ಇಟ್ಟಿಗೆ ಮೇಲೆ ಎರಡು ನಿಮಿಷ ಶೀರ್ಷಾಸನ ಮಾಡಿ ದಾಖಲೆ ಬರೆದ ಬಾಗಲಕೋಟೆ ಯುವಕ
ದಾಖಲೆ ಬರೆದ ಯುವಕನ ಹೆಸರು ದಯಾನಂದ ಕಾಡಪ್ಪ ಅಂಕಲಗಿ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹೆಬ್ಬಾಳ ಗ್ರಾಮದ ನಿವಾಸಿ. ಸದ್ಯ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಯೋಗದ ಬಗ್ಗೆ ಅಪಾರ ಆಸಕ್ತಿ ಇಟ್ಟುಕೊಂಡಿರುವ ಯುವಕ, ಕಳೆದ ಐದಾರು ವರ್ಷದಿಂದ ಯೋಗ ಅಭ್ಯಾಸ ಮಾಡುತ್ತಿದ್ದಾನೆ.
ಬಾಗಲಕೋಟೆ: ಆರೋಗ್ಯ ವೃದ್ಧಿಗೆ ಯೋಗ ಒಂದು ದಿವ್ಯ ಔಷಧಿ ಎನ್ನುವುದು ಇಡೀ ವಿಶ್ವವೇ ಒಪ್ಪಿಕೊಂಡಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ಸಹ ಯೋಗದ ಕಡೆಗೆ ಹೆಚ್ಚೆಚ್ಚು ಆಕರ್ಷಿತರಾಗಿದ್ದಾರೆ. ಜೊತೆಗೆ ಯೋಗದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇದೀಗ ಹಳ್ಳಿಯ ಯೋಗಪಟು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಬರೆದಿದ್ದಾನೆ. 19 ವರ್ಷದ ಯುವಕ ಎಲ್ಲರೂ ಅಚ್ಚರಿ ಪಡುವಂತೆ ಇಟ್ಟಿಗೆ ಮೇಲೆ ತಲೆ ಇಟ್ಟು ಕಾಲು ಮೇಲೆ ಮಾಡಿ ಎರಡು ನಿಮಿಷಕ್ಕೂ ಹೆಚ್ಚು ಕಾಲ ಶೀರ್ಷಾಸನ ಮಾಡುತ್ತಾನೆ.
ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಬರೆದ ಯುವಕನ ಹೆಸರು ದಯಾನಂದ ಕಾಡಪ್ಪ ಅಂಕಲಗಿ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹೆಬ್ಬಾಳ ಗ್ರಾಮದ ನಿವಾಸಿ. ಸದ್ಯ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಯೋಗದ ಬಗ್ಗೆ ಅಪಾರ ಆಸಕ್ತಿ ಇಟ್ಟುಕೊಂಡಿರುವ ಯುವಕ, ಕಳೆದ ಐದಾರು ವರ್ಷದಿಂದ ಯೋಗ ಅಭ್ಯಾಸ ಮಾಡುತ್ತಿದ್ದಾನೆ. ಅಂದಾಜು ಇನ್ನೂರಕ್ಕೂ ಹೆಚ್ಚು ಆಸನ ಕಲಿತಿರುವ ಯುವಕ, ಇಟ್ಟಿಗೆ ಮೇಲೆ ಧೀರ್ಘಾವಧಿ ಶೀರ್ಷಾಸನ ಮಾಡುವ ಮೂಲಕ ದಾಖಲೆ ಮೆರೆದಿದ್ದಾನೆ.
ಜೂನ್ 13 ರಂದು ದಯಾನಂದ ಗೂಗಲ್ ಮೀಟ್ ಬಳಸಿ ಆನ್ಲೈನ್ ಯೋಗ ಪ್ರದರ್ಶನ ಮಾಡಿದ್ದು, ಇಂಟರ್ ನ್ಯಾಷನಲ್ ಬುಕ್ ಆಫ್ ರಿಕಾರ್ಡ್ನಲ್ಲಿ ದಾಖಲೆಯಾಗಿದೆ. ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ದಯಾನಂದ, ಬೆಂಗಳೂರಲ್ಲಿ ಬಿಎಸ್ಸಿ ಯೋಗ ಅಧ್ಯಯನ ಮಾಡುತ್ತಿದ್ದಾನೆ. ಜೊತೆಗೆ ಆಧ್ಯಾತ್ಮ ಯೋಗ ಶಾಲೆಯಲ್ಲೂ ತರಬೇತಿ ನೀಡುತ್ತಿದ್ದಾನೆ. ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮ ಬಳಿ ರೋಗಗಳು ಸುಳಿಯಲ್ಲ. ಆದ್ದರಿಂದ ಎಲ್ಲರೂ ಯೋಗಾಭ್ಯಾಸ ಮಾಡಬೇಕು ಅಂತ ದಯಾನಂದ ಹೇಳಿದ್ದಾನೆ.
ಪಿಯುಸಿಯಲ್ಲಿ ಫೇಲ್ ದಯಾನಂದ ಹೆಬ್ಬಾಳ ಗ್ರಾಮದಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು, ಹೈಸ್ಕೂಲ್, ಪಿಯುಸಿ ಶಿಕ್ಷಣ ಎಲ್ಲವನ್ನು ಬೆಂಗಳೂರಲ್ಲೆ ಓದುತ್ತಿದ್ದಾನೆ. ಪಿಯುಸಿಯಲ್ಲಿ ಒಂದು ವಿಷಯ ಫೇಲ್ ಆದಾಗ ಆತನ ಸ್ನೇಹಿತರೆಲ್ಲ ಇವನೇನು ಮಾಡಿಯಾನು ಎಂದಿದ್ದರಂತೆ. ಆದರೆ ಯೋಗದಲ್ಲಿ ಆಸಕ್ತಿ ಹೊಂದಿರುವ ಯುವಕ, ನಿಷ್ಠೆ ಮತ್ತು ಭಕ್ತಿಯಿಂದ ಕಲಿತು ಯೋಗದಲ್ಲಿ ಸಾಧನೆ ಮಾಡುತ್ತಿದ್ದಾನೆ. ಹೆಬ್ಬಾಳದಂತಹ ಪುಟ್ಟ ಗ್ರಾಮದಲ್ಲಿ ಹುಟ್ಟಿ, ಬೆಳೆದ ದಯಾನಂದ, ಯೋಗದಲ್ಲಿ ರೆಕಾರ್ಡ್ ಮಾಡಿದ್ದಾನೆ ಎನ್ನುವುದೇ ಆತನ ಕುಟುಂಬ ಮತ್ತು ಗ್ರಾಮಸ್ಥರಿಗೆ ಹೆಚ್ಚು ಖುಷಿ ತಂದಿದೆ.
ಇದನ್ನೂ ಓದಿ
ಸುತ್ತೂರು ಮಠದಲ್ಲಿ ಸಿದ್ದರಾಮಯ್ಯಗೆ ಸ್ವೀಟ್ ತಿನ್ನಿಸಿದ ಮಗ ಯತೀಂದ್ರ | Siddaramaiah | Mysuru | Tv9Kannada
ವೈದ್ಯರೆಂದರೆ ನಮಗೆ ಪುನರ್ಜನ್ಮ ನೀಡುವ ದೇವರು: ಪ್ರಧಾನಿ ನರೇಂದ್ರ ಮೋದಿ
(Bagalkote Man creates records by making Sirsasana on Sand bricks Photos goes viral)
Published On - 4:25 pm, Thu, 1 July 21