ಬಳ್ಳಾರಿ ಬಾಣಂತಿಯರ ಸಾವು ಕೇಸ್​: ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಪರಿಶೀಲನಾ ತಂಡ ರಚನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 08, 2024 | 10:17 PM

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವುಗಳ ಕುರಿತು ಸರ್ಕಾರ ತನಿಖಾ ತಂಡ ರಚಿಸಿದೆ. ಐಎಎಸ್ ಅಧಿಕಾರಿ ಎಂ. ಕನಗವಲ್ಲಿ ನೇತೃತ್ವದ ನಾಲ್ಕು ಸದಸ್ಯರ ತಂಡ ಐದು ದಿನಗಳಲ್ಲಿ ವರದಿ ಸಲ್ಲಿಸಲಿದೆ. ಔಷಧ ಖರೀದಿ ಮತ್ತು ಪ್ರಯೋಗಾಲಯಗಳಲ್ಲಿನ ನಿಯಮ ಉಲ್ಲಂಘನೆಗಳನ್ನೂ ತನಿಖೆ ನಡೆಯಲಿದೆ.

ಬಳ್ಳಾರಿ ಬಾಣಂತಿಯರ ಸಾವು ಕೇಸ್​: ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಪರಿಶೀಲನಾ ತಂಡ ರಚನೆ
ಬಳ್ಳಾರಿ ಬಾಣಂತಿಯರ ಸಾವು ಕೇಸ್​: ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಪರಿಶೀಲನಾ ತಂಡ ರಚನೆ
Follow us on

ಬೆಂಗಳೂರು, ಡಿಸೆಂಬರ್​ 08: ಬಳ್ಳಾರಿ (Ballari) ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಸರ್ಕಾರ ಪರಿಶೀಲನಾ ತಂಡ ರಚಿಸಿದೆ. ಕೌಶಲ್ಯಾಭಿವೃದ್ಧಿ ನಿಗಮದ ಎಂಡಿ ಎಂ.ಕನಗವಲ್ಲಿ ನೇತೃತ್ವದಲ್ಲಿ ನಾಲ್ವರು ಸದಸ್ಯರ ತಂಡ ರಚಿಸಲಾಗಿದ್ದು, ಐದು ದಿನಗಳಲ್ಲಿ ಸರ್ಕಾರದ ಎಸಿಎಸ್‌ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಟೆಂಡ‌ರ್ ಮೂಲಕ ಔಷಧಿಗಳ ಖರೀದಿ ಮತ್ತು ಎಂಪ್ಯಾನಲ್ಡ್ ಲ್ಯಾಬೋರೇಟರಿಗಳಿಗೆ ಔಷಧಗಳ ಮಾದರಿಗಳನ್ನು ಒಳಪಡಿಸುವಲ್ಲಿ ಆಗಿರುವ ನಿಯಮಗಳ ಉಲ್ಲಂಘನೆಗಳ ಬಗ್ಗೆ ಕೆಎಸ್‌ಎಂಎಸ್‌ಸಿಎಲ್ ಅಧಿಕಾರಿಗಳ ಪಾತ್ರ ಮತ್ತು ಲೋಪಗಳನ್ನು ಪರಿಶೀಲಿಸಿ ವರದಿ ನೀಡಲು ಕೌಶಲ್ಯಾಭಿವೃದ್ಧಿ ನಿಗಮದ ಎಂಡಿ ಎಂ.ಕನಗವಲ್ಲಿ ನೇತೃತ್ವದಲ್ಲಿ ತಂಡಕ್ಕೆ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಕಳಪೆ ಔಷಧ ಕೊಟ್ಟ ಕಂಪನಿ ಬ್ಲಾಕ್ ಲಿಸ್ಟ್​ಗೆ ಸೇರಿಸಲಾಗಿದೆ: ಸಿಎಂ ಸಿದ್ದರಾಮಯ್ಯ

ಎಂ.ಕನಗವಲ್ಲಿ ನೇತೃತ್ವದಲ್ಲಿ ತಂಡದಲ್ಲಿ ಔಷಧ ನಿಯಂತ್ರಣ ಇಲಾಖೆಯ ಸಹಾಯಕ ಔಷಧ ನಿಯಂತ್ರಕ ವೆಂಕಟೇಶ್, ಬೆಂಗಳೂರು ವೈದ್ಯಕೀಯ ಕಾಲೇಜಿನ ಮೈಕ್ರೋಬಯೋಲಜಿಸ್ಟ್ ಡಾ. ಅಸೀಮಾ ಬಾನು ಮತ್ತು   ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿಯವರಿಂದ ನಾಮನಿರ್ದೇಶಿತ ಒಬ್ಬ ಹಿರಿಯ ಫಾರ್ಮಾಕಾಲಜಿ (Pharmacology) ಪ್ರಾಧ್ಯಾಪಕರು ಇದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವಿನ ಕುರಿತಂತೆ ಹಾಗೂ ಕರ್ನಾಟಕದಲ್ಲಿ ಇದೇ ತರಹದ ಪ್ರಕರಣಗಳು ಮರುಕಳಿಸದಂತೆ ಮೂಲ ವ್ಯವಸ್ಥೆ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಸೂಕ್ತ ಶಿಫಾರಸ್ಸಿನೊಂದಿಗೆ ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಂಬಂಧ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.

ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಿನೇಶ್‌ ಗುಂಡೂರಾವ್ ಭೇಟಿ: IV ಫ್ಲ್ಯೂಯೆಡ್‌ ಕಂಪನಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಹೋಗ್ತಿದ್ದೇವೆ ಎಂದ ಸಚಿವ

ಬಳ್ಳಾರಿ ಬಾಣಂತಿಯರ ಸರಣಿ ಸಾವು ಸಂಬಂಧ ಕೊನೆಗೂ ಆರೋಗ್ಯ ಸಚಿವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇದರ ಮಧ್ಯೆ ಜಿಲ್ಲಾಸ್ಪತ್ರೆ ಮೇಲೆ ಲೋಕಾಯುಕ್ತ ರೇಡ್​ ನಡೆಸಿ ಸುಮೊಟೋ ಕೇಸ್​ ದಾಖಲಿಸಿಕೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:40 pm, Sun, 8 December 24