ವಾಕಿಂಗ್ ಮಾಡುವ ವೇಳೆ ತಲೆ ಮೇಲೆ ಬಿದ್ದ ಮರದ ಕೊಂಬೆ: ಸತತ 4 ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆ ಯಶಸ್ವಿ
ಮರದ ಕೊಂಬೆ ತಲೆ ಮೇಲೆ ಬಿದ್ದು ಮೆದುಳಿನ ಭಾಗದಲ್ಲಿ ರಕ್ತ ಸ್ರಾವವಾಗಿ ಸಾವಿನ ದವಡೆಯಲ್ಲಿದ್ದ ವ್ಯಕ್ತಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. 4 ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ ಸೂಕ್ಷ್ಮವಾಗಿ ಮೆದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ರೋಗಿಯು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆಂಗಳೂರು, ನವೆಂಬರ್ 07: ಮರದ ಕೊಂಬೆ ತಲೆ ಮೇಲೆ ಬಿದ್ದು ಮೆದುಳಿನ ಭಾಗದಲ್ಲಿ ರಕ್ತ ಸ್ರಾವವಾಗಿ ಸಾವಿನ ದವಡೆಯಲ್ಲಿದ್ದ ವ್ಯಕ್ತಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ (surgery) ಮಾಡಿದ್ದಾರೆ. ಈ ಕುರಿತು ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ.ರಾಜಕುಮಾರ್ ದೇಶಪಾಂಡೆ ಮಾತನಾಡಿದ್ದು, 35 ವರ್ಷದ ವ್ಯಕ್ತಿ ಬೆಳಗ್ಗಿನ ಜಾವ ಉದ್ಯಾನವನದಲ್ಲಿ ವಾಕಿಂಗ್ ಮಾಡುವ ವೇಳೆ ಮರದ ಕೊಂಬೆಯೊಂದು ನೇರವಾಗಿ ಅವರ ತಲೆ ಮೇಲೆ ಬಿದ್ದ ಪರಿಣಾಮ ತಲೆಗೆ ತೀವ್ರತರವಾದ ಗಾಯವಾಗಿ ಸಾಕಷ್ಟು ರಕ್ತ ಕಳೆದುಕೊಂಡಿದ್ದರು.
ತಲೆ ಬಿದ್ದ ಪೆಟ್ಟಿನಿಂದ ಮೆದುಳಿಗೆ ಹಾನಿಯಾಗಿರುವ ಸಾಧ್ಯತೆ ಮೇಲ್ನೋಟಕ್ಕೆ ತಿಳಿದುಬಂದಿದ್ದರಿಂದ ಕೂಡಲೇ ಅವರನ್ನು CTಗೆ ಒಳಪಡಿಸಲಾಯಿತು. ಈ ವೇಳೆ ಅವರ ಮೆದುಳಿನಲ್ಲಿ ಆವರಿಸುವ ಪೊರೆಗಳ ನಡುವೆ (ಮೆನಿಂಜಸ್) ಬಲಭಾಗದಲ್ಲಿ 1.6 ಸೆಂ.ಮೀ ದಪ್ಪದಲ್ಲಿ ರಕ್ತ ಸ್ರಾವವಾಗಿ, ಹೆಪ್ಪುಗಟ್ಟಿರುವುದು ತಿಳಿದು ಬಂತು.
ಇದನ್ನೂ ಓದಿ: World Radiography Day 2023: ವಿಶ್ವ ರೇಡಿಯಾಗ್ರಫಿ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ತಿಳಿಯಿರಿ
ಇಂತಹ ಪ್ರಕರಣಗಳಲ್ಲಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇದಷ್ಟೇ ಅಲ್ಲದೆ, ಮೆದುಳಿನ ಇತರೆ ಭಾಗಗಳಿಗೂ ಮೂಗೇಟುಗಳಾಗಿರುವುದು ತಿಳಿದುಬಂದಿದೆ. ಜೊತೆಗೆ, ಕಣ್ಣು, ಹಣೆ, ಕೆನ್ನೆಯ ಮೂಳೆಗಳು ಸಹ ಮುರಿದಿದ್ದವು.
ಹೀಗಾಗಿ ತುರ್ತಾಗಿ ಹೆಚ್ಚಿನ ಚಿತ್ಸೆಗೆ ಒಳಪಡಿಸಲಾಗಿದೆ. ಇದರಲ್ಲಿ ತಲೆಯ ಬಲಭಾಗದಲ್ಲಿರುವ ತಲೆಬುರುಡೆಯ ಮೂಳೆಯ ಭಾಗವನ್ನು ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ಇದು ಮೆದುಳನ್ನು ಹಿಗ್ಗಿಸಲು ಮತ್ತು ಊತ ಅಥವಾ ರಕ್ತಸ್ರಾವದಿಂದ ಉಂಟಾಗಿರುವ ಪರಿಣಾಮವನ್ನು ಸರಿದೂಗಿಸಲು ಸಹಾಯ ಮಾಡಲಿದೆ.
ಇದನ್ನೂ ಓದಿ: Brain Fever: ಮೆದುಳು ಜ್ವರ ಎಂದರೇನು? ಹೇಗೆ ಬರುತ್ತದೆ? ಲಕ್ಷಣ ಮತ್ತು ಚಿಕಿತ್ಸೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ
4 ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ ಸೂಕ್ಷ್ಮವಾಗಿ ಮೆದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ತೆಗೆದುಹಾಕುವಲ್ಲಿ ಯಶಸ್ವಿಯಾದೆವು. ಸದ್ಯ ರೋಗಿಯು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಏನಿದು ಲ್ಯಾಪ್ರೋಸ್ಕೋಪಿ ಹಿಸ್ಟ್ರೋಕ್ಟಮಿ
ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಲ್ಯಾಪ್ರೋಸ್ಕೋಪಿ ಹಿಸ್ಟ್ರೋಕ್ಟಮಿ ಮೂಲಕ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆಯನ್ನ ಯಶ್ವಸಿಯಾಗಿ ಇತ್ತೀಚೆಗೆ ಕೊಪ್ಪಳದಲ್ಲಿ ಮಾಡಿದ್ದಾರೆ. ಮಹಿಳೆಯರಿಗೆ ಹೆರಿಗೆ ನಂತರದಲ್ಲಿ ಸಂತಾನ ನಿಯಂತ್ರಣ ಚಿಕಿತ್ಸೆಯನ್ನು ಮಾಡಿ, ಮಹಿಳೆಯರ ಗರ್ಭಚೀಲವನ್ನು ತೆಗೆದು ಹಾಕಲಾಗುತ್ತದೆ. ಈ ಹಿಂದೆ ಇದನ್ನು ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು. ಮಹಿಳೆಯರ ಹೊಟ್ಟೆಯನ್ನು ಕತ್ತರಿಸಿ ಗರ್ಭಚೀಲ ಚಿಕಿತ್ಸೆ ಮಾಡಲಾಗುತ್ತಿತ್ತು. ಇದರಿಂದ ಮಹಿಳೆಯರು ಹೆಚ್ಚು ಕಮ್ಮಿ ಒಂದು ವಾರಗಳ ಕಾಲ ವಿಶ್ರಾಂತಿಯನ್ನು ಪಡೆದುಕೊಳ್ಳಬೇಕಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.