Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ವರ್ಷದ ಬಾಲಕನಿಗೆ ಬೆನ್ನು ಹುರಿ ಶಸ್ತ್ರ ಚಿಕಿತ್ಸೆ ಯಶಸ್ವಿ; ಉತ್ತರ ಕರ್ನಾಟಕದಲ್ಲೇ ಇದೇ ಮೊದಲು

ಆ ಬಾಲಕನಿಗೆ ಹುಟ್ಟುತ್ತಲೇ ವಕ್ರ ಬೆನ್ನು ಕಾಣಿಸಿಕೊಂಡಿತ್ತು.ಇದರಿಂದ ಬಾಲಕ ನೋಡೋಕೆ ವಿಕೃತವಾಗಿ ಕಾಣುತ್ತಿದ್ದ. ಅನೇಕರಿಂದ ಅಪಮಾನಗಳನ್ನು ಎದುರಿಸಬೇಕಾಗಿತ್ತು. ಆದರೆ, ಇದೀಗ ಆತ ಎಲ್ಲರಂತೆ ಸಾಮಾನ್ಯನಾಗಿದ್ದಾನೆ. ಬೆನ್ನು ಹುರಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಉತ್ತರಕರ್ನಾಟಕದಲ್ಲೇ ಇದು ಮೊದಲ ಯಶಸ್ವಿ ಚಿಕಿತ್ಸೆಯಾಗಿದ್ದು, ಕುಟುಂಬ ಸಂತಸ ವ್ಯಕ್ತ ಪಡಿಸಿದೆ.

15 ವರ್ಷದ ಬಾಲಕನಿಗೆ ಬೆನ್ನು ಹುರಿ ಶಸ್ತ್ರ ಚಿಕಿತ್ಸೆ ಯಶಸ್ವಿ; ಉತ್ತರ ಕರ್ನಾಟಕದಲ್ಲೇ ಇದೇ ಮೊದಲು
ಬಾಗಲಕೋಟೆ ಬಾಲಕನ ಬೆನ್ನು ಹುರಿ ಶಸ್ತ್ರ ಚಿಕಿತ್ಸೆ ಯಶಸ್ವಿ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 30, 2024 | 3:44 PM

ಬಾಗಲಕೋಟೆ, ಜೂ.30: ಬೆನ್ನು ಮೂಳೆ ಡೊಂಕಾಗಿ ಯುವಕನ ಅಂದವನ್ನೇ ಕಸಿದುಕೊಂಡಿತ್ತು. ಇಂತಹ ಬೆನ್ನನ್ನು ಶಸ್ತ್ರಚಿಕಿತ್ಸೆ ‌ಮಾಡಿದ ವೈದ್ಯರು, ಬಾಲಕನ ವಿಕೃತಿಯನ್ನು ದೂರ ಮಾಡಿದ್ದಾರೆ. ಆ ಬಾಲಕನ ಹೆಸರು ಅನ್ವರ್ ಬಾಗಲಕೋಟೆ (Bagalkote) ಜಿಲ್ಲೆಯ ಬೀಳಗಿ ತಾಲ್ಲೂಕಿನ ಯಳ್ಳಿಗುತ್ತಿ ಗ್ರಾಮದ ನಿವಾಸಿ. 15 ವರ್ಷದ ಬಾಲಕನ ಬೆನ್ನು ಮೂಳೆ ಹುಟ್ಟುತ್ತಲೇ ವಕ್ರವಾಗಿತ್ತು. 75 ಪ್ರತಿಶತ  ರಷ್ಟು ಡೊಂಕಾಗಿದ್ದ ಮೂಳೆಯನ್ನು ಸತತ ಐದು ತಾಸು ಆಪರೇಷನ್ ಮಾಡಿ ಯಶಸ್ವಿಗೊಳಿಸಿದ್ದಾರೆ. ಇದಕ್ಕೆ ಸ್ಕೊಲಿಯೋಸಿಸ್ ಸಮಸ್ಯೆ ಎಂದು ಕರೆಯಲಾಗುತ್ತದೆ. ಅದನ್ನ ಸ್ಪೈನಲ್ ಡಿಪಾರ್ಮೆಟಿ ಕರೆಕ್ಷನ್ ಸರ್ಜರಿ ಮಾಡಿ ವೈದ್ಯರು ಬೆನ್ನು ಮೂಳೆ ನೇರ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಇದು ಮೊದಲ ಯಶಸ್ವಿ ಶಸ್ತ್ರ ಚಿಕಿತ್ಸೆಯಾಗಿದೆ.

ಅನ್ವರ್ ಈ ಸಮಸ್ಯೆಯಿಂದ ಯಾವುದೇ ನೋವು ಅನುಭವಿಸುತ್ತಿರಲಿಲ್ಲ. ಆದರೆ, ಇದು ಮಾನಸಿಕ ಯಾತನೆಯಾಗಿತ್ತು. ಅಪಮಾನವನ್ನು ಎದುರಿಸಬೇಕಾಗಿತ್ತು. ಇದರಿಂದ ವಿಕೃತವಾಗಿ ಕಾಣುವಂತಾಗಿತ್ತು. ಆದರೆ, ಈಗ ಎಲ್ಲರಂತೆ ಸಾಮಾನ್ಯನಾಗಿದ್ದಾನೆ. ಡಾ. ಉದಯ್ ಗುಳೇದ, ಡಾ. ಕಾಡಪ್ಪ ಶೆಡ್ಯಾಳ್, ಡಾ. ಅರ್ಜುನ. ಅನಸ್ತೇಶಿಯಾ ವೈದ್ಯ ವಿಶ್ವನಾಥ ಬೈರೆ, ಡಾ. ಅರುಣ್​ ಹಳ್ಳಿ ಸೇರಿ ಯಶಸ್ವಿ ಚಿಕಿತ್ಸೆ ಮಾಡಿದ್ದಾರೆ. 10 ರಿಂದ 15 ಸೆ.ಮೀ ಆಪರೇಷನ್ ಆಗಿದೆ.

ಇದನ್ನೂ ಓದಿ:ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಓರ್ವ ವ್ಯಕ್ತಿಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಕುಟುಂಬಸ್ಥರು ಸಂತಸ

ನ್ಯೂರೊಮಾನಿಟರ್ ಅಡಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ. ಇದು 100 ಜನರಲ್ಲಿ ಒಬ್ಬರಿಗೆ ಇರುತ್ತದಂತೆ. 80 ಪರ್ಸೆಂಟ್ ಜನರಿಗೆ ಇಂತಹ ಸಮಸ್ಯೆಯಿಂದ ನೋವು ಇರೋದಿಲ್ಲ. ಆದರೆ, ವಿಕೃತವಾಗಿ ಕಾಣುತ್ತಾರೆ. 20% ಜನರಿಗೆ ನೋವು ಇರುತ್ತದೆ. ಇದರ ಜೊತೆಗೆ 4 ವರ್ಷದ ರಶ್ಮಿ ಎಂಬ ಮಗು ಕನ್ಜೆನೈಟಲ್ ಹೆವರ್ಟಿಬ್ರಾ ಸಮಸ್ಯೆಯಿಂದ ಬಳಲುತ್ತಿತ್ತು. ಇದನ್ನು ಕೂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇನ್ನು ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಕುಟುಂಬಸ್ಥರು ಸಂತಸಗೊಂಡಿದ್ದು, ವೈದ್ಯರಿಗೆ ಧನ್ಯವಾದ ತಿಳಿಸುತ್ತಿದ್ದಾರೆ.

ಒಟ್ಟಿನಲ್ಲಿ ವೈದ್ಯರ ಕಾಳಜಿಯಿಂದ ಬಾಲಕ-ಬಾಲಕಿ ಇಬ್ಬರು ಸಾಮಾನ್ಯರಂತಾಗಿದ್ದಾರೆ. ವೈದ್ಯರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಿರಾಳತೆ ಇದ್ರೆ, ಕುಟುಂಬಸ್ಥರು ಎಲ್ಲ ಸರಿಯಾಯ್ತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Sun, 30 June 24

ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!