ತರಕಾರಿ ರೇಟ್ ಗಗನಕ್ಕೆ ಏರಿದ ಬೆನ್ನಲ್ಲೇ ಇದೀಗ ವೀಳ್ಯ, ಕಪ್ಪು ಎಲೆ ರೇಟೂ ದುಬಾರಿ
ರಾಜ್ಯದ ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಈಗಾಗಲೆ ತರಕಾರಿ ಮತ್ತು ದಿನಸಿ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದೆ. ಅದರಲ್ಲಂತು ಟೊಮೇಟೊಗೆ ಚಿನ್ನದ ಬೆಲೆ ಬಂದಿದೆ. ಇದರ ಬೆನ್ನಲ್ಲೇ ಇದೀಗ ವೀಳ್ಯದ ಎಲೆ ಹಾಗೂ ಕಪ್ಪು ಎಲೆ ಬೆಲೆ ಕೂಡ ದುಬಾರಿಯಾಗಿದೆ.
ಬಾಗಲಕೋಟ: ರಾಜ್ಯದ ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಈಗಾಗಲೆ ತರಕಾರಿ (Vegitable) ಮತ್ತು ದಿನಸಿ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದೆ. ಅದರಲ್ಲಂತು ಟೊಮೇಟೊಗೆ (Tomato) ಚಿನ್ನದ ಬೆಲೆ ಬಂದಿದೆ. ಇದರ ಬೆನ್ನಲ್ಲೇ ಇದೀಗ ವೀಳ್ಯದೆಲೆ ಹಾಗೂ ಕಪ್ಪು ಎಲೆ ಬೆಲೆ ಕೂಡ ದುಬಾರಿಯಾಗಿದೆ. ಎಲೆ ಅಡಿಕೆ ತಿನ್ನುವವರು ಒಂದು ಎಲೆಯಲ್ಲಿ ಒಂದು ಸಾರಿ ಅರ್ಧ ಎಲೆ ಮಾತ್ರ ತಿನ್ನವಂತಹ ಪರಿಸ್ಥಿತಿ ಉದ್ಭವವಾಗಿದೆ.
ಮಳೆ ಕೊರತೆ ಇಳುವರಿ ಕಡಿಮೆ ಹಿನ್ನೆಲೆ ಎಲೆಗಳ ಬೆಲೆ ಏರಿಕೆಯಾಗಿದೆ. ಎಲೆ ಬೆಳೆಗಾರರ ಸಂಖ್ಯೆಯೂ ಕಡಿಮೆಯಾದ ಹಿನ್ನೆಲೆ ಬೆಲೆ ಏರಿಕೆಯಾಗಿದೆ. ಸದ್ಯ 12 ಸಾವಿರ ವೀಳ್ಯದೆಲೆಯ ಒಂದು ಬಂಡಲ್ ಬೆಲೆ 6 ಸಾವಿರಕ್ಕೆ ಏರಿಕೆಯಾಗಿದೆ. ತಿಂಗಳ ಹಿಂದೆ 2500 ರೂ. ಬೆಲೆ ಇತ್ತು. 6 ಸಾವಿರ ಎಲೆಗಳಿರುವ ಕಪ್ಪು ಎಲೆಗಳ ಒಂದು ಬಂಡಲ್ಗೆ 6 ಸಾವಿರ ರೂ. ಆಗಿದೆ. ತಿಂಗಳ ಹಿಂದೆ 3 ಸಾವಿರ ರೂ. ಬೆಲೆ ಇತ್ತು.
ಇದರಿಂದ ಗ್ರಾಹಕರು ಮಾರುಕಟ್ಟೆಯಲ್ಲಿ ನೂರು ಕಪ್ಪು ಎಲೆಯ ಒಂದು ಕಟ್ಗೆ 60 ರೂ. ಕೊಡಬೇಕು. ವೀಳ್ಯದೆಲೆ ನೂರರ ಕಟ್ಗೆ 40 ರೂ. ಈ ಮೊದಲಿಗಿಂತ ಎರಡು ಎಲೆಗಳ ನೂರರ ಕಟ್ ಬೆಲೆ 20-30 ರೂ. ಏರಿಕೆಯಾಗಿದೆ. ಬೆಲೆ ಏರಿದರೂ ಎಲೆ ಬೆಳೆಗಾರರಿಗೆ ಹೆಚ್ಚು ಅನುಕೂಲ ಇಲ್ಲ. ಇಳಿವರಿಯೇ ಹೆಚ್ಚಿಲ್ಲ ಇನ್ನು ಹೆಚ್ಚು ಲಾಭ ಎಲ್ಲಿ ಎಂದು ಬಾದಾಮಿ ಹಾಗೂ ಬದಾಮಿ ಸುತ್ತಲಿನ ಚೊಳಚಗುಡ್ಡ, ಹಿರೆನಸಬಿ ಗ್ರಾಮದ ಎಲೆ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Tomato: ಟೊಮೆಟೋ ಕಾಯಲೆಂದೇ ಬೌನ್ಸರ್ ನೇಮಿಸಿದ ತರಕಾರಿ ವ್ಯಾಪಾರಿ!
ಇನ್ನು ಬಾದಾಮಿ ಭಾಗದಲ್ಲಿ ಎಲೆ ಬೆಳೆಗಾರರ ಸಂಖ್ಯೆ ಕಡಿಮೆ ಆಗುತ್ತಿದೆ. ಮೊದಲು ಬಾದಾಮಿ ಭಾಗದಲ್ಲಿ 150 ಎಲೆ ತೋಟಗಳಿದ್ದವು. ಇದೀಗ 50 ತೋಟಗಳು ಮಾತ್ರ ಇದ್ದು, ಇದು ಕೂಡ ಎಲೆ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.
ರೈತರ ಟೊಮೇಟೊ ತೋಟದ ಮೇಲೆ ಕಳ್ಳರ ಕಣ್ಣು
ಚಿಕ್ಕಬಳ್ಳಾಪುರ: 14 ಕೆ.ಜಿ ಯ ಟೊಮೇಟೊ ಬಾಕ್ಸ್ ಬೆಲೆ 2000 ರೂಪಾಯಿ ಆಗಿದೆ. ಟೊಮ್ಯಾಟೊಗೆ ಚಿನ್ನದ ಬೆಲೆ ಹಿನ್ನಲೆ ರಾತ್ರೊ ರಾತ್ರಿ ಕಳ್ಳರು ಟೊಮೇಟೊ ಕೀಳುತ್ತಿದ್ದಾರೆ. ಟೊಮೇಟೊಗೆ ಇಷ್ಟೊಂದು ಡಿಮ್ಯಾಂಡ್ ಯಾವತ್ತು ಬಂದಿಲ್ಲ. ಬಕ್ರಿದ್ ಹಬ್ಬದ ಸಮಯದಲ್ಲೂ 14 ಕೆ.ಜಿ ಟೊಮೇಟೊ ಬಾಕ್ಸ್ 1600 ರೂಪಾಯಿ ಮಾರಾಟವಾಗಿತ್ತು ಎಂದು ಟೊಮೇಟೊ ಬೆಳಗಾರರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ