ಕೃಷ್ಣಾ ಮೇಲ್ದಂಡೆ ಪುನರ್ನಿರ್ಮಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಸಿಬ್ಬಂದಿಗೆ ಬರ: 490 ಹುದ್ದೆಗಳು ಖಾಲಿ
ಕೃಷ್ಣಾ ಮೇಲ್ದಂಡೆ ಯೋಜನೆ ರಾಜ್ಯದ ಒಂದು ಬೃಹತ್ ನೀರಾವರಿ ಯೋಜನೆ. ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಇದರ ಕಾರ್ಯ ವಿಸ್ತರಣೆ ಇದೆ. ಆದರೆ ಇಂತಹ ಬೃಹತ್ ಯೋಜನೆ ಇಲಾಖೆಯ ಕಚೇರಿಗೆ ಅಧಿಕಾರಿ ವರ್ಗ ಸಿಬ್ಬಂದಿ ಬರ ಎದುರಾಗಿದೆ. ಮಹಾವ್ಯವಸ್ಥಾಪಕರು, ಉಪಮಹಾವ್ಯವಸ್ಥಾಪಕರ ಸ್ಥಾನ ಭರ್ತಿ ಮಾಡಬೇಕಿದೆ.
ಬಾಗಲಕೋಟೆ, ಜುಲೈ 03: ಅದು ಕರ್ನಾಟಕದ ಒಂದು ಬೃಹತ್ ನೀರಾವರಿ ಯೋಜನೆ. ಆ ಯೋಜನೆ ಹಿನ್ನೆಲೆ ಗ್ರಾಮ ಸ್ಥಳಾಂತರ, ಪುನರ್ವಸತಿ ಪುನರ್ನಿರ್ಮಾಣ ಕಾರ್ಯ ಪ್ರಕ್ರಿಯೆ ನಡೆಯಬೇಕು. ಆದರೆ ಯೋಜನೆಗೆ ಅಧಿಕಾರಿಗಳು ಸಿಬ್ಬಂದಿ (Staff) ಬರ ಎದುರಾಗಿದೆ. ಅಧಿಕಾರಿ ವರ್ಗ ಇತರೆ ಸಿಬ್ಬಂದಿ 57% ಹುದ್ದೆ ಖಾಲಿ ಇದ್ದು ಯೋಜನೆ ಆಮೆಗತಿಗೆ ಕಾರಣವಾಗಿದೆ. ಬಾಗಲಕೋಟೆ ನಗರದ ಕೃಷ್ಣಾ ಮೇಲ್ದಂಡೆ ಯೋಜನೆಯ (Krishna Upper Bank project) ಪುನರ್ವಸತಿ ಪುನರ್ನಿರ್ಮಾಣ ಕಚೇರಿಯಲ್ಲಿ ಸಿಬ್ಬಂದಿಗಳಿಗೆ ಬರ ಎದುರಾಗಿದೆ.
ಸಿಬ್ಬಂದಿ ಬರ
ಕೃಷ್ಣಾ ಮೇಲ್ದಂಡೆ ಯೋಜನೆ ರಾಜ್ಯದ ಒಂದು ಬೃಹತ್ ನೀರಾವರಿ ಯೋಜನೆ. ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಇದರ ಕಾರ್ಯ ವಿಸ್ತರಣೆ ಇದೆ. ಆದರೆ ಇಂತಹ ಬೃಹತ್ ಯೋಜನೆ ಇಲಾಖೆಯ ಕಚೇರಿಗೆ ಅಧಿಕಾರಿ ವರ್ಗ ಸಿಬ್ಬಂದಿ ಬರ ಎದುರಾಗಿದೆ. ಯುಕೆಪಿ ವ್ಯಾಪ್ತಿಯ ಪುನರ್ವಸತಿ ಪುನರ್ನಿರ್ಮಾಣ ಕಚೇರಿಯಲ್ಲಿ ಆಯುಕ್ತರು ಪ್ರಭಾರ ಇದಾರೆ. ಮಹಾವ್ಯವಸ್ಥಾಪಕರು, ಉಪಮಹಾವ್ಯವಸ್ಥಾಪಕರ ಸ್ಥಾನ ಭರ್ತಿ ಇದೆ.
25 ಕಚೇರಿಗಳಲ್ಲಿ 490 ಹುದ್ದೆ ಖಾಲಿ
ಸ್ಪೆಷಲ್ ಡಿಸಿ 2 ಹುದ್ದೆ ಇದ್ದು, 1 ಖಾಲಿ ಇದೆ. ವಿಶೇಷ ಭೂಸ್ವಾಧೀನ ಅಧಿಕಾರಿಗಳ ಸ್ಥಾನ 12 ಇದ್ದು, ಅದರಲ್ಲಿ 4 ಖಾಲಿ ಇವೆ. ವಿಶೇಷ ತಹಸೀಲ್ದಾರ 16 ಹುದ್ದೆಯಲ್ಲಿ 13 ಖಾಲಿ ಇವೆ. ಸಹಾಯಕ ಅಭಿಯಂತರರು 53 ಸ್ಥಾನದ ಪೈಕಿ 44 ಖಾಲಿ ಇವೆ. ಕಿರಿಯ ಅಭಿಯಂತರರಯ 23 ಪೈಕಿ 18 ಖಾಲಿ ಇವೆ ಉಳಿದಂತೆ ಜನ ಪುನರ್ವಸತಿ ಅಧಿಕಾರಿಗಳು, ಎಫ್ಡಿಎ, ಎಸ್ಡಿಎ ಸೇರಿದಂತೆ ಒಟ್ಟು 25 ಕಚೇರಿಗಳಲ್ಲಿ 490 ಹುದ್ದೆ ಖಾಲಿ ಇದ್ದು ಸಂತ್ರಸ್ತರ ಪುನರ್ವಸತಿ ಪುನರ್ನಿರ್ಮಾಣ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ. ಕೂಡಲೇ ಸರಕಾರ ಎಲ್ಲ ಹುದ್ದೆ ಭರ್ತಿ ಮಾಡಿ ಯೋಜನೆಗೆ ವೇಗ ನೀಡಬೇಕು ಅಂತಿದ್ದಾರೆ ಸ್ಥಳೀಯರು.
ಇದನ್ನೂ ಓದಿ: ಬಾಗಲಕೋಟೆ: ನಿಧಿ ಆಸೆಗೆ ದೇವಸ್ಥಾನದ ಗರ್ಭಗುಡಿಯಲ್ಲಿನ ಲಿಂಗವನ್ನ ಒಡೆದ ಕಳ್ಳರು
ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಗಲಕೋಟೆ, ಬೆಳಗಾವಿ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿನ ಅತಿ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ. ಪ್ರತಿನಿತ್ಯವೂ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಭೂಸ್ವಾಧೀನ, ಭೂಪರಿಹಾರದ ಐತೀರ್ಪು, ಸ್ಥಳಾಂತರ, ಪುನರ್ವಸತಿ ಪುನರ್ನಿರ್ಮಾಣ ಅಂತ ಅನೇಕ ಕಾರ್ಯಗಳು ನಡೆಯಬೇಕಾಗುತ್ತದೆ. ಆದರೆ ಆಯುಕ್ತರಿಂದ ಹಿಡಿದು ವಿಶೇಷ ಭೂಸ್ವಾಧೀನಾಧಿಕಾರಿಗಳು, ವಿಶೇಷ ಜಿಲ್ಲಾಧಿಕಾರಿಗಳು, ಪುನರ್ವಸತಿ ಅಧಿಕಾರಿಗಳಂತಹ ಮಹತ್ವದ ಹುದ್ದೆಗಳು ಇತರೆ ಕೆಳ ಹಂತದ ಸಿಬ್ಬಂದಿ ಹುದ್ದೆ ಖಾಲಿಖಾಲಿಯಾಗಿದ್ದು ಇಲಾಖೆ ಕಾರ್ಯದ ನಿಧಾನಗತಿಗೆ ಪ್ರಮುಖ ಕಾರಣವಾಗಿದೆ.
ಕಳೆದ ಹತ್ತು ವರ್ಷದಿಂದ ಇದೇ ಗತಿಯಲ್ಲಿ ಕಚೇರಿ ಸಾಗುತ್ತಿದೆ. ಇದುವರೆಗೂ ಭರ್ತಿ ಹುದ್ದೆ ಪೂರ್ಣ ಮಾಡುವ ಪ್ರಯತ್ನ ಗಂಭೀರವಾಗಿ ನಡೆಯುತ್ತಿಲ್ಲ. ಇನ್ನು ಯೋಜನೆಗೆ ಚುರುಕು ನೀಡಬೇಕೆಂದು ಎರಡು ದಿನದ ಹಿಂದೆ ಸಚಿವ ಆರ್ಬಿ ತಿಮ್ಮಾಪುರ ಅಧಿಕಾರಿಗಳ ಸಭೆ ಕೂಡ ನಡೆಸಿದ್ದಾರೆ. ಯೋಜನೆಗೆ1,33,867 ಹೆಕ್ಟೇರ್ ಭೂಸ್ವಾಧೀನವಾಗಬೇಕಿದ್ದು, ಇರುವರೆಗೂ 28,878 ಎಕರೆ ಭೂಸ್ವಾಧೀನ ಆಗಿದೆ. ಇನ್ನು 1,4,0989 ಎಕರೆ ಸ್ವಾಧೀನ ಆಗಬೇಕಿದೆ.
ಇದನ್ನೂ ಓದಿ: 15 ವರ್ಷದ ಬಾಲಕನಿಗೆ ಬೆನ್ನು ಹುರಿ ಶಸ್ತ್ರ ಚಿಕಿತ್ಸೆ ಯಶಸ್ವಿ; ಉತ್ತರ ಕರ್ನಾಟಕದಲ್ಲೇ ಇದೇ ಮೊದಲು
20 ಹಳ್ಳಿಗಳ ಪೂರ್ಣ ಸ್ಥಳಾಂತರ ಮಾಡಿ ಪುನರ್ವಸತಿ ಪುನರ್ನಿರ್ಮಾಣ ಮಾಡುವ, 188 ಹಳ್ಳಿಗಳ ಜಮೀನು ಮುಳುಗಡೆ ಪರಿಹಾರ ನೀಡುವ ಯೋಜನೆ ಇದು. ಆದರೆ ಎಲ್ಲ ಕಾರ್ಯಕ್ಕೂ ಅಧಿಕಾರಿ, ಸಿಬ್ಬಂದಿ ಕೊರತೆ ಕಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸರಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಸರಕಾರ ಅಧಿಕಾರಿ, ಸಿಬ್ಬಂದಿ ವರ್ಗ ನೇಮಿಸಬೇಕಾಗಿದೆ ಅಂತಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ, ಪುನರ್ನಿರ್ಮಾಣ ಕಚೇರಿ ಹೆಸರಿಗೆ ಮಾತ್ರ ಎಂಬಂತಾಗಿದೆ. ಆದಷ್ಟು ಬೇಗ ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳ ನೇಮಕ ಮಾಡಿ ಯೋಜನೆಗೆ ವೇಗ ನೀಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.