗಲೇ ಬೆಂಗಳೂರಿನಿಂದಲೇ ವೀಣಾ ಕಾಶಪ್ಪನವರ್ ಶಾಕ್ ಕೊಟ್ಟಿದ್ದಾರೆ.

ಎಲ್ಲಾ ಅಸಮಾಧಾನ ಶಮನವಾಯ್ತು ಎನ್ನುವಷ್ಟರಲ್ಲೇ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿಗೆ ಶಾಕ್ ಕೊಟ್ಟ ವೀಣಾ!
ಸಂಯುಕ್ತ ಪಾಟೀಲ್, ವೀಣಾ ಕಾಶಪ್ಪನವರ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Apr 05, 2024 | 6:22 PM

ಬೆಂಗಳೂರು/ಬಾಗಲಕೋಟೆ, (ಏಪ್ರಿಲ್ 05): ಶಾಸಕ ವಿಜಯಾನಂದ್​ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ (veena kashappanavar )ಅವರಿಗೆ ಈ ಬಾರಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್(Bagalkot Loksabha congress ) ಟಿಕೆಟ್ ಕೈತಪ್ಪಿದೆ. ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್​ಗೆ ಟಿಕೆಟ್​ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ವೀಣಾ ಕಾಶಪ್ಪನವರ್, ಪ್ರಚಾರದಿಂದ ದೂರ ಉಳಿದಿದ್ದಾರೆ. ಇನ್ನು ಸಚಿವ ಶಿವಾನಂದ ಪಾಟೀಲ್ ಅವರು ಶಾಸಕ ವಿಜಯಾನಂದ ವಿಜಯಾನಂದ್​ ಕಾಶಪ್ಪನವರ್ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಇನ್ನು ವಿಜಯಾನಂದ್​ ಕಾಶಪ್ಪನವರ್ ಸಹ ಪ್ರಚಾರ ಸಭೆಯಲ್ಲೂ ಪಾಲ್ಗೊಂಡಿದ್ದರು. ಹೀಗಾಗಿ ಎಲ್ಲಾ ಸಂಧಾನವಾಗಿದ್ದು, ಅಸಮಾದಾನ ಶಮನವಾಗಿದೆ. ಎಲ್ಲರೂ ಒಂದಾಗಿದ್ದಾರೆ ಎನ್ನಲಾಗಿತ್ತು. ಆದ್ರೆ, ಇದೀಗ ಸ್ವತಃ ವೀಣಾ ಕಾಶಪ್ಪನವರ್ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

ವೀಣಾ ವಿಡಿಯೋ ಸಂದೇಶದಲ್ಲೇನಿದೆ?

ಕ್ಷೇತ್ರದ ಅಭಿಮಾನಿಗಳು, ಬೆಂಬಲಿಗರಿಗೆ ವಿಡಿಯೋ ಸಂದೇಶ ನೀಡಿರುವ ವೀಣಾ ಕಾಶಪ್ಪನವರ್, ನನ್ನ ಪತಿ ಶಾಸಕ ವಿಜಯಾನಂದ ಕಾಶಪ್ಪನವರ್, ಎಲ್ಲ ನಾಯಕರು ಸಂಯುಕ್ತಾ ಪರ ನಾನು ಪ್ರಚಾರಕ್ಕೆ ಹೋಗುತ್ತೇವೆಂದು ಹೇಳಿಕೆ ನೀಡಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ಸಚಿವ ಶಿವಾನಂದ ಪಾಟೀಲ್ ನಮ್ಮ ಇಳಕಲ್ ನಿವಾಸಕ್ಕೆ ಭೇಟಿ ನೀಡಿದ್ರು. ಭೇಟಿ ವೇಳೆ ಸಂಧಾನ ಸಭೆ ಯಶಸ್ವಿಯಾಗಿದೆ ಎಂದು ಸಚಿವರು ಹೇಳಿದ್ದಾರೆ. ನಿವಾಸದಲ್ಲಿ ಸಂಧಾನ ಸಭೆ ನಡೆದಿಲ್ಲ, ಅದು ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ವೀಣಾ ಕಾಶಪ್ಪನವರ್ ಬಂಡಾಯ ಸಾರಿದ್ದಾರೆ.

ನಾನು ಅನಾರೋಗ್ಯದ ಕಾರಣ ಬೆಂಗಳೂರಿನಲ್ಲಿದ್ದೇನೆ. ಇವತ್ತಿಗೂ ನನ್ನದು ಸ್ವಾಭಿಮಾನದ ನಿಲುವು. ಬಾಗಲಕೋಟೆ ಜಿಲ್ಲೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರನ್ನು ಭೇಟಿ ಮಾಡುತ್ತೇನೆ. ಜನರ ಅಭಿಪ್ರಾಯ ಸಂಗ್ರಹಿಸಿ ನಂತರ ನನ್ನ ನಿಲುವು ತಿಳಿಸುತ್ತೇನೆ. ಇನ್ನು ನಾಳೆ(ಏಪ್ರಿಲ್ 06) ಬೆಂಬಲಿಗರ ಸಭೆ ಕರೆದಿದ್ದೇನೆ, ಅವರ ಅಭಿಪ್ರಾಯ ಕೇಳುತ್ತೇನೆ ಎಂದು ಹೇಳಿದ್ದಾರೆ.

ಸಂಯುಕ್ತ ಪಾಟೀಲ್ ಹಾಗೂ ವೀಣಾ ಕಾಶಪ್ಪನವರ್ ಜೊತೆಗೆ ಪ್ರಚಾರಕ್ಕೆ ಬರುತ್ತಾರೆ ಎಂದು ಈಗಾಗಲೇ ಹಲವಾರು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಅವರ ತಂದೆಯವರು ಹೇಳಿದ್ದು ಅದು ಸತ್ಯಕ್ಕೆ ದೂರವಾದದ್ದು. ಇನ್ನೂ ಕೂಡ ನನ್ನ ಅಸಮಾಧಾನ ಹಾಗೆ ಇದೆ. ಸ್ಪಷ್ಟವಾದ ನನ್ನ ಸ್ವಾಭಿಮಾನದ ನಿಲುವು ತಟಸ್ಥಳಾಗಿ ಉಳಿಯುವುದು ಅದು ಅಚಲವಾಗಿದೆ. ನನ್ನ ಮುಂದಿನ ನಿರ್ಧಾರ ತಿಳಿಸುವವರಿಗೆ ಈ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸುತ್ತೇನೆ ಎಂದು ವಿಡಿಯೋದಲ್ಲಿ ಸಂದೇಶದಲ್ಲಿ ಹೇಳಿದ್ದಾರೆ.

ಹಲವಾರು ಅಭಿಮಾನಿಗಳು ಕರೆ ಮಾಡುತ್ತಿದ್ದೀರಿ, ಅಭಿಪ್ರಾಯಗಳನ್ನ ನನ್ನೊಟ್ಟಿಗೆ ಹಂಚಿಕೊಳ್ಳುತ್ತಿದ್ದೀರಿ. ಸಾಕಷ್ಟು ಮಹಿಳೆಯರು ನನ್ನನ್ನ ಸಂಪರ್ಕಿಸಲು ಆಗಿಲ್ಲ ಎಂದು ನೋವು ಮಾಡಿಕೊಂಡಿದ್ದಾರೆ. ಎಲ್ಲರನ್ನು ಭೇಟಿ ಮಾಡುವ ಕೆಲಸವನ್ನ ನಾನು ಮಾಡುತ್ತೇನೆ. ಪಂಚಾಯತಿ ಮಟ್ಟದಲ್ಲಿ ಜನರನ್ನ ಭೇಟಿ ಮಾಡಿ ಅಭಿಪ್ರಾಯಗಳನ್ನು ಸಂಗ್ರಹ ಮಾಡಿ ಅದಾದ ಮೇಲೆ ನನ್ನ ನಿಲುವನ್ನು ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಂಧಾನಕ್ಕೆ ಒಪ್ಪಿಗೆ ನೀಡಿದ್ದ ಪತಿಗೆ ಶಾಕ್ ಕೊಟ್ರಾ ವೀಣಾ?

ಪತ್ನಿಗೆ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದ ವಿಜಯಾನಂದ ಕಾಶಪ್ಪನವರ್​ ಅವರಿಗೆ ಕಾಂಗ್ರೆಸ್ ಪ್ರಮುಖ ನಾಯಕರು ಕರೆ ಮಾಡಿ ಪಕ್ಷದ ಪರ ಕೆಲಸ ಮಾಡುವಂತೆ ಮನವೊಲಿಸಿದ್ದಾರೆ. ಅಲ್ಲದೇ ಖುದ್ದು ಸಚಿವ ಶಿವಾನಂದ ಪಾಟೀಲ್ ಅವರು ಅವರ ನಿವಾಸಕ್ಕೆ ಭೇಟಿ ನೀಡಿ ಪ್ರಚಾರ ಬರುವಂತೆ ಆಹ್ವಾನ ನೀಡಿದ್ದಾರೆ. ವಿಜಯಾನಂದ ಕಾಶಪ್ಪನವರ್ ಶಾಸಕರಾಗಿರುವುದರಿಂದ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ. ಹೀಗಾಗಿ ವಿಜಯಾನಂದ ಕಾಶಪ್ಪನವರ್ ಮೊನ್ನೆ ನಡೆದ ಕಾಂಗ್ರೆಸ್​ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದ್ರೆ, ಇದೀಗ ಪತ್ನಿ ವೀಣಾ ಕಾಶಪ್ಪನವರ್ ಅವರು ವಿಡಿಯೋ ಹೇಳಿಕೆ ನೀಡುವ ಮೂಲಕ ಪತಿ ಮತ್ತು ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್