ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಅಡುಗೆ ಮಾಡ್ತಿದ್ದಾಗ ಕುಕ್ಕರ್ ಸ್ಫೋಟ; ಓರ್ವ ಮಹಿಳೆಯಗೆ ಗಾಯ, ಮೂವರು ಪಾರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 09, 2023 | 4:52 PM

ಬಳ್ಳಾರಿ(Ballari) ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(Government School)ಯಲ್ಲಿ ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಅಡುಗೆ ಮಾಡುತ್ತಿದ್ದಾಗ ಕುಕ್ಕರ್ ಸ್ಫೋಟವಾದ ಘಟನೆ ನಡೆದಿದೆ. ಈ ವೇಳೆ ಅಡುಗೆ ಮಾಡುತ್ತಿದ್ದ ಲೋಕಮ್ಮ ಎಂಬುವವರಿಗೆ ಬಿಸಿ ನೀರು ಸಿಡಿದು ಗಾಯವಾಗಿದ್ದು, ಅವರನ್ನು ಕಂಪ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಅಡುಗೆ ಮಾಡ್ತಿದ್ದಾಗ ಕುಕ್ಕರ್ ಸ್ಫೋಟ; ಓರ್ವ ಮಹಿಳೆಯಗೆ ಗಾಯ, ಮೂವರು ಪಾರು
ಕಂಪ್ಲಿ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಕುಕ್ಕರ್​ ಸ್ಪೋಟ
Follow us on

ಬಳ್ಳಾರಿ, ನ.09: ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಅಡುಗೆ ಮಾಡುತ್ತಿದ್ದಾಗ ಕುಕ್ಕರ್ ಸ್ಫೋಟವಾದ ಘಟನೆ ಬಳ್ಳಾರಿ(Ballari) ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(Government School)ಯಲ್ಲಿ ನಡೆದಿದೆ. ಹೌದು, ಒಲೆಯ ಮೇಲೆ ತೊಗರಿಬೇಳೆ ಬೇಯಿಸಲು ಇಟ್ಟಿದ್ದಾಗ ಕುಕ್ಕರ್ ಸ್ಫೋಟಗೊಂಡಿದೆ. ಈ ವೇಳೆ ಅಡುಗೆ ಮಾಡುತ್ತಿದ್ದ ಲೋಕಮ್ಮ ಎಂಬುವವರಿಗೆ ಬಿಸಿ ನೀರು ಸಿಡಿದು ಗಾಯವಾಗಿದ್ದು, ಅವರನ್ನು ಕಂಪ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಅದೇ ಕೊಠಡಿಯಲ್ಲಿದ್ದ ಮೂವರು ಮಹಿಳೆಯರು ಪಾರಾಗಿದ್ದಾರೆ.

ಇನ್ನು ಇದೇ ನವೆಂಬರ್​ 2 ರಂದು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ನಿಲಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಇಬ್ಬರು ಶಿಕ್ಷಕರು ಸೇರಿದಂತೆ ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾದ ಘಟನೆ ನಡೆದಿತ್ತು. ಮುಖ್ಯ ಶಿಕ್ಷಕ ಮಹದೇವಯ್ಯ, ಶಿಕ್ಷಕಿ ಮೀನಾಕ್ಷಿ ಸೇರಿ ವಿದ್ಯಾರ್ಥಿಗಳಾದ ಧನುಷ್ ಪೃಥ್ವಿ,ಗೌತಮ್​ಗೆ ಗಂಭೀರ ಗಾಯವಾಗಿತ್ತು. ಈ ಹಿನ್ನಲೆ ಕೂಡಲೇ ಗಾಯಾಳುಗಳನ್ನು ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದಾದ ಬಳಿಕ ಆಸ್ಪತ್ರೆಗೆ ಬಿಇಒ ಶೋಭಾ ಅವರು ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಇಂತಹುದೇ ಘಟನೆ ಇದೀಗ ಕಂಪ್ಲಿ ತಾಲೂಕಿನ ಸರ್ಕಾರಿ ಶಾಲೆಯಲ್ಲೆ ನಡೆದಿದೆ.

ಇದನ್ನೂ ಓದಿ:ಸರ್ಕಾರಿ ಶಾಲೆಯಲ್ಲಿ ಗ್ಯಾಸ್​ ಸಿಲಿಂಡರ್ ಸ್ಫೋಟ; ಶಿಕ್ಷಕರು ಸೇರಿ ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಇತ್ತೀಚೆಗೆ ತೆಲಂಗಾಣದಲ್ಲಿ ಸಿಲಿಂಡರ್ ಸ್ಪೋಟಗೊಂಡು  ಗಂಭೀರ ಗಾಯಗೊಂಡಿದ್ದ ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಕಾರ್ಮಿಕ ಅಭಿ ಎನ್ನುವವರಿಗೆ ಚಿಕಿತ್ಸೆ ಕೊಡಿಸದೆ ಬೇಕರಿ ಮಾಲೀಕ ಅಮಾನವೀಯತೆ ತೋರಿದ್ದ ಘಟನೆ ನಡೆದಿತ್ತು. ಹಾಲ್ತೋರೆ ಗ್ರಾಮದ ನಿವಾಸಿಯಾದ ಪ್ರತಾಪ್‌ಗೌಡ, ಮಾಲೀಕತ್ವದ ಬೇಕರಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದ. ಜೂನ್​​ 2ರಂದು ಬೇಕರಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಅಭಿಗೆ ಗಂಭೀರವಾಗಿ ಗಾಯವಾಗಿತ್ತು. ಬಳಿಕ 5 ಸಾವಿರ ಹಣ ನೀಡಿ, ಊರಿಗೆ ಕಳಿಸಿದ್ದ. ಇದಾದ ನಂತರ ಚಿಕಿತ್ಸಾ ವೆಚ್ಚ, ಪರಿಹಾರ ಕೊಡಿಸುವಂತೆ ಅಭಿ ಕಣ್ಣೀರು ಹಾಕಿದ್ದ ಘಟನೆ ನಡೆದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:50 pm, Thu, 9 November 23