AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bellary News: ಕೊಠಡಿಯ ಬಾಗಿಲೇ ಬ್ಲ್ಕಾಕ್​ ಬೋರ್ಡ್​, ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ದಯನೀಯ ಸ್ಥಿತಿ ನೋಡಿ

ಬಳ್ಳಾರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಕೊಠಡಿಯ ಬಾಗಿಲುಗಲೇ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಬ್ಲ್ಯಾಕ್​ ಬೋರ್ಡ್​ ಆಗಿ ಮಾರ್ಪಟ್ಟಿವೆ. ಸರ್ಕಾರಿ ಶಾಲೆಯ ದಯನೀಯ ಸ್ಥಿತಿ ನೋಡಿ.

Bellary News: ಕೊಠಡಿಯ ಬಾಗಿಲೇ ಬ್ಲ್ಕಾಕ್​ ಬೋರ್ಡ್​, ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ದಯನೀಯ ಸ್ಥಿತಿ ನೋಡಿ
ಬಾಗಿಲ ಮೇಲೆ ಬರೆಯುತ್ತಿರವ ಶಿಕ್ಷಕಿ
ರಮೇಶ್ ಬಿ. ಜವಳಗೇರಾ
|

Updated on: Aug 02, 2023 | 9:01 AM

Share

ಬಳ್ಳಾರಿ, (ಆಗಸ್ಟ್ 02): ಕರ್ನಾಟಕದಲ್ಲಿ(Karnataka) ಯಾವುದೇ ಪಕ್ಷದ ಸರ್ಕಾರ ಬರಲಿ. ಆದ್ರೆ, ರಾಜ್ಯದಲ್ಲಿ ಸರ್ಕಾರಿ ಶಾಲೆಗಳ (government schools) ಸ್ಥಿತಿ ಮಾತ್ರ ಸುಧಾರಣೆಯಾಗುತ್ತಿಲ್ಲ. ಕರ್ನಾಟಕದಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಇನ್ನೂ ಮೂಲಸೌಕರ್ಯಗಳಿಲ್ಲದೆ ಬಳಲುತ್ತಿವೆ. ಅದರಲ್ಲೂ ಮುಖ್ಯವಾಗಿ ಶಾಲೆಗಳು ಹೊಂದಿರಬೇಕಾದ ಅತಿಅಗತ್ಯ ಮೂಲ ಸೌಲಭ್ಯಗಳಲ್ಲಿ ಬ್ಲ್ಯಾಕ್ ಬೋರ್ಡ್​. ಈ ಬೋರ್ಡ್​ನಿಂದಲೇ ಮಕ್ಕಳಿಗೆ ವಿಧ್ಯೆ ಕಲಿಸುವುದು. ಆದ್ರೆ, ಈ ಬ್ಲ್ಯಾಕ್ ಬೋರ್ಡ್​ ಇಲ್ಲ ಅಂದ್ರೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಗೆ ಬರೆದು ತೋರಿಸಬೇಕು? ಹೀಗಾಗಿ ಸರ್ಕಾರಿ ಶಾಲೆಗಳಿಗೆ ಬೋರ್ಡ್​ ಅತ್ಯಗತ್ಯವಾಗಿದೆ. ಆದ್ರೆ, ಬಳ್ಳಾರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಬ್ಯ್ಲಾಕ್​ ಬೋರ್ಡ್​ ಇಲ್ಲದೇ ಕೊಠಡಿಯ ಬಾಗಿಲ ಮೇಲೆಯೇ ಬರೆಯಲಾಗುತ್ತಿದೆ. ಈ ಸರ್ಕಾರಿ ಶಾಲೆಗೆ ಇದೆಂಥ ದಯನೀಯ ಸ್ಥಿತಿ ಬಂದೊಗಿದೆ ನೋಡಿ.

ಇದನ್ನೂ ಓದಿ: ರಾಜ್ಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಕಲಿಕೆ ಕುಸಿತ: ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗ

ಬಳ್ಳಾರಿ ಜಿಲ್ಲೆಯ ಸಿರಾವರ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಕೊಠಡಿಯ ಬಾಗಿಲುಗಳು ಬ್ಲ್ಯಾಕ್​ ಬೋರ್ಡ್​ ಆಗಿ ಮಾರ್ಪಟ್ಟಿವೆ. ಹೊಸ ಕಟ್ಟಡ ನಿರ್ಮಾಣವಾಗಿದ್ದರೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಶಿಕ್ಷಕರು ಬಾಗಿಲ ಮೇಲೆ ಬರೆದು ಮಕ್ಕಳಿಗೆ ಪಾಠ ಕಲಿಸುವ ಸ್ಥಿತಿ ಬಂದಿದೆ. ಶಾಲೆಯಲ್ಲಿ 793 ವಿದ್ಯಾರ್ಥಿಗಳಿದ್ದು, ಹಳೆಯ ಕಟ್ಟಡದಲ್ಲಿ ಎಲ್ಲರಿಗೂ ಕೂತು ಪಾಠ ಕೇಳಲು ಸಾಕಾಗುವಷ್ಟು ತರಗತಿ ಕೊಠಡಿಗಳಿಲ್ಲ. ಹೀಗಾಗಿ ಶಿಕ್ಷಕರು ಈಗ ಕೊಠಡಿಗಳ ಹೊರಗೆ ತರಗತಿಗಳನ್ನು ನಡೆಸುತ್ತಿದ್ದಾರೆ. ಅಲ್ಲದೇ ಬಾಗಿಲುಗಳನ್ನೇ ಬ್ಲ್ಯಾಕ್​ ಬೋರ್ಡ್ ಆಗಿ ಬಳಸುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಒಟ್ಟು 18 ಕೊಠಡಿಗಳ ಶಾಲಾ ಕಟ್ಟಡವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಈ ಪೈಕಿ 10 ಕೊಠಡಿಗಳನ್ನು ಹಸ್ತಾಂತರಿಸಲಾಗಿದ್ದು, ಉಳಿದ ಕೊಠಡಿಗಳನ್ನು ಬಳಸಲು ಅನುಮತಿ ನೀಡಿಲ್ಲ. ಹೀಗಾಗಿ ಅವುಗಳನ್ನು ಬಳಸಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅಲ್ಲದೆ, ಇನ್ನೂ ಕೆಲವು ಕೊಠಡಿಗಳ ಬಾಗಿಲು ಮತ್ತು ಕಿಟಕಿಗಳನ್ನು ಸರಿಪಡಿಸಬೇಕಿದೆ ಎಂದು ಶಾಲೆ ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ.

ಶಾಲೆಯ ಈ ಸ್ಥಿತಿ ಬಗ್ಗೆ ಗ್ರಾಮದ ರಮೇಶ್ ಬಿ ಎನ್ನುವರು ಪ್ರತಿಕ್ರಿಯಿಸಿದ್ದು. ಸರಕಾರಿ ಶಾಲೆಯ ದುಸ್ಥಿತಿ ನೋಡಿದರೆ ನಾಚಿಕೆಯಾಗುತ್ತಿದೆ. ಬಾಗಿಲನ್ನು ಬ್ಲ್ಕಾಕ್ ಬೋರ್ಡ್​ ಆಗಿ ಬಳಸಿದ್ದು ಶಿಕ್ಷಕರ ತಪ್ಪು ಅಲ್ಲ. ಅವರು ಸಮಯ ವ್ಯರ್ಥ ಮಾಡುವ ಬದಲು ವಿದ್ಯಾರ್ಥಿಗಳಿಗೆ ಕಲಿಸಲು ಪ್ರಯತ್ನಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಸರಿಯಾದ ಶೌಚಾಲಯಗಳಿಲ್ಲ, ಕುಡಿಯುವ ನೀರಿನ ಸಮಸ್ಯೆಯೂ ಇದೆ. ಇತ್ತೀಚೆಗೆ ಸುರಿದ ಮಳೆಯಿಂದ ಶಾಲಾ ಮೈದಾನ ನೀರಿನಿಂದ ತುಂಬಿ ಕೆರೆಯಂತಾಗಿತ್ತು. ಆದರೂ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಲೇ ಇದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಅದ್ಯಾವಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಂತಹ ಶಾಲೆಗಳ ಬಗ್ಗೆ ಗಮನಹರಿಸುತ್ತಾರೋ ಆಗ ಸುಧಾಕರಣೆ ಕಾಣುತ್ತವೆ. ಇಲ್ಲದಿದ್ದರೇ ಸರ್ಕಾರಿಗಳನ್ನು ದೇವರೇ ಕಾಪಾಡಬೇಕು.

ಇನ್ನಷ್ಟು ಕರ್ನಾಟಕ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು