AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guarantee schemes: ಕಾಂಗ್ರೆಸ್​​ ಸರ್ಕಾರದಿಂದ ಬಿಟ್ಟಿ ಭಾಗ್ಯ, ಜನ ದೈನಂದಿನ ಕೆಲಸ ಬಿಟ್ಟು ಸೈಬರ್ ಕೆಫೆಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ! ಯಾಕೆ ಗೊತ್ತಾ?

ಕಾಂಗ್ರೆಸ್​​ ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಈಗಾಗಲೇ ಬಸ್ ಟಿಕೆಟ್ ಪಡೆಯಲ್ಲ.. ವಿದ್ಯುತ್ ಬಿಲ್ ಕಟ್ಟಲ್ಲ ಅಂತಾ ಜನ ಜಗಳ ತಗೆಯುತ್ತಿದ್ದಾರೆ. ಕಾರವಾರದ ಮಂದಿಯಂತೂ ಬಿಟ್ಟಿ ವಿದ್ಯುತ್ ಅಂತಾ ಅರ್ಥೈಸಿಕೊಂಡು ಫ್ಯಾನ್, ಎಸಿ​, ಗೀಸರ್ ಅಂತಾ ಎಲೆಕ್ಟ್ರಿಕಲ್ಸ್​​ ಸಾಧನಗಳನ್ನು ತರಲು ಕ್ಯೂ ನಿಂತಿದ್ದಾರೆ. ಇದರ ಮಧ್ಯೆ ಬಳ್ಳಾರಿಯಲ್ಲಿ...

Guarantee schemes: ಕಾಂಗ್ರೆಸ್​​ ಸರ್ಕಾರದಿಂದ ಬಿಟ್ಟಿ ಭಾಗ್ಯ, ಜನ ದೈನಂದಿನ ಕೆಲಸ ಬಿಟ್ಟು ಸೈಬರ್ ಕೆಫೆಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ! ಯಾಕೆ ಗೊತ್ತಾ?
ಜನ ದೈನಂದಿನ ಕೆಲಸ ಬಿಟ್ಟು ಸೈಬರ್ ಕೆಫೆಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ!
ಸಾಧು ಶ್ರೀನಾಥ್​
|

Updated on: Jun 01, 2023 | 11:00 AM

Share

ಕರ್ನಾಟಕ ಕಾಂಗ್ರೆಸ್​​ ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳ ವಿಚಾರವಾಗಿ (Karnataka Congress Government Guarantee schemes) ಈಗಾಗಲೇ ಬಸ್ ಟಿಕೇಟ್ ಪಡೆಯಲ್ಲ.. ವಿದ್ಯುತ್ ಬಿಲ್ ಕಟ್ಟಲ್ಲ ಅಂತಾ ಮತದಾರರು ಜಗಳ ತಗೆಯುತ್ತಿದ್ದಾರೆ. ಕಾರವಾರದ ಮಂದಿಯಂತೂ ಬಿಟ್ಟಿ ವಿದ್ಯುತ್ ಅಂತಾ ಅರ್ಥೈಸಿಕೊಂಡು ಫ್ಯಾನ್, ಎಸಿ​, ಗೀಸರ್​ ಅದೂ ಇದೂ ಅಂತಾ ಎಲೆಕ್ಟ್ರಿಕಲ್ ಸಾಧನಗಳನ್ನು ತರಲು ಕ್ಯೂ ನಲ್ಲಿ ನಿಂತಿದ್ದಾರೆ. ಇದರ ಮಧ್ಯೆ, ಗ್ಯಾರಂಟಿ ಲಾಭ ಪಡೆಯಲು ಜನರು ತಹಶಿಲ್ದಾರ ಕಚೇರಿ, ಡಿಸಿ ಕಚೇರಿಗಳಿಗೆ ಓಡಾಡುತ್ತಿದ್ದಾರೆ. ಇದೂ ಸಾಲದು ಅಂತಾ ಇದಿಗ ಸೈಬರ್ ಕೆಫೆಗಳಿಗೆ (Cyber Cafe) ಮುಗಿಬಿದ್ದಿದ್ದಾರೆ. ಹೀಗಾಗಿ ಸರ್ಕಾರ ಇನಾದರೂ ಈ ಹಿಂದೆ ಘೋಷಿಸಿದಂತೆ ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಸ್ಪಷ್ಟ ನಿರ್ಧಾರ ಮತ್ತು ಆದೇಶ ಹೊರಡಿಸಬೇಕಾಗಿದೆ.

ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನ ಘೋಷಣೆ ಮಾಡಿದೆ. ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮತದಾರರು ಸಹ ಗ್ಯಾರಂಟಿ ಯೋಜನೆಗಳ ನಿರೀಕ್ಷೆಯಲ್ಲಿದ್ದಾರೆ. ಅದಕ್ಕಾಗೇ ಗ್ಯಾರಂಟಿ ಯೋಜನೆ ಲಾಭ ಪಡೆಯಲು ಜನರು ಸೈಬರ್ ಕೆಫೆಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಸೈಬರ್ ಕೆಫೆಗಳ ಮುಂದೆ ಸಾಲು ಸಾಲಾಗಿ ನಿಂತ ಜನರು ಅರ್ಜಿ ಸಲ್ಲಿಸಲು ನಾ ಮುಂದೂ ತಾ ಮುಂದೂ ಅಂತಿದಾರೆ. ಬಿಪಿಎಲ್ ಕಾರ್ಡ್, ಯುವನಿಧಿ, ಗೃಹಲಕ್ಷ್ಮೀ ಯೋಜನೆಗಳ ಲಾಭ ಪಡೆಯಲು ಕಾಯುತ್ತಿದ್ದಾರೆ.

ಯೆಸ್. ಹೀಗೆ ಸೈಬರ್ ಕೆಫೆಗಳ ಮುಂದೆ ನಿಂತಿರುವ ಇವರೆಲ್ಲಾ ಗ್ಯಾರಂಟಿ ಯೋಜನೆಗಳಿಗಾಗಿ ಕಾಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದೆ. ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ. ಬಿಪಿಎಲ್ ಕಾರ್ಡದಾರರಿಗೆ 10 ಕೆಜಿ ಪಡಿತರ ಅಕ್ಕಿ. ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರೂಪಾಯಿ ಹಣ. ನಿರುದ್ಯೋಗಿ ಯುವಕರಿಗೆ 3 ಸಾವಿರ ರೂಪಾಯಿ ಭತ್ಯೆ. ಎಲ್ಲರ ಮನೆಗಳಿಗೂ 200 ಯೂನಿಟ್ ವಿದ್ಯುತ್ ಉಚಿತ …

ಹೀಗೆ ಸಿಎಂ ಸಿದ್ದರಾಮಯ್ಯ. ಡಿಸಿಎಂ ಡಿ ಕೆ ಶಿವಕುಮಾರ್​​ ಚುನಾವಣೆ ವೇಳೆ ಗ್ಯಾರಂಟಿ ಭರವಸೆ ನೀಡಿದ್ದರು. ಈ ಗ್ಯಾರಂಟಿ ಭರವಸೆಗಳನ್ನ ಸರ್ಕಾರ ಈಡೇರಿಸುವ ಮುನ್ನವೇ ರಾಜ್ಯದ ಜನರು ಗ್ಯಾರಂಟಿ ಲಾಭ ಪಡೆಯಲು ಇದೀಗ ಸೈಬರ್ ಕೆಫೆಗಳ ಮೊರೆ ಹೋಗುತ್ತಿದ್ದಾರೆ. ಬಿಪಿಎಲ್ ಕಾರ್ಡ್. ಯುವನಿಧಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸೈಬರ್ ಕೆಫೆಗಳ ಮುಂದೆ ಹೀಗೆ ಕ್ಯೂ ನಿಲ್ಲುತ್ತಿದ್ದಾರೆ.

ಬಳ್ಳಾರಿ ಮಹಾನಗರದ ಸೈಬರ್ ಕೆಫೆಗಳು, ಇಂಟರ್ನೆಟ್ ಸೆಂಟರ್ ಗಳಿಗೆ ನಿತ್ಯ ನೂರಾರು ಜನರು ಆಗಮಿಸಿ ಅರ್ಜಿ ಸಲ್ಲಿಸಲು ಪರದಾಡುತ್ತಿದ್ದಾರೆ. ಬಿಪಿಎಲ್ ಕಾರ್ಡ್. ಯುವನಿಧಿ. ಗೃಹಲಕ್ಷ್ಮೀ ಯೋಜನೆಗಳಿಗೆ ಅರ್ಜಿ ಹಾಕಬೇಕು ಅಂತಾ ಸೈಬರ್ ಕೆಫೆಗಳ ಮುಂದೆ ಜನರು ಜಮಾಯಿಸುತ್ತಿದ್ದಾರೆ. ಆದ್ರೆ ಬಿಪಿಎಲ್ ಕಾರ್ಡ್ ಸೇರಿದಂತೆ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಫಲಾನುಭವಿಗಳಿಗೆ ಸರ್ಕಾರ ಇದೂವರೆಗೂ ಮಾರ್ಗಸೂಚಿಗಳನ್ನ ಜಾರಿ ಮಾಡಿಲ್ಲ. ಅರ್ಜಿ ಅಪಲೋಡ್ ಮಾಡುತ್ತಿಲ್ಲ ಅಂದರೂ ಜನರು ಕೇಳುತ್ತಿಲ್ಲ. ಹೀಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತವೇ ಗ್ಯಾರಂಟಿ ಯೋಜನೆಗಳಿಗಾಗಿ ಪ್ರತೇಕ ಕಂಪ್ಯೂಟರ್​​ ಕೇಂದ್ರ ತೆರೆಯಬೇಕು ಅಂತಿದ್ದಾರೆ ಸೈಬರ್ ಕೇಂದ್ರದವರು.

ವರದಿ: ವೀರೇಶ್​ ದಾನಿ, ಟಿವಿ9, ಬಳ್ಳಾರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ