KSRTCಗೆ ಸತತ 10ನೇ ಬಾರಿಗೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ರೋಲಿಂಗ್ ಶೀಲ್ಡ್ ಪ್ರಶಸ್ತಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಲ್ಲಿ ಅತ್ಯಧಿಕ ನಿಧಿ ಸಂಗ್ರಹಿಸಿದ ಸರ್ಕಾರಿ ಸಂಸ್ಥೆ ಎಂದು ಗೌರವಿಸಲ್ಪಟ್ಟಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಕೆಎಸ್ಆರ್ಟಿಸಿಗೆ ರೋಲಿಂಗ್ ಶೀಲ್ಡ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಇದು ನಿಗಮಕ್ಕೆ ಸತತ 10ನೇ ಬಾರಿಗೆ ಲಭಿಸಿರುವ ಪ್ರಶಸ್ತಿಯಾಗಿದೆ.
ಬೆಂಗಳೂರು, ಡಿಸೆಂಬರ್ 07: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಸಮಾರಂಭದಲ್ಲಿ ರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿ ಅತೀ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣಾ ಮಾಡಿರುವ ಸಂಸ್ಥೆಯ ಪ್ರಶಸ್ತಿಯು ಕೆಎಸ್ಆರ್ಟಿಸಿಗೆ ಲಭಿಸಿದೆ. ನಿಗಮವು ಸತತ 10ನೇ ಬಾರಿಗೆ ರೋಲಿಂಗ್ ಶೀಲ್ಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಈ ಪ್ರಶಸ್ತಿಯನ್ನು ರಾಜ್ಯಪಾಲ ಶ್ರೀಯುತ ಥಾವರ್ ಚಂದ್ ಗೆಹ್ಲೋಟ್, ಡಾ. ಶಾಲಿನಿ ರಜನೀಶ ಭಾಆಸೇ., ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಎಸ್.ಆರ್. ಉಮಾಶಂಕರ್ ಭಾಆಸೇ., ಅಪರ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಮೇಜರ್ ಜನರಲ್ ಬಿಜಿ ಗಿಲಗಂಚಿ, ಎವಿಎಸ್ಎಮ್ (ನಿವೃತ್ತ), ರವರು, ಕೆಎಸ್ಆರ್ಟಿಸಿಯ ಅಧಿಕಾರಿಗಳಾದ ಡಾ. ಲತಾ ಟಿ.ಎಸ್. ಮಂಡಳಿ ಕಾರ್ಯದರ್ಶಿ/ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಮಂಜುಳಾ ಎಸ್. ನಾಯಕ್, ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು, ಹೆಚ್.ಡಿ. ಗೌರಾಂಭ, ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ರವರುಗಳಿಗೆ ಪ್ರದಾನ ಮಾಡಿದರು.
ಈ ಸಮಾರಂಭದಲ್ಲಿ ಬ್ರಿಗೇಡಿಯರ್ ಎಮ್. ಬಿ. ಶಶಿಧರ್ (ನಿವೃತ್ತ) ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ರವರು ಉಪಸ್ಥಿತರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ