ಮತೀಯ ಗಲಭೆ ಆಗುತ್ತೆ ಅಂತಾ ಹೇಳಿದ್ದೆ, ಸಾವು ನೋವು ಆಗುತ್ತೆ ಅಂದಿದ್ದೆ ಅದು ಆಗ್ತಿದೆ ಎಂದ ಕೋಡಿಮಠ ಸ್ವಾಮೀಜಿ

Kodi Mutt Seer: ನಾನು 3 ತಿಂಗಳ ಹಿಂದೆಯೆ ಹೇಳಿದ್ದೆ. ಏನೆಂದರೆ ಮತ್ತೆ ಕೊವಿಡ್ ಬರುತ್ತೆ ಅಂತಾ ಹೇಳಿದ್ದೆ. ಒಂದೂವರೆ ವರ್ಷದ ನಂತರ ಸಂಪೂರ್ಣವಾಗಿ ಜಗತ್ತಿನಿಂದ ಬಿಡುಗಡೆ ಆಗುತ್ತೆ. ಕೊವಿಡ್ ಸೇರಿದಂತೆ ಮನುಷ್ಯ ಕಷ್ಟ ಬಂದಾಗ ದೇವರು ಅಂತಾನೆ. ಧರ್ಮ ಅಂತಾನೆ. ದೈವ ಪ್ರಾರ್ಥನೆ ಮಾಡುತ್ತಾನೆ. ಕೊವಿಡ್ ದೇವರನ್ನೇ ಹಿಡಿದುಕೊಂಡಿತು.

ಮತೀಯ ಗಲಭೆ ಆಗುತ್ತೆ ಅಂತಾ ಹೇಳಿದ್ದೆ, ಸಾವು ನೋವು ಆಗುತ್ತೆ ಅಂದಿದ್ದೆ ಅದು ಆಗ್ತಿದೆ ಎಂದ ಕೋಡಿಮಠ ಸ್ವಾಮೀಜಿ
ಮತೀಯ ಗಲಭೆ ಆಗುತ್ತೆ ಅಂತಾ ಹೇಳಿದ್ದೆ, ಸಾವು ನೋವು ಆಗುತ್ತೆ ಅಂತಾ ಹೇಳಿದ್ದೆ ಅದು ಆಗ್ತಿದೆ ಎಂದ ಕೋಡಿಮಠ ಸ್ವಾಮೀಜಿ
TV9kannada Web Team

| Edited By: sadhu srinath

Jun 11, 2022 | 2:16 PM


ಬಳ್ಳಾರಿ: ಹಾಸನ ಜಿಲ್ಲೆಯ ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ (Prediction). ಈ ಬಾರಿ ಬಳ್ಳಾರಿಗೆ ಕಾರ್ತಯನಿಮಿತ್ತ ಭೇಟಿ ಕೊಟ್ಟು ಅಲ್ಲಿ ಕೋಡಿಮಠದ ಸ್ವಾಮೀಜಿ (Kodi Mutt Seer) ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮಳೆ – ಬೆಳೆ ವಿಚಾರ ಕಂಡ ಮಂಡಲ ಆಗುತ್ತೆ ಅಂತಾ ಹೇಳಿದ್ದೆ. ಗುಡುಗು ಸಿಡಿಲು ಮಿಂಚು ಬರುತ್ತೆ, ಪ್ರಕೃತಿ ಮೇಲೆ ಹಾವಳಿ ಮಾಡುತ್ತೆ, ಮಲೆನಾಡು ಬಯಲು ಆಗುತ್ತೆ. ಬಯಲು ಮಲೆನಾಡು ಆಗುತ್ತೆ ಅಂತಾ ಹೇಳಿದ್ದೆ. ದೊಡ್ಡ ದೊಡ್ಡ ನಗರಕ್ಕೆ ಮಳೆಯಿಂದ ಹಾನಿಯಾಗುತ್ತೆ ಎಂದೆಲ್ಲಾ ಹೇಳಿದ್ದೆ ಅವೆಲ್ಲಾ ಜರುಗುತ್ತಿವೆ. ಮುಂಗಾರು ಇನ್ನೂ ಹೆಚ್ಚಳವಾಗುತ್ತೆ. ಹಿಂಗಾರಿನಲ್ಲಿ ಅಕಾಲಿಕ‌ ಮಳೆ ಆಗುವ ಲಕ್ಷಣಗಳಿವೆ ಎಂದು ಅವರು ಹೇಳಿದ್ದಾರೆ (Sri Shivananda Shivayogi Rajendra Swamiji).

ಇನ್ನು, ರಾಜಕೀಯದಲ್ಲಿ ಅಸ್ಥಿರತೆ ಅಂತಾ ಹೇಳಿದ್ದೆ. ಗುಂಪುಗಳು ಆಗುತ್ತೆ ಅಂತಾನೂ ಹೇಳಿದ್ದೆ. ಅದನ್ನ ನೀವೇ ಕಂಡುಕೊಂಡಿದ್ದೀರಾ.. ನಾನು ಯುಗಾದಿ ವೇಳೆ ಇದನ್ನೆಲ್ಲಾ ಹೇಳಿದ್ದೆ‌. ದೇಶದಲ್ಲಿ ಅವಘಡ ಆಗುತ್ತೆ ಅಂತಾ ಹೇಳಿದ್ದೆ. ಈಗ ಆರಂಭವಾಗಿದೆ. ಪೈಗಂಬರ್ ರ ಬಗ್ಗೆ ಅವಹೇಳನ ಮಾಡಿದ್ದಾರೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಅದರ ಮುಂದುವರಿದ ಭಾಗವಾಗಿ ಅಪಾಯವಿದೆ. ಮತೀಯ ಗಲಭೆ ಆಗುತ್ತೆ ಅಂತಾ ಹೇಳಿದ್ದೆ. ಸಾವು ನೋವು ಆಗುತ್ತೆ ಅಂತಾ ಹೇಳಿದ್ದೆ ಅದೂ ಆಗ್ತಿದೆ.

Also Read:

ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗಳನ್ನ ಕಿತ್ತು ತಿನ್ನುತ್ತವೆ ಎಂದು ಘೋರ ಭವಿಷ್ಯ ನುಡಿದ ಕೋಡಿಮಠ ಶ್ರೀ

ನಾನು 3 ತಿಂಗಳ ಹಿಂದೆಯೆ ಹೇಳಿದ್ದೆ. ಏನೆಂದರೆ ಮತ್ತೆ ಕೊವಿಡ್ ಬರುತ್ತೆ ಅಂತಾ ಹೇಳಿದ್ದೆ. ಒಂದೂವರೆ ವರ್ಷದ ನಂತರ ಸಂಪೂರ್ಣವಾಗಿ ಜಗತ್ತಿನಿಂದ ಬಿಡುಗಡೆ ಆಗುತ್ತೆ. ಕೊವಿಡ್ ಸೇರಿದಂತೆ ಮನುಷ್ಯ ಕಷ್ಟ ಬಂದಾಗ ದೇವರು ಅಂತಾನೆ. ಧರ್ಮ ಅಂತಾನೆ. ದೈವ ಪ್ರಾರ್ಥನೆ ಮಾಡುತ್ತಾನೆ. ಕೊವಿಡ್ ದೇವರನ್ನೇ ಹಿಡಿದುಕೊಂಡಿತು. ದೇವಸ್ಥಾನ ಮಠಗಳನ್ನ ಬಾಗಿಲು ಹಾಕಿಸ್ತು. ಆಮೇಲೆ ಜನರ ಮೇಲೆಯೂ ಬಂತೂ. ಹಿಂಗಾಗಿ ಸಾವು ನೋವುಗಳು ಸಂಭವಿಸಿತು. ಇನ್ನೂ ಒಂದೂವರೆ ವರ್ಷದ ನಂತರ ಬಿಡುಗಡೆ ಆಗುತ್ತೆ. ಹೋಗುವಾಗ ವಿಪರೀತ ಕಷ್ಟ ಕೊಟ್ಟು ಹೋಗುತ್ತೆ. ಈಗಿನಿಂದಲೇ ಎಚ್ಚರ ವಹಿಸಬೇಕು. ನಾನು ಮೊದಲೇ ಹೇಳಿದ್ದೆ‌. ಮದ್ದಿಲ್ಲದ ಕಾಯಿಲೆ ಬರುತ್ತೆ ಅಂತಾ ಹೇಳಿದ್ದೆ. ಜನರು ನಡುಗಿ ಹೋಗ್ತಾರೆ ಅಂತಾನೂ ಹೇಳಿದ್ದೆ ಎಂದು ಕೋಡಿಮಠದ ಸ್ವಾಮೀಜಿ ಎಚ್ಚರಿಕೆ ಮಿಶ್ರಿತ ಭವಿಷ್ಯ ನುಡಿದಿದ್ದಾರೆ.

ಮತೀಯ ಗಲಭೆ ಆಗುತ್ತೆ ಅಂತಾ ಹೇಳಿದ್ದೆ, ಸಾವು ನೋವು ಆಗುತ್ತೆ ಅಂತಾ ಹೇಳಿದ್ದೆ ಅದು ಆಗ್ತಿದೆ ಎಂದ ಕೋಡಿಮಠ ಸ್ವಾಮೀಜಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada