AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲೇಜು ಫೀಸ್​ನ್ನೇ ದಂಡ ಕಟ್ಟಿ ವಿದ್ಯಾರ್ಥಿ ಕಣ್ಣೀರು: ಸಂತೈಸಿ ಹಣ ಕೊಟ್ಟು ಕಳುಹಿಸಿದ ಲೇಡಿ ಪಿಎಸ್​ಐ

ಪೊಲೀಸರ ಸಿಟ್ಟು, ಗತ್ತಿಗೆ ಜನರು ಅವರನ್ನು ಕಂಡ ತಕ್ಷಣ ಹೆದರುತ್ತಾರೆ. ಮತ್ತೆ ಕೆಲವರು ಇವರಿಗೆ ಕರುಣೆ ಇಲ್ಲ, ಖಾಕಿ ತೊಟ್ಟ ಪೊಲೀಸರು ಕಟುವಾಗಿರುತ್ತಾರೆ ಅಂದುಕೊಳ್ಳುತ್ತಾರೆ. ಆದರೆ ಆ ಮಹಿಳಾ ಪಿಎಸ್​ಐ ವಿದ್ಯಾರ್ಥಿ‌ ಮೇಲೆ ತೋರಿದ ಮಮತೆ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ಪೊಲೀಸರಲ್ಲೂ ಕರುಣೆ, ಕನಿಕರ‌ ಇರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಪಿಎಸ್​ಐ ಮಾಡಿದ ಕಾರ್ಯ ಇಡೀ ದೇಶಾದ್ಯಂತ ವೈರಲ್ ಆಗಿದೆ.

ಕಾಲೇಜು ಫೀಸ್​ನ್ನೇ ದಂಡ ಕಟ್ಟಿ ವಿದ್ಯಾರ್ಥಿ ಕಣ್ಣೀರು: ಸಂತೈಸಿ ಹಣ ಕೊಟ್ಟು ಕಳುಹಿಸಿದ ಲೇಡಿ ಪಿಎಸ್​ಐ
ಕಾಲೇಜು ಫೀಸ್​ನ್ನೇ ದಂಡ ಕಟ್ಟಿ ವಿದ್ಯಾರ್ಥಿ ಕಣ್ಣೀರು: ಸಂತೈಸಿ ಹಣ ಕೊಟ್ಟು ಕಳುಹಿಸಿದ ಲೇಡಿ ಪಿಎಸ್​ಐ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on:Jul 26, 2024 | 6:58 PM

Share

ಬಾಗಲಕೋಟೆ, ಜುಲೈ 26: ಮೂವರು ಕಾಲೇಜು ವಿದ್ಯಾರ್ಥಿಗಳು (student) ಬೈಕ್ ಮೇಲೆ ತ್ರಿಬಲ್‌ ರೈಡ್​ ಮಾಡಿದ್ದು, ಇದನ್ನು ನೋಡಿದ ಮಹಿಳಾ ಪಿಎಸ್​ಐ (Lady PSI) ಒಬ್ಬರು ಓಡಿ ಹೋಗಿ ವಿದ್ಯಾರ್ಥಿಗಳನ್ನು ಹಿಡಿದು ದಂಡ ಹಾಕಿದ್ದಲ್ಲದೇ ವಿದ್ಯಾರ್ಥಿಗಳನ್ನು ತಬ್ಬಿ ಸಾಂತ್ವನ ಹೇಳಿರುವಂತಹ ಅಪರೂಪದ ಘಟನೆಯೊಂದು ಜಿಲ್ಲೆ‌ಯ ಇಳಕಲ್‌ ನಗರದ ಕಂಟಿ ವೃತ್ತದಲ್ಲಿ ನಡೆದಿದೆ. ಇಳಕಲ್‌ ನಗರಠಾಣೆ ಮಹಿಳಾ ಪಿಎಸ್​ಐ ಎಸ್. ಆರ್ ನಾಯಕ್‌ ವಿದ್ಯಾರ್ಥಿಗೆ ಸಾಂತ್ವನ ಮಾಡಿರುವ ವಿಡಿಯೋ ಇದೀಗ ದೇಶದಾದ್ಯಂತ ವೈರಲ್ ಆಗಿದೆ.

ಕಾಲೇಜು ಫೀಸ್ ದಂಡ ಕಟ್ಟಿದ ವಿದ್ಯಾರ್ಥಿ

ಮಂಗಳವಾರದಂದು ಕಂಟಿ ವೃತ್ತದಲ್ಲಿ ಪಿಎಸ್​ಐ ಎಸ್ ಆರ್ ನಾಯಕ್ ಕರ್ತವ್ಯದಲ್ಲಿದ್ದರು. ಆಗ ಮೂವರು ಕಾಲೇಜು ವಿದ್ಯಾರ್ಥಿಗಳು ಬೈಕ್​ ತ್ರಿಬಲ್‌ ರೈಡ್ ಮಾಡುತ್ತಿದ್ದರು. ಓಡೋಡಿ ಬಂದ ಎಸ್​.ಆರ್ ನಾಯಕ್ ಮೂವರಿಗೆ ದಂಡ ಹಾಕಿದ್ದಾರೆ. ಆದರೆ ಅದರಲ್ಲಿ ಒಬ್ಬ ವಿದ್ಯಾರ್ಥಿ ಕಣ್ಣೀರು ಹಾಕಿದ್ದಾನೆ. ಆತನನ್ನು ಪಿಎಸ್ ಐ ಎಸ್ ಆರ್ ನಾಯಕ್ ಯಾಕೆ ಅಂತ‌ ಕೇಳಿದಾಗ ಕಾಲೇಜು ಫೀಸ್ ಕಟ್ಟೋದಕ್ಕೆ ಮನೆಯಲ್ಲಿ ಹಣ ಕೊಟ್ಟಿದ್ದರು. ಅದನ್ನೇ ದಂಡ‌ ಕಟ್ಟಿದ್ದೇನೆ ಮನೆಯಲ್ಲಿ ಬೈತಾರೆ ಅಂತ ಕಣ್ಣೀರು ಹಾಕಿದ್ದಾನೆ.

ಇದನ್ನೂ ಓದಿ: ಬಾಗಲಕೋಟೆ: ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿ, ಜಿಲ್ಲೆಯ ಹಲವಾರು ಕಿರು ಸೇತುವೆಗಳು ಜಲಾವೃತ

ಆತನನ್ನು ತಬ್ಬಿಕೊಂಡು ಸಮಾಧಾನ ಮಾಡಿದ ಎಸ್​ಆರ್ ನಾಯಕ್ ತಮ್ಮ ಪರ್ಸ್​ನಿಂದ ಹಣ ಕೊಟ್ಟು ಸಮಾಧಾನ ಮಾಡಿದ್ದಾರೆ. ಈ ವಿಡಿಯೋ ದೇಶದಾದ್ಯಂತ ವೈರಲ್ ಆಗಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಅವರು, ‘ನಾನು ಕಡುಬಡತನದಲ್ಲಿ ಓದಿದವಳು. ನಾನು ರೈತನ ಮಗಳು. ಆ ವಿದ್ಯಾರ್ಥಿ ಕೂಡ ರೈತನ ಮಗ. ಆತನ ಕಷ್ಟ ನೆನೆದು ನನ್ನ ‌ಮಗನೇ ಅಳುತ್ತಿರುವಂತೆ ಭಾಸವಾಯಿತು. ನನ್ನ ವಿದ್ಯಾರ್ಥಿ ದಿನ ನೆನಪಾಯ್ತು. ಅದಕ್ಕೆ ನಾನು ಭಾವುಕಳಾದೆ. ಪೊಲೀಸರೆಂದರೆ ಕೆಟ್ಟವರಲ್ಲ ಅವರಲ್ಲೂ‌ ಮಾನವೀಯತೆ ಇದೆ. ನಮ್ಮನ್ನು ಕೆಟ್ಟವರಂತೆ ನೋಡಬೇಡಿ’ ಎಂದು ಹೇಳಿದ್ದಾರೆ.

‘ಅಂದು ನಾನು ನನ್ನ ಪಾಡಿಗೆ‌ ಕೆಲಸ ಮಾಡುತ್ತಿದ್ದೆ. ಯಾರೋ ವಿಡಿಯೋ ‌ಮಾಡಿ ವೈರಲ್‌ ಮಾಡಿದ್ದಾರೆ. ನಾನು ಇದನ್ನು ಪ್ರಚಾರಕ್ಕೆ ಮಾಡಿಲ್ಲ. ಇದನ್ನು ವೈರಲ್ ಮಾಡಲಾಗಿದೆ. ರಾಜ್ಯ, ಪರರಾಜ್ಯದಿಂದಲೂ ಜನರು ಕರೆ‌ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಾನು ಎಂಟನೇ ತರಗತಿ ಓದುವಾಗ ತಂದೆ ತೀರಿಕೊಂಡರು. ನಾವು ಐದು ಜನ ಮಕ್ಕಳು‌. ನಾನೇ ಹಿರಿಮಗಳು. ಕುಟುಂಬದ ಜವಾಬ್ದಾರಿ ‌ನನ್ನ ಮೇಲಿತ್ತು’.

ಇದನ್ನೂ ಓದಿ: ಮಳೆಗೆ ಉಕ್ಕಿ ಹರಿಯುತಿದೆ ಕೃಷ್ಣಾ ನದಿ: ಪ್ರವಾಹ ಎದುರಿಸಲು ಟೊಂಕ ಕಟ್ಟಿ ನಿಂತ ಬಾಗಲಕೋಟೆ ಜಿಲ್ಲಾಡಳಿತ

‘ನನ್ನ ತಾಯಿ ಕೂಲಿ‌ ಮಾಡಿ ಓದಿಸಿದ್ದಾರೆ. ಆ ವಿದ್ಯಾರ್ಥಿ ಕಣ್ಣೀರು ನೋಡಿ ನನಗೆ ತಡೆದುಕೊಳ್ಳಲಾಗಲಿಲ್ಲ. ಬಡ ರೈತರ‌ ಮಕ್ಕಳಿಗೆ ಒಂದು ನೂರು ರೂ. ಕೂಡ ಬಹಳ ಮುಖ್ಯ. ನಾನು ವಿದ್ಯಾರ್ಥಿಯಾಗಿದ್ದಾಗ ಟೇಲರಿಂಗ್ ಮಾಡಿ ಕಲಿತಿದ್ದೇನೆ. ಆ ಸಮಯದಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ. ಬಡತನ ಕಷ್ಟದ ಜೊತೆಗೆ ಓದಿ ಪೊಲೀಸ್ ಇಲಾಖೆ ಸೇರಿದ್ದೇನೆ. ಅಂದು ಆ ವಿದ್ಯಾರ್ಥಿ ಕಣ್ಣೀರು ಕಂಡು ನನ್ನ ಎಲ್ಲ ಕಷ್ಟ ಕಣ್ಮುಂದೆ ಬಂತು. ಅದಕ್ಕೆ ಆತನನ್ನು ತಬ್ಬಿಕೊಂಡು ಸಾಂತ್ವನ‌ ಹೇಳಿದೆ’ ಎಂದು ಕಣ್ಣೀರು ಹಾಕಿ ಭಾವುಕರಾದರು. ಅದು ಇಷ್ಟೊಂದು ವೈರಲ್ ಆಗಿ ಮೆಚ್ಚುಗೆ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳಿದರು. ಪಿಎಸ್​ಐಎಸ್​ಆರ್​ ನಾಯಕ ಕಾರ್ಯಕ್ಕೆ ಸಹೋದ್ಯೋಗಿ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:54 pm, Fri, 26 July 24

ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?