ಹಂಪಿ 2ನೇ ದಿನದ ಉತ್ಸವ: ಮೇಳೈಸಿದ ಕಲಾ ತಂಡಗಳ ವೈಭವ

| Updated By: ಆಯೇಷಾ ಬಾನು

Updated on: Nov 23, 2020 | 12:35 PM

ಬಳ್ಳಾರಿ: ಕಣ್ಣು ಹಾಯಿಸಿದ ಕಡೆಯಲ್ಲಾ ಕಲರ್‌ಫುಲ್. ಎಲ್ಲೆಲ್ಲೂ ಮೇಳೈಸಿದ ಕಲಾ ತಂಡಗಳ ವೈಭವ. ಕಣ್ಣಿಗೆ ಹಬ್ಬ ನೀಡುತ್ತಿರುವ ವೇಷ ಭೂಷಣ ತೊಟ್ಟ ಕಲಾ ತಂಡಗಳ ನೃತ್ಯ. ನೃತ್ಯವನ್ನೂ ನೋಡ್ತಾ ಸಂಭ್ರಮಿಸುತ್ತಿರುವ ಕಲಾ ಪ್ರೇಮಿಗಳು. ಇದು ಒಂದ್ಕಡೆಯಾದ್ರೆ ಮತ್ತಷ್ಟು ಕಿಕ್ ನೀಡುತ್ತಿರುವ ಗುಂಡು ಎತ್ತುವ ಸ್ಪರ್ಧೆ, ಕುಸ್ತಿ ಪಂದ್ಯ. ಎಲ್ಲರ ಕೇಂದ್ರ ಬಿಂದುವಾಗಿರುವ ಎತ್ತಿನ ಬಂಡಿ ಜೋಡಿಸುವ ಸ್ಪರ್ಧೆ. ಸಾಂಪ್ರದಾಯಿಕ ಕುಸ್ತಿಗೆ ಸಚಿವ ಸಿ.ಟಿ.ರವಿ ಚಾಲನೆ: ಹಂಪಿ ಉತ್ಸವದ ಪ್ರಯುಕ್ತ ಹೊಸ ಮಲಪನಗುಡಿಯ ವಿದ್ಯಾರಣ್ಯ ಪೀಠದ ಹೈಸ್ಕೂಲ್ ಮೈದಾನದಲ್ಲಿ […]

ಹಂಪಿ 2ನೇ ದಿನದ ಉತ್ಸವ: ಮೇಳೈಸಿದ ಕಲಾ ತಂಡಗಳ ವೈಭವ
Follow us on

ಬಳ್ಳಾರಿ: ಕಣ್ಣು ಹಾಯಿಸಿದ ಕಡೆಯಲ್ಲಾ ಕಲರ್‌ಫುಲ್. ಎಲ್ಲೆಲ್ಲೂ ಮೇಳೈಸಿದ ಕಲಾ ತಂಡಗಳ ವೈಭವ. ಕಣ್ಣಿಗೆ ಹಬ್ಬ ನೀಡುತ್ತಿರುವ ವೇಷ ಭೂಷಣ ತೊಟ್ಟ ಕಲಾ ತಂಡಗಳ ನೃತ್ಯ. ನೃತ್ಯವನ್ನೂ ನೋಡ್ತಾ ಸಂಭ್ರಮಿಸುತ್ತಿರುವ ಕಲಾ ಪ್ರೇಮಿಗಳು. ಇದು ಒಂದ್ಕಡೆಯಾದ್ರೆ ಮತ್ತಷ್ಟು ಕಿಕ್ ನೀಡುತ್ತಿರುವ ಗುಂಡು ಎತ್ತುವ ಸ್ಪರ್ಧೆ, ಕುಸ್ತಿ ಪಂದ್ಯ. ಎಲ್ಲರ ಕೇಂದ್ರ ಬಿಂದುವಾಗಿರುವ ಎತ್ತಿನ ಬಂಡಿ ಜೋಡಿಸುವ ಸ್ಪರ್ಧೆ.

ಸಾಂಪ್ರದಾಯಿಕ ಕುಸ್ತಿಗೆ ಸಚಿವ ಸಿ.ಟಿ.ರವಿ ಚಾಲನೆ:
ಹಂಪಿ ಉತ್ಸವದ ಪ್ರಯುಕ್ತ ಹೊಸ ಮಲಪನಗುಡಿಯ ವಿದ್ಯಾರಣ್ಯ ಪೀಠದ ಹೈಸ್ಕೂಲ್ ಮೈದಾನದಲ್ಲಿ ನಡೆದ 135 ಕೆ.ಜಿ. ಭಾರದ ಕಲ್ಲು ಎತ್ತುವ ಸ್ಪರ್ಧೆ ಸಖತ್ ಕಿಕ್ ನೀಡ್ತು. ನವಿರೇಳಿಸುವ ರೀತಿಯಲ್ಲಿ ನಡೆದ ಗುಂಡು ಎತ್ತುವ ಸ್ಪರ್ಧೆ ನೆರೆದಿದ್ದವರಿಗೆ ಸಖತ್ ಕಿಕ್ ನೀಡ್ತು. ಇದಾದ ನಂತರ ನಡೆದ ಕುಸ್ತಿ, ಉತ್ಸವಕ್ಕೆ ಮತ್ತಷ್ಟು ರಂಗು ನೀಡ್ತು. ಸಾಂಪ್ರದಾಯಿಕ ಕುಸ್ತಿಗೆ ಸಚಿವ ಸಿ.ಟಿ.ರವಿ ಚಾಲನೆ ನೀಡಿದರು. ಅಖಾಡಕ್ಕೆ ಧುಮಿಕಿದ ಕುಸ್ತಿ ಪಟುಗಳು ಗೆಲುವಿಗಾಗಿ ಸೆಣಸಾಡಿದ್ರು. ಇದರಲ್ಲಿ ಎಲ್ಲದಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಅಂದ್ರೆ ಎತ್ತಿನಗಾಲಿ ಜೋಡಿಸುವ ಸ್ಪರ್ಧೆ. ಕಡಿಮೆ ಸಮಯದಲ್ಲಿ ಎತ್ತಿನ ಗಾಡಿಯ ಚಕ್ರಗಳನ್ನು ಬಿಚ್ಚಿ ಮತ್ತು ಜೋಡಿಸುವ ಸ್ಪರ್ಧೆ ಸಖತ್ ಕಿಕ್ ನೀಡ್ತು.

ಇನ್ನೂ ಈ ಬಾರಿ ಹಂಪಿ ಉತ್ಸವದ ಕೇಂದ್ರ ಬಿಂದುವಾಗಿದ್ದು, ಜನಪದ ವಾಹಿನಿ. ಹಂಪಿಯ ರಾಜಬೀದಿಯಲ್ಲಿ ವಿಜಯನಗರ ಕಾಲದ ವೈಭವವನ್ನು ಬಿಂಬಿಸುವ ಈ ಕಾರ್ಯಕ್ರಮದಲ್ಲಿ ಮಹಿಳಾ ಡೊಳ್ಳು ಕುಣಿತ, ಪಾಳ್ಯಗಾರ ವೇಷ, ಹಗಲು ವೇಷ, ವೀರಗಾಸ್ಯ, ನಂದಿಧ್ವಜ, ಕರಡಿ ಮಜಲು, ಕೀಲು ಕುದುರೆ, ಸೇರಿದಂತೆ ನೂರಕ್ಕೂ ಹೆಚ್ಚು ಕಲಾ ತಂಡಗಳ ಒಂದೂವರೆ ಗಂಟೆಗಳ ಕಾಲ ಮೆರವಣಿಗೆ ನಡೆಯಿತು. ಭುವನೇಶ್ವರಿ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.

ಜನರನ್ನ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ:
ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಸಾವಿರಾರು ಜನರನ್ನ ರಂಜಿಸಿತು. ವೇದಿಕೆಗೆ ಕಾಲಿಟ್ಟ ಬೆಂಗಳೂರು ಮೂಲದ ನೃತ್ಯ ತಂಡಗಳು ಜನರನ್ನು ಹುಚ್ಚೆದ್ದು ಕುಣಿಯವಂತೆ ಮಾಡಿದವು. ಇದರ ಜೊತೆ ಜೋಗತಿ ನೃತ್ಯ, ದುರ್ಗಿಯ ನೃತ್ಯ ರೂಪಕ, ಭರತ ನಾಟ್ಯ , ಗೀತಗಾಯನ ಜನರ ಗಮನ ಸೆಳೆಯಿತು. ನಂತರ ವೇದಿಕೆಗೆ ಬಂದ ಬಾಲಿವುಡ್ ಖ್ಯಾತ ಗಾಯಕಿ ನೀತಿ ಮೋಹನ್ ಒಂದಕ್ಕಿಂತ ಒಂದು ಹಿಟ್ ಸಾಂಗ್‌ಗಳನ್ನು ಹಾಡೋ ಮೂಲಕ ಜನರನ್ನು ರಂಜಿಸಿದ್ರು.

ಒಟ್ನಲ್ಲಿ ಒಂದ್ಕಡೆ ಕಲೆ ಸಾಹಿತ್ಯ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತೊಂದೆಡೆ ಸಿನಿಮಾ ಹಾಡು ಸೇರಿದಂತೆ ಹತ್ತು ಹಲವು ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ಹಂಪಿ ಉತ್ಸವದ ರಂಗನ್ನು ಹೆಚ್ಚಿಸಿದೆ. ಈ ಬಾರಿಯ ಹಂಪಿ ಉತ್ಸವ ನೆರೆದ ಸಾವಿರಾರು ಜನರಿಗೆ ಸಖತ್ ಕಿಕ್ ಕೊಟ್ಟಿದ್ದು ಮಾತ್ರ ಸುಳ್ಳಲ್ಲ.











Published On - 2:50 pm, Sun, 12 January 20