April 16, 17: ಸಚಿವ ಆನಂದ ಸಿಂಗ್ ಸಾರಥ್ಯದ ನೂತನ ಜಿಲ್ಲೆ ವಿಜಯನಗರದಲ್ಲಿ ಈ ಬಾರಿ ಬಿಜೆಪಿ ಕಾರ್ಯಕಾರಣಿ
ಬಿಜೆಪಿ ಚುನಾವಣೆ ಬಂದಾಗ ಕೆಲಸ ಮಾಡುವ ಪಕ್ಷ ಅಲ್ಲ. ಬಿಜೆಪಿ ವರ್ಷಪೂರ್ತಿ 24/7 ಕೆಲಸ ಮಾಡುವ ಪಕ್ಷ. ವಿಜಯನಗರದಲ್ಲಿ ನಡೆಯುವ ಪಕ್ಷದ ಕಾರ್ಯಕಾರಿಣಿಯಿಂದಲೇ ಚುನಾವಣೆ ಕೆಲಸ ಆರಂಭಿಸುತ್ತೇವೆ. ಬೇರೆ ಪಕ್ಷಗಳು ಚುನಾವಣೆ ಬಂದಾಗ ಕೆಲಸ ಮಾಡುತ್ತವೆ. ಅದು ಬನ್ನೀ ಬನ್ನೀ ಎಂದು ದುಂಬಾಲು ಬಿದ್ದು ಕಾರ್ಯಕರ್ತರನ್ನ ಕರೆದು ಪಕ್ಷ ಸಂಘಟನೆ ಮಾಡುತ್ವೆ. ಬಿಜೆಪಿ ವಿಜಯನಗರದಿಂದಲೇ ವಿಜಯೋತ್ಸವ ಆಚರಿಸುತ್ತೆ - ಪ್ರವಾಸೋದ್ಯಮ ಸಚಿವ ಆನಂದ ಸಿಂಗ್
ವಿಜಯನಗರ: ಮುಂದಿನ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದಿಂದ ಚಟುವಟಿಕೆಗಳು ಗರಿಗೆದರಿವೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುವ ಹೊತ್ತಿನಲ್ಲೇ ಅತ್ತ ನೂತನ ಜಿಲ್ಲೆ ವಿಜಯನಗರದಲ್ಲಿ ದೊಡ್ಡ ಮಟ್ಟದಲ್ಲಿ ಪಕ್ಷದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಎಪ್ರಿಲ್ 16, 17 ರಂದು (ಶನಿವಾರ ಭಾನುವಾರ) ಹೊಸಪೇಟೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ನಡೆಯಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಮಾಹಿತಿ ನೀಡಿದ್ದಾರೆ. ತಮ್ಮ ಬಹುಕನಸಿನ ನೂತನ ಜಿಲ್ಲೆ ವಿಜಯನಗರ ಅಸ್ತಿತ್ವಕ್ಕೆ ಬಂದ ಬಳಿಕ ದೊಡ್ಡ ಮಟ್ಟದಲ್ಲಿ ಪಕ್ಷದ ಕಾರ್ಯಕ್ರಮ ಇಲ್ಲಿ ಆಯೋಜಿಸುತ್ತಿರುವುದು ಸಚಿವ ಆನಂದ ಸಿಂಗ್ಗೆ ಹೊಸ ಹುರುಪು ನೀಡಿದಂತಿದೆ.
ಬಿಜೆಪಿ ಚುನಾವಣೆ ಬಂದಾಗ ಕೆಲಸ ಮಾಡುವ ಪಕ್ಷ ಅಲ್ಲ. ಬಿಜೆಪಿ ವರ್ಷಪೂರ್ತಿ 24/7 ಕೆಲಸ ಮಾಡುವ ಪಕ್ಷ. ವಿಜಯನಗರದಲ್ಲಿ ನಡೆಯುವ ಪಕ್ಷದ ಕಾರ್ಯಕಾರಿಣಿಯಿಂದಲೇ ಚುನಾವಣೆ ಕೆಲಸ ಆರಂಭಿಸುತ್ತೇವೆ. ಬೇರೆ ಪಕ್ಷಗಳು ಚುನಾವಣೆ ಬಂದಾಗ ಕೆಲಸ ಮಾಡುತ್ತವೆ. ಅದು ಬನ್ನೀ ಬನ್ನೀ ಎಂದು ದುಂಬಾಲು ಬಿದ್ದು ಕಾರ್ಯಕರ್ತರನ್ನ ಕರೆದು ಪಕ್ಷ ಸಂಘಟನೆ ಮಾಡುತ್ವೆ. ಬಿಜೆಪಿ ವಿಜಯನಗರದಿಂದಲೇ ವಿಜಯೋತ್ಸವ ಆಚರಿಸುತ್ತೆ. ವಿಜಯನಗರ ಸಾಮ್ರಾಜ್ಯ ಹೇಗೆ ವಿಸ್ತರಣೆ ಆಗಿತ್ತೋ ಅದೇ ರೀತಿ ಇಲ್ಲಿಂದಲೇ ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ವಿಸ್ತರಣೆ ಆರಂಭಿಸುತ್ತೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಬರಲು ಇಲ್ಲಿಂದಲೇ ಕಾರ್ಯ ಆರಂಭಿಸುತ್ತಿದ್ದೇವೆ ಎಂದು ಸಚಿವ ಆನಂದ ಸಿಂಗ್ ಘೋಷಿಸಿದರು.
ಬಿಜೆಪಿ ನಿರಂತರ ಪ್ರಕ್ರಿಯೆಯಲ್ಲಿ ಇರೋ ಪಾರ್ಟಿ. ಪಕ್ಷ ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಯಕಾರಿಣಿ ನಡೆಸುತ್ತಾ ಬಂದಿದೆ. ಎಪ್ರಿಲ್ ತಿಂಗಳ ಮಧ್ಯೆ ಬಿಜೆಪಿ ಕಾರ್ಯಕಾರಣಿ ವಿಜಯನಗರದಲ್ಲಿ ನಡೆಯಲಿದೆ. ಕಾರ್ಯಕಾರಿಣಿಯಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಕಾರ್ಯಕಾರಿಣಿಯಲ್ಲಿ 650 ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಜೀ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಿಟಿ ರವಿ ಭಾಗಿಯಾಗಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ರಾಜಾಧ್ಯಕ್ಷ ನಳೀನಕುಮಾರ್ ಕಟೀಲ್ ಮತ್ತು ರಾಜ್ಯ ಉಸ್ತುವಾರಿ ಅರುಣ ಕುಮಾರ್ ಸಹ ಭಾಗಿಯಾಗಲಿದ್ದಾರೆ ಎಂದು ಹೊಸಪೇಟೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸುದ್ದಿಗಾರರಿಗೆ ತಿಳಿಸಿದರು.
ಏಪ್ರಿಲ್ 1ರಂದು ತುಮಕೂರಿಗೆ ಅಮಿತ್ ಶಾ ಭೇಟಿ ಏಪ್ರಿಲ್ 1ರಂದು ಡಾ.ಶಿವಕುಮಾರಶ್ರೀಗಳ ಜನ್ಮ ದಿನಾಚರಣೆ ಹಿನ್ನೆಲೆ ಉದ್ಘಾಟನೆಗೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ ಬರುತ್ತಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ್ ಖೂಬಾ, ಸಚಿವರಾದ ವಿ.ಸೋಮಣ್ಣ, ಬಿ.ಸಿ.ನಾಗೇಶ್ ಆಗಮಿಸುತ್ತಿದ್ದಾರೆ. ಏ.1ರ ಸಂಜೆ ಹಂಸಲೇಖ, ವಿಜಯ ಪ್ರಕಾಶ್ರಿಂದ ಕಾರ್ಯಕ್ರಮ ನೆರವೇರಲಿದೆ. ಬಸವ ಭಾರತ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 100 ಜನ ಗಾಯಕರು, 150 ಜನ ಕಲಾವಿದರಿಂದ ಕಾರ್ಯಕ್ರಮದಲ್ಲಿ ಭಾಗಯಾಗಲಿದ್ದು ಪೂಜ್ಯರನ್ನು ಕುರಿತು ರಚನೆ ಮಾಡಿರುವ ಗೀತೆಗಳನ್ನು ಹಾಡುತ್ತಾರೆ ಎಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತುಮಕೂರು: ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಸ್ಮರಣಾರ್ಥದ ದಾಸೋಹ ಕಾರ್ಯಕ್ರಮ ರದ್ದು
Siddaganga Mutt: ನಾಳೆ ಶಿವಕುಮಾರ ಸ್ವಾಮೀಜಿ 3ನೇ ವರ್ಷದ ಪುಣ್ಯಸ್ಮರಣೆ: ಸರಳ ಆಚರಣೆಗೆ ಸಿದ್ದಗಂಗೆ ಮಠ ನಿರ್ಧಾರ
Published On - 4:27 pm, Mon, 28 March 22