ಎಂಎಸ್​ಐಎಲ್​ ಮದ್ಯ ಮಾರಾಟ ಮಳಿಗೆ ಮುಚ್ಚುವಂತೆ ಒತ್ತಾಯ: ಸಿಬ್ಬಂದಿ ನಿಂದನೆ, ಮಾಜಿ ಮೇಯರ್​ ರೋಷಾವೇಶ!

ಮಹಿಳಾ ನ್ಯಾಯವಾದಿ ಬಂಧನ ಖಂಡಿಸಿ ನ್ಯಾಯವಾದಿಗಳು ಪ್ರತಿಭಟಸಿ, ಟೈಯರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವಂತಹ ಘಟನೆ ನಗರದ ಜಿಲ್ಲಾ ನ್ಯಾಯಾಲಯದ ಬಳಿ ನಡೆದಿದೆ.

ಎಂಎಸ್​ಐಎಲ್​ ಮದ್ಯ ಮಾರಾಟ ಮಳಿಗೆ ಮುಚ್ಚುವಂತೆ ಒತ್ತಾಯ: ಸಿಬ್ಬಂದಿ ನಿಂದನೆ, ಮಾಜಿ ಮೇಯರ್​ ರೋಷಾವೇಶ!
ಮದ್ಯ ಮಾರಾಟ ಮಳಿಗೆ ಮುಚ್ಚುವಂತೆ ಪ್ರತಿಭಟನೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 21, 2022 | 5:32 PM

ಬಳ್ಳಾರಿ: ಎಂಎಸ್​ಐಎಲ್​ (MSIL) ಮದ್ಯ ಮಾರಾಟ ಮಳಿಗೆ ಮುಚ್ಚುವಂತೆ ಒತ್ತಾಯಿಸಿ ಪಾಲಿಕೆ ಸದಸ್ಯರು ಪ್ರತಿಭಟನೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಬಳ್ಳಾರಿಯ ವಿದ್ಯಾನಗರದ 3ನೇ ಮುಖ್ಯ ರಸ್ತೆಯಲ್ಲಿ ಮಳಿಗೆಗಳಿದ್ದು, MSIL ಮಳಿಗೆ ಸಿಬ್ಬಂದಿಯನ್ನು ಮಾಜಿ ಮೇಯರ್ ವೆಂಕಟರಮಣ​ ನಿಂದಿಸಿದ್ದು, ರೋಷಾವೇಶಗೊಂಡಿದ್ದಾರೆ. ಮೇಯರ್​ ರಾಜೇಶ್ವರಿ ಸುಬ್ಬರಾಯಡು ನೇತೃತ್ವದಲ್ಲಿ ಸದಸ್ಯರ ಧರಣಿ ಮಾಡಿದ್ದು, ಆಸ್ಪತ್ರೆ, ಕಾಲೇಜು, ಜನವಸತಿ ಪ್ರದೇಶದಲ್ಲಿ ಮದ್ಯ ಮಾರಾಟ ಬೇಡ. 5 ವರ್ಷಗಳ ಹಿಂದೆ ಬಂದ್ ಆಗಿದ್ದ ಮಳಿಗೆ ರೀಓಪನ್​ಗೆ ಅನುಮತಿ ನೀಡಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಸಿಬ್ಬಂದಿ ಎಂಎಸ್​ಐಎಲ್​ ಮಳಿಗೆ ತೆರೆದಿದ್ದು, ಮದ್ಯ ಮಾರಾಟ ಮಳಿಗೆ ಮುಚ್ಚುವಂತೆ ಪಾಲಿಕೆ ಸದಸ್ಯರು ಪ್ರತಿಭಟಿಸಿದರು. ಪಾಲಿಕೆ ಮೇಯರ್​ ನೇತೃತ್ವದ ಹೋರಾಟಕ್ಕೆ ಮಣಿದು MSIL ಮದ್ಯ ಮಾರಾಟ ಮಳಿಗೆಯನ್ನು ಅಬಕಾರಿ ಅಧಿಕಾರಿಗಳು ಮುಚ್ಚಿದರು.

ಮಹಿಳಾ ನ್ಯಾಯವಾದಿ ಬಂಧನ ಖಂಡಿಸಿ ನ್ಯಾಯವಾದಿಗಳ ಪ್ರತಿಭಟನೆ

ವಿಜಯಪುರ: ಮಹಿಳಾ ನ್ಯಾಯವಾದಿ ಬಂಧನ ಖಂಡಿಸಿ ನ್ಯಾಯವಾದಿಗಳು ಪ್ರತಿಭಟಸಿ, ಟೈಯರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವಂತಹ ಘಟನೆ ನಗರದ ಜಿಲ್ಲಾ ನ್ಯಾಯಾಲಯದ ಬಳಿ ನಡೆದಿದೆ. ಬಾಗಲಕೋಟೆ ವಿಜಯಪುರ ಸಂಪರ್ಕ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದು, ಸರ್ಕಲ್​ನಲ್ಲಿ ಮಾನವ ಸರಪಳಿ ಮಾಡಿ ಆಕ್ರೋಶ ಹೊರಹಾಕಿದರು. ಪೊಲೀಸರು ದೌರ್ಜನ್ಯದಿಂದ ಮಹಿಳಾ ನ್ಯಾಯವಾದಿಯನ್ನ ಬಂಧಿಸಿದ್ದಾರೆ ಎಂದು ಆರೋಪಿಸಿ ಪ್ರೊಟೆಸ್ಟ್ ಮಾಡಿದ್ದು, ನೂರಾರು ನ್ಯಾಯವಾದಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪೊಲೀಸರ ವಿರುದ್ಧ ಧಿಕ್ಕಾರ ಕೂಗಲಾಯಿತು. ಮಹಿಳಾ ವಕೀಲೆ ಅರುಂಧತಿ ಪಾಟೀಲ್​ರನ್ನು ಲೇಡಿ ಕಾನ್ಸಸ್ಟೇಬಲ್ ಬದಲಾಗಿ ಮೇಲ್ ಕಾನ್ಸಸ್ಟೇಬಲ್ ರಂಗಪ್ಪಗೋಳ ಬಂಧಿಸಿ ಕರೆತಂದಿದ್ದಾರೆಂದು ಆರೋಪ ಮಾಡಲಾಗಿದೆ.

ಗೋಳಗುಮ್ಮಟ ಪೊಲೀಸ್ ಠಾಣೆ ಪೊಲೀಸ್ ಕಾನ್ಸಸ್ಟೇಬಲ್ ರಂಗಪ್ಪಗೋಳ ಅಮಾನತ್ತು ಮಾಡಬೇಕೆಂದು ಆಗ್ರಹಿಸಲಾಗಿದೆ. ನಗರದ ಗುರುದತ್ ಮಂಗಲ ಕಾರ್ಯಾಲಯದ ರಸ್ತೆ ವಿಚಾರವಾಗಿ ಮಹಿಳಾ‌ ನ್ಯಾಯವಾದಿ ವಿರುದ್ದ ಪ್ರಕರಣ ದಾಖಲಾಗಿದೆ.  ಅರೆಸ್ಟ್ ವಾರೆಂಟ್ ರಿಕಾಲ್ ಇದ್ದಾಗಲೂ ಮಹಿಳಾ ವಕೀಲೆ ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ದಿ ಭೇಟಿ ನೀಡಿದ್ದು, ಸ್ಥಳದಲ್ಲಿ ಹೈಡ್ರಾಮಾ, ವಕೀಲರ ಆಕ್ರೋಶ ಮಧ್ಯೆ ಗೊಂದಲ ಉಂಟಾಯಿತು. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.

ಪ್ರತಿಭಟನೆ ವೇಳೆ ಯುವಕನಿಗೆ ಹಲ್ಲೆ:

ಪ್ರತಿಭಟನೆ ಸ್ಥಳದಲ್ಲಿ ಬೈಕ್​​ನಲ್ಲಿ ಬಂದ ಯುವಕನಿಗೆ ಪ್ರತಿಭಟನಾನಿರತ ನ್ಯಾಯವಾದಿಗಳು ಥಳಿಸಿರುವಂತಹ ಘಟನೆ ಕೂಡ ನಡೆದಿದೆ. ಕೃಷ್ಣಾ ಹಿಜೇರಿ ಹಲ್ಲೆಗೊಳಗಾದ ಯುವಕ. ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಲ್ಲಿಗೆ ಬೈಕ್​ನಲ್ಲಿ ಆಗಮಿಸಿದ ಕೃಷ್ಣಾ ಹಿಜೇರಿ, ದಾರಿ ಬಿಡುವಂತೆ ಆಗ್ರಹಿಸಿದ್ದಾನೆ. ಇದೇ ವೇಳೆ ಬೈಕ್ ತೆಗೆದುಕೊಂಡು ಪ್ರತಿಭಟನೆ ನಡುವೆ ಹೋದ ಕಾರಣ  ನ್ಯಾಯವಾದಿಗಳು ಹಲ್ಲೆ ಮಾಡಿದ್ದಾರೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ