ಕರ್ನಾಟಕದ ಬ್ಯಾಂಕ್​ಗಳಲ್ಲಿ ಹಿಂದಿ ಹೇರಿಕೆ: ನಿರ್ಮಲಾ ಸೀತಾರಾಮನ್​​​ಗೆ ಕನ್ನಡ ಪ್ರಾಧಿಕಾರ ಪತ್ರ

ಕರ್ನಾಟಕದ ಹಲವು ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ಹಿಂದಿಯನ್ನು ಹೇರಿಕೆ ಮಾಡಲಾಗುತ್ತಿದೆ. ಹೀಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆಯಲು ಮುಂದಾಗಿದೆ. ಬ್ಯಾಂಕ್‌ ವ್ಯವಹಾರಗಳಲ್ಲಿ ಕನ್ನಡ ಭಾಷೆಗೆ ಸೂಕ್ತ ಪ್ರಾತಿನಿಧ್ಯ ದೊರಕಿಸಿಕೊಡುವಂತೆ ಪ್ರಾಧಿಕಾರ ಆಗ್ರಹಿಸಿದೆ.

ಕರ್ನಾಟಕದ ಬ್ಯಾಂಕ್​ಗಳಲ್ಲಿ ಹಿಂದಿ ಹೇರಿಕೆ: ನಿರ್ಮಲಾ ಸೀತಾರಾಮನ್​​​ಗೆ ಕನ್ನಡ ಪ್ರಾಧಿಕಾರ ಪತ್ರ
ಕರ್ನಾಟಕದ ಬ್ಯಾಂಕ್​ಗಳಲ್ಲಿ ಹಿಂದಿ ಹೇರಿಕೆ: ನಿರ್ಮಲಾ ಸಿತಾರಮನ್​ಗೆ ಕನ್ನಡ ಪ್ರಾಧಿಕಾರ ಪತ್ರ
Follow us
Vinay Kashappanavar
| Updated By: ವಿವೇಕ ಬಿರಾದಾರ

Updated on:Dec 09, 2024 | 10:41 AM

ಬೆಂಗಳೂರು, ಡಿಸೆಂಬರ್​ 08: ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್‌ (Banks) ಖಾತೆ ಇರಬೇಕು ಎನ್ನುವ ಕೇಂದ್ರ ಸರಕಾರ, ಆದರೆ ಬ್ಯಾಂಕ್​ಗಳಲ್ಲಿ ವ್ಯವಹಾರವನ್ನು ಮಾತ್ರ ಜನರಿಗೆ ತಿಳಿಯದ ಭಾಷೆಯಲ್ಲಿ ನಡೆಸುತ್ತಿದೆ. ಹಲವು ಬ್ಯಾಂಕ್​​ಗಳಲ್ಲಿ ಹಿಂದಿಯಲ್ಲಿ ಮಾತ್ರವೇ ವಹಿವಾಟು ನಡೆಸಲಾಗುತ್ತಿದೆ. ರಾಜಧಾನಿ ಸೇರಿದಂತೆ ರಾಜ್ಯದ ಹಲವು ಬ್ಯಾಂಕ್​ಗಳಲ್ಲಿ ಕನ್ನಡ ಮಾಯವಾಗುತ್ತಿದೆ. ಇದು ಜನರ ಸಂಕಷ್ಟಕ್ಕೆ ಕಾಣವಾಗಿದೆ.

ಸಚಿವೆ ನಿರ್ಮಲಾ ಸೀತಾರಾಮನ್​ಗೆ ಪತ್ರ

ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರ ಕಳೆದ ತಿಂಗಳು ದೊಡ್ಡಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಸರ್ಕಾರ ಉದ್ಯೋಗ ಮೀಸಲಾತಿ ಜಾರಿಗೆ ಮುಂದಾಗಿ ಅದ್ಯಾಕೋ ಹಿಂದೇಟು ಹಾಕಿದ ಘಟನೆ ಕೂಡಾ ನಡೆದಿತ್ತು. ಆದರೆ ಈ ಬೆನ್ನಲೆ ಈಗ ರಾಜ್ಯದ ಬ್ಯಾಂಕ್​ಗಳಲ್ಲಿ ಹಿಂದಿ ಹೇರಿಕೆ ಕಂಡು ಬರುತ್ತಿದೆ. ಈ ವಿರುದ್ಧ ಕನ್ನಡ ಪ್ರಾಧಿಕಾರ ಗರಂ ಆಗಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಗೆ ಪತ್ರ ಬರೆಯಲು ಮುಂದಾಗಿದೆ.

ಇದನ್ನೂ ಓದಿ: ಬೆಂಗಳೂರು: ಹೊಸ ವರ್ಷದ ದಿನ ಡ್ರಗ್ ನಶೆಯಲ್ಲಿದ್ದವರ ಪತ್ತೆಗೆ ಪೊಲೀಸರ ಕೈಗೆ ಸಿಕ್ತು ಹೊಸ ಅಸ್ತ್ರ

ಬೆಂಗಳೂರಿನಲ್ಲಿ ಕೆಲವು ಬ್ಯಾಂಕ್​ಗಳಲ್ಲಿ ಹಿಂದಿ ಹಾಗೂ ಇಂಗ್ಲಿಷ್​ನಲ್ಲಿ ವ್ಯವಹಾರ ಮಾಡಲಾಗುತ್ತಿದೆ. ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಈ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೇಸರ ಹೊರ ಹಾಕಿದೆ. ಹಿಂದಿ ಹೇರಿಕೆ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಂದ್ರ ಸಚಿವ ನಿರ್ಮಲಾ ಸೀತಾರಮನ್​ಗೆ ಪತ್ರ ಬರೆದು ಮನವಿ ಮಾಡಿದೆ. ಬೆಂಗಳೂರು ಸೇರಿದ್ದಂತೆ ರಾಜ್ಯದ ಹಲವು ಬ್ಯಾಂಕ್​ಗಳಲ್ಲಿ ಕನ್ನಡ ನಿರಾಕರಣೆ ಮಾಡಲಾಗುತ್ತಿದೆ. ಸಾಕಷ್ಟು ಜನರಿಗೆ ದೊಡ್ಡ ಸಂಕಷ್ಟಕ್ಕೆ ಇದು ಕಾರಣವಾಗಿದೆ.

ಕನ್ನಡದಲ್ಲೇ ವ್ಯವಹಾರ ಕಡ್ಡಾಯಕ್ಕೆ ಆಗ್ರಹ

ಇತ್ತೀಚಿನ ವರ್ಷಗಳಲ್ಲಿ ವಿವಿಧ ಬ್ಯಾಂಕುಗಳು ರಾಜ್ಯದ ತಮ್ಮ ಶಾಖೆಗಳಿಗೆ ಬೇರೆ ಬೇರೆ ರಾಜ್ಯಗಳ ಸಿಬ್ಬಂದಿಯನ್ನು ನಿಯೋಜಿಸುತ್ತಿರುವುದು ಹೆಚ್ಚುತ್ತಿದೆ. ಇದರಿಂದ ಕನ್ನಡ ತಿಳಿದಿಲ್ಲದ ಬ್ಯಾಂಕ್‌ ಉದ್ಯೋಗಿಗಳೊಂದಿಗೆ ವ್ಯವಹರಿಸಲು ಕನ್ನಡಿಗರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ರಾಜ್ಯದ ಎಲ್ಲ ಬ್ಯಾಂಕುಗಳಿಗೆ ನೇಮಕಾತಿ ವೇಳೆ ಕನ್ನಡ ಬಲ್ಲವರನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ಬ್ಯಾಂಕ್‌ ಉದ್ಯೋಗಿಗಳು ಕನ್ನಡಿಗರೊಂದಿಗೆ ಕನ್ನಡದಲ್ಲೇ ವ್ಯವಹರಿಸುವುದನ್ನು ಕಡ್ಡಾಯಗೊಳಿಸಬೇಕು ಎಂಬುದು ಕನ್ನಡಿಗರ ಆಗ್ರಹವಾಗಿದೆ.

ಹೀಗಾಗಿ ಬೆಂಗಳೂರು ಸೇರಿದ್ದಂತೆ ರಾಜ್ಯದ ಬ್ಯಾಂಕ್​ಗಳ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಭಾಷೆಗೆ ಪ್ರಾತಿನಿಧ್ಯ ದೊರಕಿಸಬೇಕು. ಬ್ಯಾಂಕ್ ಮುಖ್ಯಸ್ಥರಿಗೆ ಜಿಲ್ಲಾಡಳಿತ ಸೂಚನೆ ನೀಡುವಂತೆ ಒತ್ತಾಯಿಸಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಕನ್ನಡ ಪ್ರಾಧಿಕಾರ ಪತ್ರ ಬರೆದು ಮನವಿ ಮಾಡಿದೆ.

ಅನೇಕ ಬ್ಯಾಂಕ್​ಗಳಲ್ಲಿ ಕನ್ನಡವನ್ನು ಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ತ್ರಿಭಾಷಾ ಸೂತ್ರ ಅನುಸರಿಸಲಾಗುತ್ತಿದೆ ಎಂದು ಹೇಳುತ್ತಲೇ ಅತ್ತ ಇಂಗ್ಲಿಷ್‌ ಭಾಷೆಯೂ ಇಲ್ಲದೆ, ಇತ್ತ ಕನ್ನಡವೂ ಇಲ್ಲದೆ, ಕೇವಲ ಹಿಂದಿಯನ್ನೇ ಬಳಸಲಾಗುತ್ತಿದೆ. ಕನ್ನಡ ನೆಲದಲ್ಲೇ ವ್ಯವಹರಿಸುತ್ತಿರುವ ಬ್ಯಾಂಕ್‌ ನೆಲದ ಭಾಷೆಯನ್ನೇ ಕಡೆಗಣಿಸುವ ಮೂಲಕ ಕನ್ನಡ ಭಾಷೆ ಮತ್ತು ಅದನ್ನಾಡುವ ಜನರಿಗೆ ಅವಮಾನ ಮಾಡುತ್ತಿದೆ. ಸದ್ಯ ಬ್ಯಾಂಕ್​ಗಳಲ್ಲಿ ಎಲ್ಲವೂ ಹಿಂದಿಮಯವಾಗಿದೆ.

ಇದನ್ನೂ ಓದಿ: KSRTCಗೆ ಸತತ 10ನೇ ಬಾರಿಗೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ರೋಲಿಂಗ್ ಶೀಲ್ಡ್ ಪ್ರಶಸ್ತಿ

ಹಣ ಕಟ್ಟುವ ಚಲನ್‌, ಸ್ವೀಕೃತಿ ಚೆಕ್‌, ಬೇಡಿಕೆ ಹುಂಡಿ (ಡಿಡಿ) ಹಾಗೂ ಖಾತೆ ತೆರೆಯುವ ಅರ್ಜಿ ನಮೂನೆ ಸೇರಿದಂತೆ ವಿವಿಧ ರೀತಿಯ ಅರ್ಜಿ ನಮೂನೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಎರಡಕ್ಕೂ ಸ್ಥಾನವಿತ್ತು. ಆದರೆ ಈಗ ಇಲ್ಲೆಲ್ಲ ಹಿಂದಿಯೇ ಕಂಡು ಬರುತ್ತಿದೆ. ಕನಿಷ್ಠ ಪ್ರಮಾಣದಲ್ಲಿ ಆದ್ರೂ ಕನ್ನಡಿಗರಿಗೆ ಕರ್ನಾಟಕದಲ್ಲಿ ಉದ್ಯೋಗ ದೊರಕಬೇಕಿದೆ. ಈ ಮೂಲಕ ಕನ್ನಡ ಮಾತನಾಡುವ ಹಾಗೂ ಬಳಸುವ ಜನರಿಗೆ ಇದು ಅನಕೂಲವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:38 pm, Sun, 8 December 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ