Tv9 ಇಂಪ್ಯಾಕ್ಟ್‌: ಟಿವಿ9 ವರದಿ ಬೆನ್ನಲ್ಲೇ ಶಾಲೆಗೆ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 15, 2023 | 4:38 PM

ಕುರುಗೋಡು ಗಾಂಧಿತತ್ವ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿರುವೆ. ಈಗಾಗಲೇ ವಸತಿ ಶಾಲೆಗೆ 6 ಎಕರೆ ಜಾಗ ಸಹ ಮಂಜೂರಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಪತ್ರ ಬರೆಯಲಾಗಿದ್ದು, ಥಿಯೇಟರ್‌ನಲ್ಲಿ ಶಾಲೆ ನಡೆಯುತ್ತಿರುವ ಬಗ್ಗೆ ಇಲಾಖೆ ಗಮನಕ್ಕೆ ತರಲಾಗಿದೆ. ಮಕ್ಕಳಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಶಾಲಾ ಸಿಬ್ಬಂದಿ ಗಮನಕ್ಕೆ ತಂದಿದ್ದೇನೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹೇಳಿದ್ದಾರೆ.

Tv9 ಇಂಪ್ಯಾಕ್ಟ್‌: ಟಿವಿ9 ವರದಿ ಬೆನ್ನಲ್ಲೇ ಶಾಲೆಗೆ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಬಳ್ಳಾರಿ ಶಾಲೆ
Follow us on

ಬಳ್ಳಾರಿ, ಡಿ.15: ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿದ ಹಳೆಯ ಥಿಯೇಟರ್‌(Film theatre)ನಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ವಸತಿ ವ್ಯವಸ್ಥೆ ವಿಚಾರವಾಗಿ ಟಿವಿ9 ವರದಿ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ(Backward Classes Welfare Department) ಕಲ್ಯಾಣಾಧಿಕಾರಿ ಜಲಾಲಪ್ಪ ಎಂಬುವವರು ತಕ್ಷಣವೇ ಶಾಲೆಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು ‘ವಸತಿ ಶಾಲೆಗೆ ಬೇರೆ ಕಟ್ಟಡ ಹುಡುಕಿ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

‘ಕುರುಗೋಡು ಗಾಂಧಿತತ್ವ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿರುವೆ. ಈಗಾಗಲೇ ವಸತಿ ಶಾಲೆಗೆ 6 ಎಕರೆ ಜಾಗ ಸಹ ಮಂಜೂರಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಪತ್ರ ಬರೆಯಲಾಗಿದ್ದು, ಥಿಯೇಟರ್‌ನಲ್ಲಿ ಶಾಲೆ ನಡೆಯುತ್ತಿರುವ ಬಗ್ಗೆ ಇಲಾಖೆ ಗಮನಕ್ಕೆ ತರಲಾಗಿದೆ. ಮಕ್ಕಳಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಶಾಲಾ ಸಿಬ್ಬಂದಿ ಗಮನಕ್ಕೆ ತಂದಿದ್ದೇನೆ. ವಸತಿ ಹಾಗೂ ಪಾಠಕ್ಕೆ ವ್ಯವಸ್ಥೆ ಆಗುವಂತೆ ಕಟ್ಟಡ ಹುಡುಕುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ಸರ್ಕಾರದ ನಿರ್ಲಕ್ಷ್ಯ: ಬಳ್ಳಾರಿಯಲ್ಲಿನ ಒಂದು ಕಾಲದ ಚಿತ್ರಮಂದಿರ ಈಗ ಬಾಲಕಿಯರ ಸರ್ಕಾರಿ ವಸತಿ ಶಾಲೆ

ಜಾಗ ಮಂಜೂರು, ಅನುದಾನ ಬಿಡುಗಡೆ ಆಗಿಲ್ಲ

ಜೊತೆಗೆ ಶಾಲೆಗೆ 6 ಎಕರೆ ಜಾಗ ಮಂಜೂರಾಗಿದೆ. ಆದರೆ, ಅನುದಾನ ಬಿಡುಗಡೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ ಅವರು ಅನುದಾನ ಬಿಡುಗಡೆಯಾಗದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಗಾಂಧಿತತ್ವ ಬಾಲಕಿಯರ ವಸತಿ ಶಾಲೆಗೆ ಬರೊಬ್ಬರಿ 25 ಕೋಟಿ ರೂ. ಅನುದಾನ ಬೇಕಿದೆ ಎಂದರು. ಇನ್ನಾದರೂ ಸರ್ಕಾರ ಇತ್ತ ಗಮನಹರಿಸಿ, ಶಾಲೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ