ನಾವು ಗಾಳಿಯಲ್ಲಿ ಗುಂಡು ಹೊಡಿಯಲ್ಲ, ಪಕ್ಕಾ ಸಾಕ್ಷ್ಯ ಇಟ್ಟುಕೊಂಡು ದೂರು ನೀಡ್ತೀವಿ: ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು: ಅಶ್ಲೀಲ ಸಿಡಿ ಪ್ರಕರಣದಿಂದ ಇಕ್ಕಟ್ಟಿಗೆ ಸಿಲುಕಿರುವ ರಮೇಶ್ ಜಾರಕಿಹೊಳಿ ಬೆನ್ನಿಗೆ ಸಹೋದರರು ನಿಂತಿದ್ದಾರೆ. ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜೊತೆ ನಿನ್ನೆಯೇ ಚರ್ಚೆ ಮಾಡಿದ್ದೇನೆ. ಆದಷ್ಟು ಬೇಗ ದೂರು ನೀಡುವ ಬಗ್ಗೆ ಯೋಚನೆ ಮಾಡಿದ್ದು, ಸೋಮವಾರ ಬಳಿಕ ಇಬ್ಬರು ಅಥವಾ ಮೂವರ ವಿರುದ್ಧ ದೂರು ನೀಡ್ತೇವೆ. ಕಿಂಗ್‌ಪಿನ್‌ಗಳ ಬಗ್ಗೆ ನಾವು ಆದಷ್ಟು ಬೇಗ ದೂರು ನೀಡಲಿದ್ದೇವೆ. ಕಿಂಗ್‌ಪಿನ್‌ಗಳಿಗೆ ಸಹಕರಿಸಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ದೊಡ್ಡ ತಿಮಿಂಗಿಲಗಳನ್ನು ಇನ್ನೂ ವಶಕ್ಕೆ ಪಡೆದಿಲ್ಲ ಎಂದು […]
ಬೆಂಗಳೂರು: ಅಶ್ಲೀಲ ಸಿಡಿ ಪ್ರಕರಣದಿಂದ ಇಕ್ಕಟ್ಟಿಗೆ ಸಿಲುಕಿರುವ ರಮೇಶ್ ಜಾರಕಿಹೊಳಿ ಬೆನ್ನಿಗೆ ಸಹೋದರರು ನಿಂತಿದ್ದಾರೆ. ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜೊತೆ ನಿನ್ನೆಯೇ ಚರ್ಚೆ ಮಾಡಿದ್ದೇನೆ. ಆದಷ್ಟು ಬೇಗ ದೂರು ನೀಡುವ ಬಗ್ಗೆ ಯೋಚನೆ ಮಾಡಿದ್ದು, ಸೋಮವಾರ ಬಳಿಕ ಇಬ್ಬರು ಅಥವಾ ಮೂವರ ವಿರುದ್ಧ ದೂರು ನೀಡ್ತೇವೆ. ಕಿಂಗ್‌ಪಿನ್‌ಗಳ ಬಗ್ಗೆ ನಾವು ಆದಷ್ಟು ಬೇಗ ದೂರು ನೀಡಲಿದ್ದೇವೆ. ಕಿಂಗ್‌ಪಿನ್‌ಗಳಿಗೆ ಸಹಕರಿಸಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ದೊಡ್ಡ ತಿಮಿಂಗಿಲಗಳನ್ನು ಇನ್ನೂ ವಶಕ್ಕೆ ಪಡೆದಿಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ಅಶ್ಲೀಲ ಸಿಡಿಗೆ ಸಂಬಂಧಿಸಿದಂತೆ SIT ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಆರೋಪಿಗಳಿಗೆ ಬುದ್ಧಿ ಕಲಿಸಬೇಕಾದ್ರೆ ಎಲ್ಲರನ್ನೂ ಬಂಧಿಸಬೇಕು. ಸಾಕ್ಷ್ಯಾಧಾರಗಳನ್ನು ಖಾಸಗಿಯಾಗಿ ಸಂಗ್ರಹ ಮಾಡಲಾಗುತ್ತಿದೆ. ಯುವತಿ ಜೊತೆ ಇರುವ ಫೋಟೋ ನಮಗೆ ಲಭ್ಯವಾಗಿದೆ. ಪಕ್ಕಾ ಎವಿಡೆನ್ಸ್ ಕಲೆಕ್ಟ್ ಮಾಡಿ ದೂರು ನೀಡುತ್ತೇವೆ. ನಾವು ಗಾಳಿಯಲ್ಲಿ ಗುಂಡು ಹೊಡೆಯಲ್ಲ, ಕಾನೂನು ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ದೆಹಲಿಗೆ ಪ್ರಯಾಣ ಬೆಳೆಸಲಿರುವ ಸಹೋದರರು ರಮೇಶ್ ಜಾರಕಿಹೊಳಿ ಸದ್ಯ ಅಸ್ಸಾಂನಲ್ಲಿದ್ದರೆ, ಬಾಲಚಂದ್ರ ಜಾರಕಿಹೊಳಿ ಮಹಾರಾಷ್ಟ್ರದ ನಾಗ್ಪುರದಲ್ಲಿದ್ದಾರೆ. ಇವರಿಬ್ಬರೂ ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದು, ಪ್ರಮುಖರನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೇ, ದೆಹಲಿಯಲ್ಲಿ ವಕೀಲರ ಜತೆ ಈ ಬಗ್ಗೆ ಸಮಾಲೋಚನೆ ನಡೆಸಿ ಬೆಂಗಳೂರಿಗೆ ವಾಪಸಾದ ಬಳಿಕ ದೂರು ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.
ಇನ್ನು ರಮೇಶ್ ಜಾರಕಿಹೊಳಿ ಸಿಡಿ ಸುದ್ದಿ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಂಧ್ರ, ತಮಿಳುನಾಡಿಗೆ ತೆರಳಿರುವ ಎಸ್‌ಐಟಿ ತಂಡ ಆರೋಪಿಗಳಿಗಾಗಿ ಬಲೆ ಬೀಸಿದೆ. ಖಚಿತ ಮಾಹಿತಿ ಆಧರಿಸಿ ಶೋಧ ಕಾರ್ಯಕ್ಕೆ ಧುಮುಕಿರುವ ಎಸ್‌ಐಟಿ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇತ್ತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದ ಯುವಕನ ಸ್ನೇಹಿತೆಯನ್ನೂ ವಿಚಾರಣೆಗೆ ಹಾಜರುಪಡಿಸಿದ ಎಸ್‌ಐಟಿ ಅಧಿಕಾರಿಗಳು ಮಾಹಿತಿ ಕಲೆಹಾಕುವ ಪ್ರಯತ್ನ ನಡೆಸಿದ್ದಾರೆ. ವಶಕ್ಕೆ ಪಡೆದಿರುವ ಯುವಕನ ಜೊತೆ ರಾಮನಗರ ಮೂಲದ ಯುವತಿ ಹೆಚ್ಚಿನ ಭಾರಿ ದೂರವಾಣಿ ಸಂಪರ್ಕ ನಡೆಸಿದ್ದರು ಎಂಬ ಅನುಮಾನದ ಮೇರೆಗೆ ವಿಚಾರಣೆ ನಡೆಸಲಾಗಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ: ಓರ್ವನನ್ನು ವಶಕ್ಕೆ ಪಡೆದ ಎಸ್‌ಐಟಿ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿಗೆ ತನಿಖೆ ಹೊಣೆ, ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ
Published On - 8:35 am, Sat, 13 March 21