ಬಳ್ಳಾರಿ: ಪಿಂಚಣಿ ಹಣಕ್ಕಾಗಿ ಜೆಸ್ಕಾಂ ಕಚೇರಿ ಮುಂದೆ ನಿವೃತ್ತ ನೌಕರ ಭಿಕ್ಷಾಟನೆ
ನಿವೃತ್ತ ಪವರ್‌ಮ್ಯಾನ್ ನಿಜಲಿಂಗಪ್ಪ ಎಂಬುವವರಿಗೆ 2 ವರ್ಷದಿಂದ ಪಿಂಚಣಿ ಹಣ ಬಂದಿಲ್ಲ. ಹೀಗಾಗಿ ಅವರು ಬಳ್ಳಾರಿ ಜೆಸ್ಕಾಂ ಕಚೇರಿ ಗೇಟ್ ಮುಂದೆ ಕುಳಿತು ಭಿಕ್ಷಾಟನೆ ಮಾಡಿದ್ದಾರೆ. ಪಿಂಚಣಿ ಬರ್ತಿಲ್ಲ, ಜೀವನ ಮಾಡೋಕೆ ಆಗ್ತಿಲ್ಲ. ಪಿಂಚಣಿ ನೀಡಿ ಎಂದು ಕಣ್ಣೀರು ಹಾಕಿದ್ದಾರೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೇರೆ ಗ್ರಾಮದ ನಿಜಲಿಂಗಪ್ಪ ಅವರು 2022ರಲ್ಲಿ ನಿವೃತ್ತಿ ಹೊಂದಿದ್ದರು.
ಬಳ್ಳಾರಿ, ಫೆ.13: ಪಿಂಚಣಿ (Pension) ಹಣಕ್ಕಾಗಿ ಜೆಸ್ಕಾಂ (Gescom) ನಿವೃತ್ತ ನೌಕರ ಭಿಕ್ಷಾಟನೆ ಮಾಡಿದ ಘಟನೆ ನಡೆದಿದೆ. ಬಳ್ಳಾರಿ ಜೆಸ್ಕಾಂ ಕಚೇರಿ ಗೇಟ್ ಮುಂದೆ ಕುಳಿತು ಬಳ್ಳಾರಿಯ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿದ್ದ ನಿವೃತ್ತ ನೌಕರ ಭಿಕ್ಷಾಟನೆ ಮಾಡಿದ್ದಾರೆ. ಪಿಂಚಣಿ ಬರ್ತಿಲ್ಲ, ಜೀವನ ಮಾಡೋಕೆ ಆಗ್ತಿಲ್ಲ ಎಂದು ಭಿಕ್ಷಾಟನೆ ಮಾಡಿದ್ದಾರೆ. ಪಿಂಚಣಿ ನೀಡಿ ಎಂದು ಕಣ್ಣೀರು ಹಾಕಿದ್ದಾರೆ.
ನಿವೃತ್ತ ಪವರ್‌ಮ್ಯಾನ್ ನಿಜಲಿಂಗಪ್ಪ ಎಂಬುವವರು 1997 ರಲ್ಲಿ ದಿನಗೂಲಿ ನೌಕರನಾಗಿ ಸೇರಿದ್ದರು. 2008ರಲ್ಲಿ ಕೆಲಸ ಪರ್ಮನೆಂಟ್ ಆಗಿತ್ತು. ಎನ್ಪಿಎಸ್ (ನ್ಯಾಷನಲ್ ಪೆನ್ಷನ್ ಸ್ಕೀಮ್) ಅಡಿ ಪಿಂಚಣಿ ಬರಬೇಕಿತ್ತು. ನಿಜಲಿಂಗಪ್ಪ ಕೋರ್ಟ್ ಗೆ ಹೋಗಿದ್ದಾರಂತೆ, ಕೋರ್ಟ್ ನಲ್ಲಿ 1997 ರಿಂದಲೂ ಕೆಲಸ ಮಾಡಿದ್ದರಿಂದ ಒಪಿಎಸ್ ಅಡಿ ಪಿಂಚಣಿ ನೀಡುವಂತೆ ಕೋರ್ಟ್ನಿಂದ ನಿರ್ದೇಶನ ಸಿಕ್ಕಿತ್ತು. ಆದರೆ ಕೋಟ್೯ ಆದೇಶ ಮಾಡಿದ್ರು ಪಿಂಚಣಿ ಹಣ ಸಿಕ್ಕಿಲ್ಲ. ಹೀಗಾಗಿ ಭಿಕ್ಷಾಟನೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ರೈಲ್ವೆ ಟ್ರ್ಯಾಕ್ ಗಳಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಂ ಅಳವಡಿಕೆ, ಇದರಿಂದಾಗುವ ಲಾಭವೇನು? ಇಲ್ಲಿದೆ ಮಾಹಿತಿ
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೇರೆ ಗ್ರಾಮದ ನಿಜಲಿಂಗಪ್ಪ ಅವರು 2022ರಲ್ಲಿ ನಿವೃತ್ತಿ ಹೊಂದಿದ್ದು 2 ವರ್ಷದಿಂದ ಪಿಂಚಣಿ ಹಣಕ್ಕಾಗಿ ಕಚೇರಿ ಕಚೇರಿ ಅಲೆಯುತ್ತಿದ್ದಾರೆ.ಎರಡು ವರ್ಷದಿಂದ ಪೆನ್ಷನ್ ನೀಡದ ಹಿನ್ನಲೆ ಕಚೇರಿ ಮುಂದೆ ಕುಳಿತು ನಿವೃತ್ತ ಪವರ್‌ಮ್ಯಾನ್ ನಿಜಲಿಂಗಪ್ಪ ಅವರು ಭಿಕ್ಷಾಟನೆ ಮಾಡಿದ್ದಾರೆ. ಜೆಸ್ಕಾಂ ಇಲಾಖೆ ಪಿಂಚಣಿಗಾಗಿ ನಾಲ್ಕು ಲಕ್ಷ ಹಣ ಉಳಿಸಿಕೊಂಡಿದೆ. ಅಲೆ ಅಲೆದು ಸುಸ್ತಾಗಿ ಬಿಕ್ಷೆ ಬೇಡಿ ಹಣ ಸಂಗ್ರಹಕ್ಕೆ ಮುಂದಾದ ನಿಜಲಿಂಗಪ್ಪ ಅವರ ಸಮಸ್ಯೆ ಕೇಳುವವರಿಲ್ಲದಂತಾಗಿದೆ. ಮನೆ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ನೀಡುವ ಸರ್ಕಾರ ಪವರ್ ಮ್ಯಾನ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ನಿಜಲಿಂಗಪ್ಪನವರು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ