ಬಾಗಲಕೋಟೆ: ಗುಜರಿ ಕೆಲಸ ಮಾಡುವ ಕುಟುಂಬದ ಅಜರುದ್ಧೀನ್ ಅಸಿಸ್ಟೆಂಟ್​ ಕಮಾಂಡೆಂಟ್​ ಹುದ್ದೆಗೆ ಆಯ್ಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 08, 2024 | 4:42 PM

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ನೇಕಾರ ಕಾಲೋನಿಯ ಮಹಮ್ಮದ್ ಅಜರುದ್ಧಿನ್ ಹಾಲ್ಯಾಳ ಎಂಬ ಯುವಕ ಸತತ ನಾಲ್ಕನೇ ಪ್ರಯತ್ನದಲ್ಲೇ ಅಸಿಸ್ಟೆಂಟ್​ ಕಮಾಂಡೆಂಟ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. 2024ರ ಜುಲೈ 5 ರಂದು ಫಲಿತಾಂಶ ಹೊರಬಿದ್ದಿದ್ದು, 163 ನೇ ರ‍್ಯಾಂಕ್​ ಪಡೆದುಕೊಳ್ಳುವ ಮೂಲಕ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಬಾಗಲಕೋಟೆ: ಗುಜರಿ ಕೆಲಸ ಮಾಡುವ ಕುಟುಂಬದ ಅಜರುದ್ಧೀನ್ ಅಸಿಸ್ಟೆಂಟ್​ ಕಮಾಂಡೆಂಟ್​ ಹುದ್ದೆಗೆ ಆಯ್ಕೆ
ಬಾಗಲಕೋಟೆ: ಗುಜರಿ ಕೆಲಸ ಮಾಡುವ ಕುಟುಂಬದ ಅಜರುದ್ಧೀನ್ ಅಸಿಸ್ಟೆಂಟ್​ ಕಮಾಂಡೆಂಟ್​ ಹುದ್ದೆಗೆ ಆಯ್ಕೆ
Follow us on

ಬಾಗಲಕೋಟೆ, ಜುಲೈ 08: ಯುಪಿಎಸ್​ಸಿ ನಡೆಸುವ ಸಿಎಪಿಎಫ್ ಪರೀಕ್ಷೆ ಪಾಸು ಮಾಡುವ ಮೂಲಕ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಅಸಿಸ್ಟೆಂಟ್​ ಕಮಾಂಡೆಂಟ್ (assistant commandant)​​ ಹುದ್ದೆಗೆ ಜಿಲ್ಲೆಯ ಇಳಕಲ್​ನ (Ilkal) ಯುವಕ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಇಳಕಲ್ ನಗರದ ನೇಕಾರ ಕಾಲೋನಿಯ ಮಹಮ್ಮದ್ ಅಜರುದ್ಧಿನ್ ಹಾಲ್ಯಾಳ ಇವರೇ ಆ ಸಾಧನೆ ಮಾಡಿದ ಯುವಕ. 2023ರಲ್ಲಿ ಪರೀಕ್ಷೆ ನಡೆದಿದ್ದು, 2024ರ ಜುಲೈ 5 ರಂದು ಫಲಿತಾಂಶ ಹೊರಬಿದ್ದಿದ್ದು, 163 ನೇ ರ‍್ಯಾಂಕ್​ ಪಡೆದುಕೊಳ್ಳುವ ಮೂಲಕ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ನಾಲ್ಕನೇ ಪ್ರಯತ್ನದಲ್ಲೇ ಪರೀಕ್ಷೆ ಪಾಸು ಮಾಡಿರುವುದು ಮತ್ತೊಂದು ವಿಶೇಷ.

ಮನೆಯಲ್ಲಿ ಬಡತನ ಇದ್ದರೂ ತಾಯಿ ಬಿಬಿಜಾನ್​ ಮಗ ಅಜರುದ್ಧಿನ್ ಓದಿಗೆ ಯಾವುದೇ ಕೊರತೆ ಮಾಡಿಲ್ಲ.  ಕುಟುಂಬ ಗುಜರಿ ತುಂಬುವ ಕಾಯಕ ಮಾಡುತ್ತಾರೆ. ಪ್ರಾಥಮಿಕ ಶಾಲೆ ಇಳಕಲ್ ನಗರದ ಮಹಾಂತ ಗುರುಗಳ ಶಾಲೆಯಲ್ಲಿ ಓದಿದ ಅಜರುದ್ಧಿನ್​, 6ನೇ ತರಗತಿಗೆ ನವೋದಯ ಶಾಲೆ, ಧಾರವಾಡ ಕೃಷಿ ವಿವಿಯಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಕೃಷ್ಣಾ ಮೇಲ್ದಂಡೆ ಪುನರ್ನಿರ್ಮಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಸಿಬ್ಬಂದಿಗೆ ಬರ: 490 ಹುದ್ದೆಗಳು ಖಾಲಿ‌

ಮುಂಬೈ ಹಾಗೂ ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್​ ಪಡೆದುಕೊಂಡಿದ್ದು, ತನ್ನ ಶೈಕ್ಷಣಿಕ ಜೀವನದಲ್ಲಿ ತನಗೆ ತಾಯಿ ಹಾಗೂ ಸಹೋದರರು ಬಡತನ ತೋರಿಸಲೇ ಇಲ್ಲ. ಅವರು ಕಷ್ಟಪಟ್ಟು ನನ್ನ ಓದಿಗೆ ತೊಂದರೆ ಆಗದಂತೆ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದ್ದಾರೆ.

ಯುಪಿಎಸ್​ಸಿ ಪರೀಕ್ಷೆಯಲ್ಲಿ ಒಂದು ಸಲ ಫೇಲ್ ಆಗಿದ್ದೇನೆಂದು ಪ್ರಯತ್ನ ನಿಲ್ಲಿಸಬೇಡಿ. ಆತ್ಮವಿಶ್ವಾಸ, ನಿಷ್ಠೆಯಿಂದ ಪ್ರಯತ್ನ ಮಾಡಿ, ಯಶಸ್ಸು ಸಿಗುತ್ತೆ ಎಂದು ಯುಪಿಎಸ್​ಸಿ ಕನಸು ಹೊತ್ತವರಿಗೆ ಅಜರುದ್ಧೀನ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 15 ವರ್ಷದ ಬಾಲಕನಿಗೆ ಬೆನ್ನು ಹುರಿ ಶಸ್ತ್ರ ಚಿಕಿತ್ಸೆ ಯಶಸ್ವಿ; ಉತ್ತರ ಕರ್ನಾಟಕದಲ್ಲೇ ಇದೇ ಮೊದಲು

ಮಗನ ಸಾಧನೆಗೆ ತಾಯಿ ಬಿಬಿಜಾನ್​ ಭಾವುಕರಾಗಿದ್ದಾರೆ. ಇದನ್ನು ನೋಡಲು ಆತನ ತಂದೆ ಇರಬೇಕಿತ್ತು ಎಂದು ಕಣ್ಣೀರು ಹಾಕಿದ್ದಾರೆ. ಸದ್ಯ ಅಜರುದ್ಧೀನ್​ ಮನೆಯಲ್ಲಿ ಸಂಭ್ರಮ ಶುರುವಾಗಿದೆ. ಇಂದು ಇಳಕಲ್ ನಗರದಲ್ಲಿ ಸನ್ಮಾನ ಕೂಡ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.