ಬೆಂಗಳೂರಿನ ರೈಲ್ವೆ ಟ್ರ್ಯಾಕ್ ಗಳಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಂ ಅಳವಡಿಕೆ, ಇದರಿಂದಾಗುವ ಲಾಭವೇನು? ಇಲ್ಲಿದೆ ಮಾಹಿತಿ

ರಾಜಧಾನಿ ಬೆಂಗಳೂರಿಗೆ ರೈಲಿನ ಮೂಲಕ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಆದರೆ ಸರಿಯಾದ ಸಮಯಕ್ಕೆ ತಲುಪಲು ಆಗೋದಿಲ್ಲ. ರೈಲ್ವೆ ಕ್ರಾಸಿಂಗ್, ಸಿಗ್ನಲ್‌ ಪ್ರಾಬ್ಲಮ್ ನಿಂದ ರೈಲಿನಲ್ಲೇ ಗಂಟೆಗಟ್ಟಲೆ ಪ್ರಯಾಣಿಕರು ಕಾಯಬೇಕು. ಅದನ್ನು ತಪ್ಪಿಸಲು ‌ರೈಲ್ವೆ ಇಲಾಖೆ ಆಟೋಮ್ಯಾಟಿಕ್ ಸಿಗ್ನಲಿಂಗ್ ಮೊರೆ ಹೋಗಿದೆ.

ಬೆಂಗಳೂರಿನ ರೈಲ್ವೆ ಟ್ರ್ಯಾಕ್ ಗಳಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಂ ಅಳವಡಿಕೆ, ಇದರಿಂದಾಗುವ ಲಾಭವೇನು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
Kiran Surya
| Updated By: ಆಯೇಷಾ ಬಾನು

Updated on: Feb 13, 2024 | 1:18 PM

ಬೆಂಗಳೂರು, ಫೆ.13: ಇನ್ಮುಂದೆ ರೈಲುಗಳ ವಿಳಂಬ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ರೈಲುಗಳ ಸುಗಮ ಸಂಚಾರಕ್ಕೆ ನೈರುತ್ಯ ರೈಲ್ವೆಯಿಂದ ಪ್ಲ್ಯಾನ್ ಮಾಡಲಾಗಿದ್ದು, ಬೆಂಗಳೂರು, ಮೈಸೂರು ರೈಲ್ವೆ ವಿಭಾಗಕ್ಕೆ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದ್ದು, ಬೆಂಗಳೂರು – ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಆರು ಯೋಜನೆಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. 874.13 ಕೋಟಿ ರುಪಾಯಿ ವೆಚ್ಚದಲ್ಲಿ ಒಟ್ಟು 639.05 ಕಿ.ಮೀ. ರೈಲ್ವೆ ಮಾರ್ಗದಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಂ (Automatic Signaling System) ಜಾರಿಯಾಗಲಿದೆ.

ರಾಜಧಾನಿ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಐಟಿ ಹಬ್ ಆಗಿ ಬೆಳೆದಿದೆ. ಪ್ರತಿದಿನ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆಯಿದೆ. ರೈಲಿನ ಮೂಲಕ ದೇಶದ ಮೂಲೆ ಮೂಲೆಗಳಿಂದ ಕೋಟ್ಯಾಂತರ ಪ್ರಯಾಣಿಕರು ಬಂದು ಹೋಗ್ತಾರೆ, ಆದರೆ ಬೆಂಗಳೂರಿನಿಂದ ಸರಿಯಾದ ಸಮಯಕ್ಕೆ ತಮ್ಮ ಊರು ತಲುಪಲು ಆಗ್ತಿಲ್ಲ. ತಮ್ಮ ಊರುಗಳಿಂದ ರಾಜಧಾನಿಗೆ ಬರಬೇಕೆಂದರು ಸರಿಯಾದ ಸಮಯಕ್ಕೆ ರೀಚ್ ಆಗಲು ಆಗ್ತಿಲ್ಲ. ಕಾರಣ ಸರಿಯಾಗಿ ಸಿಗ್ನಲ್ ಸಿಗಲ್ಲ ಈ ಕಾರಣಕ್ಕಾಗಿಸೌತ್ ವೆಸ್ಟರ್ನ್ ರೈಲ್ವೆ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಮ್ ಅನ್ನು ಅಳವಡಿಸಲು ಪ್ಲಾನ್ ಮಾಡಿಕೊಂಡಿದ್ದು, ಇದಕ್ಕೆ ಕೇಂದ್ರ ರೈಲ್ವೆ ಬೋರ್ಡ್ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದು ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಂನಿಂದ ರೈಲ್ವೆ ನಿಲ್ದಾಣದ ಟ್ರ್ಯಾಕ್‌ಗಳಲ್ಲಿ ರೈಲುಗಳು ನಿಂತಿರುವ, ತೆರಳಿರುವ ರೈಲಿನ ಬಗ್ಗೆ ಪಕ್ಕಾ ಮಾಹಿತಿ ರೈಲ್ವೆ ಕಮಾಂಡ್ ಸೆಂಟರ್‌ ಸಿಗಲಿದೆ. ರೈಲುಗಳ ವಿಳಂಬ ಸಂಚಾರ ನಿಯಂತ್ರಿಸಲು ಅನುಕೂಲವಾಗಲಿದೆ ಸುರಕ್ಷತೆ ದೃಷ್ಟಿಯಿಂದ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಹಕಾರಿಯಾಗಲಿದ್ದು, ರೈಲ್ವೆ ಅಪಘಾತ ತಡೆಯುವಲ್ಲಿಯು ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ರೈಲ್ವೆ ಅಧಿಕಾರಿ ಕುಸುಮ ಹರಿಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಕರೆಂಟ್ ಇಲ್ಲದೆ ವಸತಿ ಶಾಲೆಯ ಮಕ್ಕಳ ಪರದಾಟ, ಬೀದಿ ದೀಪದ ಬೆಳಕಲ್ಲಿ ಓದು

ಯಾವ್ಯಾವ ಮಾರ್ಗ?

ಬೆಂಗಳೂರು ಸಿಟಿ- ಯಶವಂತಪುರ- ಯಲಹಂಕ 17.75 ಕಿ.ಮೀ, ಯಶವಂತಪುರ- ಅರಸಿಕೆರೆ 160.65 ಕಿ. ಮೀ, ಲೊಟ್ಟೆಗೊಲ್ಲಹಳ್ಳಿ- ಹೊಸೂರು 63.6 ಕಿ. ಮೀ, ವೈಟ್ ಫೀಲ್ಡ್- ಜೋಲಾರ್ ಪೇಟೆ 119 ಕಿಲೋ ಮೀಟರ್, ಬೈಯಪ್ಪನಹಳ್ಳಿ – ಪೆನುಕೊಂಡ ವಿಭಾಗ ಚನ್ನಸಂದ್ರ ಮಾರ್ಗವಾಗಿ 139.89 ಕಿ.ಮೀ, ಬೆಂಗಳೂರು ಟೂ ಮೈಸೂರು 138.25 ಕಿ.ಮೀ ಮಾರ್ಗದಲ್ಲಿ ಇರಲಿದೆ.

ಸಾಕಷ್ಟು ಸಮಯದಲ್ಲಿ ಸರಿಯಾದ ಸಮಯಕ್ಕೆ ರೈಲು ಹೋಗೋದಿಲ್ಲ ನಿಂತಲ್ಲೇ ನಿಂತಿರುತ್ತದೆ ಕಾರಣ ಸಿಗ್ನಲ್ ಸರಿಯಾಗಿ ಸಿಗದ ಕಾರಣದಿಂದಾಗಿ, ನೂತನವಾಗಿ ಅಳವಡಿಸಲು ಮುಂದಾಗಿರುವ ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆಯಿಂದ ಈ ಸಮಸ್ಯೆ ಇರೋದಿಲ್ಲ.8 ರಿಂದ 15 ಕಿಮೀ ಒಂದು ಬ್ಲಾಕ್. ಈ ಬ್ಲಾಕ್ ನಲ್ಲಿ ಒಂದು ರೈಲು ಚಾಲನೆ ಮಾಡಬೇಕಾದರೆ ಮತ್ತೊಂದು ರೈಲು ಸಂಚಾರ ಮಾಡಲು ಆಗೋದಿಲ್ಲ. ಹಾಗಾಗಿ ಆ ಬ್ಲಾಕ್ ನಿಂದ ಮತ್ತೊಂದು ಬ್ಲಾಕ್ ಗೆ ಹೋದ ನಂತರ ಮಾತ್ರ ಆ ಟ್ರ್ಯಾಕ್ ನಲ್ಲಿ ಮತ್ತೊಂದು ರೈಲನ್ನು ಒಡಿಸಬಹುದು. ಈ ಆಟೋಮ್ಯಾಟಿಕ್ ಸಿಗ್ನಲ್ ವ್ಯವಸ್ಥೆಯಿಂದ ಹದಿನೈದು ಕಿ.ಮೀ ಬ್ಲಾಕ್ ನಲ್ಲಿ ಒಂದು ಟ್ರೈನ್ ಇದ್ರು ಕೂಡ ಮೂರರಿಂದ ನಾಲ್ಕು ರೈಲುಗಳನ್ನು ಓಡಿಸಬಹುದು ಹೀಗಾಗಿ ರೈಲ್ ಕ್ಯಾಪಾಸಿಟಿ ಹೆಚ್ಚಾಗುತ್ತದೆ. ಪ್ರಯಾಣಿಕರಿಗೆ ಗಂಟೆಗಟ್ಟಲೆ ಕಾಯುವುದು ತಪ್ಪುತ್ತದೆ ಎಂದು ತಜ್ಞರಾದ ಶ್ರೀ ಹರಿ ತಿಳಿಸಿದರು.

ಒಟ್ನಲ್ಲಿ ಪ್ರಯಾಣಿಕರಿಗೆ ರೈಲ್ವೆ ಸಿಗ್ನಲ್ ಗಳಿಂದ ಆಗ್ತಿದ್ದ ತೊಂದರೆ ತಪ್ಪಿಸಲು ಕೇಂದ್ರ ರೈಲ್ವೆ ಇಲಾಖೆ ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸಲು ಗ್ರೀನ್ ಸಿಗ್ನಲ್ ಏನೋ ಕೊಟ್ಟಿದೆ. ಆದರೆ ಈ ಸಿಸ್ಟಮ್ ಯಾವಾಗಿನಿಂದ ಕಾರ್ಯಾರಂಭ ಮಾಡುತ್ತದೆ ಪ್ರಯಾಣಿಕರಿಗೆ ಸಮಸ್ಯೆ ತಪ್ಪುತ್ತದೆ ಎಂದು ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ