ಬಾಗಲಕೋಟೆ, ಆಗಸ್ಟ್ 8: ಪಶ್ಚಿಮಬಂಗಾಳದಲ್ಲಿ ಬಾಗಲಕೋಟೆ (Bagalkote) ಮೂಲದ ಯೋಧ (Yodha) ಹುತಾತ್ಮವಾಗಿರುವಂತಹ ಘಟನೆ ನಿನ್ನೆ ನಡೆದಿದೆ. ಉಮೇಶ್ ದಬಗಲ್(33) ಹುತಾತ್ಮವಾದ ಬಿಎಸ್‌ಎಫ್ ಯೋಧ. ಗುಂಡು ತಗುಲಿ ಉಮೇಶ್ ದಬಗಲ್ ಹುತಾತ್ಮರಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮದ ನಿವಾಸಿ. 13 ವರ್ಷದಿಂದ ಬಿಎಸ್‌ಎಫ್‌ನಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದರು. ನಾಳೆ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ತಲುಪಲಿದೆ.
ದಾವಣಗೆರೆ: ಹಂಪ್ಸ್ ತಪ್ಪಿಸಲು ಹೋಗಿ ನಿಂತಿದ್ದ ಬೈಕ್ಗಳ ಮೇಲೆ ಬಸ್ ನುಗ್ಗಿಸಿದ್ದು, ಕೂದಲೆಳೆ ಅಂತರದಲ್ಲಿ ಐದು ಜನ ಬೈಕ್ ಸವಾರರು ಪಾರಾಗಿರುವಂತಹ ಘಟನೆ ದಾವಣಗೆರೆ ಸಮೀಪದ ಬಾತಿ ಕೆರೆ ಬಳಿ ನಡೆದಿದೆ. ನಾಲ್ವರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್ ಅನುಮಾನಸ್ಪದ ಸಾವಿನ ಬೆನ್ನಲ್ಲೇ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯ ಆತ್ಮಹತ್ಯೆ
ಮಳೆ ಹಿನ್ನಲೆ ಮರದ ಕೆಳಗೆ ಬೈಕ್ ಸವಾರರು ನಿಂತಿದ್ದರು. ಈ ವೇಳೆ ಹಂಪ್ಸ್ ತಪ್ಪಿಸಲು ಹೋಗಿ ಪಕ್ಕದಲ್ಲಿ ನಿಂತಿದ್ದ ಬೈಕ್ ಸವಾರರ ಮೇಲೆ ಬಸ್ ನುಗ್ಗಿದೆ. ದಾವಣಗೆರೆಯಿಂದ ಹರಿಹರ ಮಾರ್ಗವಾಗಿ ಹುಬ್ಬಳಿ ಕಡೆ ಹೊರಟ್ಟಿದ್ದ ಕೆಎಸ್ಆರ್ಟಿಸಿ ಬಸ್ನಿಂದ ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಮೂರು ಬೈಕ್ಗಳು ನಜ್ಜುಗುಜ್ಜಾಗಿವೆ.
ಧಾರವಾಡ: ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ ಆಗಿರುವಂತಹ ಘಟನೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಜಿಲ್ಲೆಯ ಕುಂದಗೋಳ ತಾಲೂಕಿನ ವಿಠಲಾಪೂರ ನಿವಾಸಿ ಮಂಜುಳಾ ಚಂದ್ರಗೌಡ ಹುತ್ತನಗೌಡರ ಶವವಾಗಿ ಪತ್ತೆಯಾಗಿರುವ ಮಹಿಳೆ.
ಇದನ್ನೂ ಓದಿ: ಕಾಲೇಜು ಯುವತಿಯರೇ ಎಚ್ಚರ! ಸ್ನೇಹಿತನ ಜೊತೆಗಿನ ಫೋಟೋ ಹಿಡಿದು ಯುವತಿಗೆ ಬ್ಲಾಕ್ ಮೇಲ್ ಮಾಡಿದ ಸ್ನೇಹಿತ ಅರೆಸ್ಟ್
ಜುಲೈ 29ರಂದು ಮನೆಯಿಂದ ಮಹಿಳೆ ಕಾಣೆಯಾಗಿದ್ದರು. ಇದೀಗ ಹಳ್ಳದಲ್ಲಿ ಶವವಾಗಿ ಪತ್ತೆ ಆಗಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.