AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ರಣಮಳೆ-ಅವ್ಯವಸ್ಥೆ ಬಗ್ಗೆ ಸರಣಿ ಟ್ವೀಟ್​ ಮಾಡಿದ ಸಚಿವ ಸುಧಾಕರ್

ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಜನರು ಸುಸ್ತೋ ಸುಸ್ತು, ಟೀಕೆಗೆ ಗುರಿಯಾದ ಸರ್ಕಾರ. ಸಂಕಷ್ಟದ ಕಾಲದಲ್ಲಿ ಸರಕಾರ ಹಾಗು ನಾಗರಿಕರು ಒಟ್ಟಾಗಿ ಸವಾಲನ್ನು ಎದುರಿಸಬೇಕೆಹೊರತು ನಿಂದಿಸುವ ಸಮಯವಲ್ಲ ಎಂದು ಆರೋಗ್ಯ ಸಚಿವರು.

ಬೆಂಗಳೂರು ರಣಮಳೆ-ಅವ್ಯವಸ್ಥೆ ಬಗ್ಗೆ ಸರಣಿ ಟ್ವೀಟ್​ ಮಾಡಿದ ಸಚಿವ ಸುಧಾಕರ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ್
TV9 Web
| Updated By: Rakesh Nayak Manchi|

Updated on:Sep 06, 2022 | 6:40 AM

Share

ಬೆಂಗಳೂರು: ಇತಿಹಾಸದಲ್ಲಿ ಕಂಡರಿಯದ ವರುಣಾರ್ಭಟವನ್ನು ಒಂದು ದಿನದ ಹಿಂದೆ ನಗರದ ಜನರು ನೋಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು. ಈ ಸವಾಲುಗಳನ್ನು ಎದುರಿಸುವುದರ ಜೊತೆಗೆ ಸರ್ಕಾರಕ್ಕೆ ವಿಪಕ್ಷಗಳ ಹಾಗೂ ಸಾರ್ವಜನಿಕರ ಟೀಕೆಗಳನ್ನು ಕೂಡ ಎದುರಿಸಬೇಕಾಗಿದೆ. ಆದರೆ ಸಂಕಷ್ಟದ ಕಾಲದಲ್ಲಿ ಸರಕಾರ ಹಾಗು ನಾಗರಿಕರು ಒಟ್ಟಾಗಿ ಸವಾಲನ್ನು ಎದುರಿಸಬೇಕೆಹೊರತು ನಿಂದಿಸುವ ಸಮಯವಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಸುರಿದ ಭಾರೀ ಮಳೆ ಹಾಗೂ ಸೃಷ್ಟಿಯಾದ ಅವಾಂತರದ ಬಗ್ಗೆ ಸರಣಿ ಟ್ವೀಟ್​ಗಳನ್ನು ಮಾಡಿದ ಸುಧಾಕರ್, “ಇತಿಹಾಸದಲ್ಲಿ ಕಂಡರಿಯದ ರೌದ್ರಾವತಾರತಾಳಿದ ಮಳೆಯಿಂದ ಬೆಂಗಳೂರು ಅಸ್ಥವ್ಯಸ್ತವಾಗಿರುವಿದು ಸತ್ಯ. ಈ ಸಂಕಷ್ಟದ ಕಾಲದಲ್ಲಿ ಸರಕಾರ ಹಾಗು ನಾಗರಿಕರು ಒಟ್ಟಾಗಿ ಸವಾಲನ್ನು ಎದುರಿಸಬೇಕೆಹೊರತು ನಿಂದಿಸುವ ಸಮಯವಲ್ಲ. ಈ ರೀತಿಯ ಮಳೆ ಪ್ರಪಂಚದ ಯಾವುದೇ ನಗರದ್ಲಲಿ ಬಿದ್ದಿದ್ದೇ ಆದಲ್ಲಿ ಪರಿಸ್ಥಿತಿ ಇದಕ್ಕಿನ್ನ ಭಿನ್ನವಾಗಿರುವುದಿಲ್ಲ” ಎಂದಿದ್ದಾರೆ.

“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಬೆಂಗಳೂರಿನ ಸಚಿವರುಗಳು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗು ವಿವಿಧ ಸಂಘಸಂಸ್ಥೆಗಳು ಸಕ್ರಿಯವಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ. ನಮ್ಮ ಕೆಂಪೇಗೌಡರು ಕಟ್ಟಿದ ಸುಂದರ ಹಾಗೂ ಎಲ್ಲರನ್ನೊಳಗಂಡ ಚಿಕ್ಕದಾದ ಹಾಗೂ ಚೊಕ್ಕದಾದ ಬೆಂಗಳೂರು ಇವತ್ತು ಅಭಿವೃದ್ಧಿಯ ಹೆಸರಲ್ಲಿ ಬೃಹತ್ ಮಹಾನಗರ ಆಗಿದೆ” ಎಂದಿದ್ದಾರೆ.

“ಆಗ ನಿರ್ಮಾಣಗೊಂಡ ಕೆರೆಗಳು ಇಂದು ಒತ್ತುವರಿಯಾಗಿ ಮಾಯವಾಗಿದೆ. ರಾಜಕಾಲುವೆಗಳ ಮೇಲೆ ಮನೆಗಳು ಮಳಿಗೆಗಳು ನಿರ್ಮಾಣವಾಗಿದೆ. ಕೆಲವು ಕೆರೆಗಳ ಅಂಗಳದಲ್ಲಿ ತಗ್ಗು ಪ್ರದೇಶದಲ್ಲಿ ಮನೆಗಳ ಲೇಔಟ್ ನಿರ್ಮಾಣಮಾಡಿಕೊಂಡಿದ್ದಾರೆ. ಇಂತ ಬಳುವಳಿಯನ್ನ ನಮ್ಮ ಸರ್ಕಾರ ಪಡೆದಿದೆ. ಆದರೂ ನಮ್ಮ ಸರಕಾರ ಇದನ್ನು ಸವಾಲಾಗಿ ಸ್ವೀಕರಿಸಿ ಶೀಘ್ರ ಶಾಶ್ವತ ಪರಿಹಾರವನ್ನು ನೀಡುತ್ತೇವೆ” ಎಂದು ಸಚಿವರು ಹೇಳಿದರು.

“ಅವೈಜ್ಞಾನಿಕವಾಗಿ ನೂರಾರು ಹಳ್ಳಿಗಳನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸಿ ಯಾವುದೇ ಅಭಿವೃದ್ದಿಯನ್ನ ಈ ಗ್ರಾಮಗಳಲ್ಲಿ ಮಾಡದಿರುವುದು ಯಾರ ತಪ್ಪು? ಇನ್ನು ಮೋಹನದಾಸ್ ಪೈ ಅವರೇ ಈ ಪರಿಯ ಮಳೆ ನ್ಯೂಯೋರ್ಕ್​ನಲ್ಲಿ ಬಿದ್ದಿದ್ದರೆ ಏನಾಗ್ತಾಯಿತ್ತು? ಸಹನೆ ಹಾಗು ಸತ್ಯಾನ್ವೇಷಣೆಗೆ ಮನ್ನಣೆ ಕೊಡಿ. ದೂರುವುದು ಸುಲಭ ಪರಿಹರಿಸುವುದು ದೂರದ ಮಾತು” ಎಂದು ಹೇಳಿದರು.

ಈ ಹಿಂದೆ ಸರಣಿ ಟ್ವೀಟ್ ಮಾಡಿದ್ದ ಉದ್ಯಮಿ ಟಿ.ವಿ.ಮೋಹನದಾಸ್ ಪೈ, “ಒಂದು ಸಣ್ಣ ಮಳೆಗೂ ಪರದಾಡುವ ಪರಿಸ್ಥಿತಿ ತಲುಪುವ ಬೆಂಗಳೂರಿನ ಪರಿಸ್ಥಿತಿ ಬಗ್ಗೆ ಹರಿಹಾಯ್ದಿದ್ದಲ್ಲದೆ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಬೆಂಗಳೂರಿನ ಯೋಜನೆಗಳು ಪೂರ್ಣಗೊಳ್ಳುವುದಕ್ಕೆ, ಇಲ್ಲಿನ ಜನಜೀವನ ಸುಧಾರಿಸಲು ಹೆಚ್ಚು ಹಣ ಬೇಕೇ? ಅಥವಾ ಉತ್ತಮ ಆಡಳಿತ ಬೇಕೇ? ನಮ್ಮ ಮೆಟ್ರೋ ಯೋಜನೆಗಳು ಕಾಲಮಿತಿಯನ್ನು ಮೀರಿವೆ. ಇದು ಸಂಪೂರ್ಣವಾಗಿ ಆಡಳಿತದ ವೈಫಲ್ಯ. ನಮ್ಮ ಪ್ರಮುಖ ಯೋಜನೆಗಳ ಸ್ಥಿತಿಗತಿಯನ್ನು ದಯವಿಟ್ಟು ಪರಿಶೀಲಿಸಿ ಎಂದಿದ್ದರು.

ಜಾಗತಿಕ ತಾಪಮಾನ ವ್ಯಪರೀತ್ಯದ ಬಗ್ಗೆ ಟ್ವೀಟ್ ಮಾಡಿದ ಸುಧಾಕರ್, “ಇವು ಜಾಗತಿಕ ತಾಪಮಾನ ವ್ಯಪರೀತ್ಯದ ಕೆಲವು ಕೊಡುಗೆಗಳು. ಹಾಗಾಗಿ ನಾವೆಲ್ಲಾ ಒಟ್ಟಾಗಿ ಉತ್ತಮ ಹಾಗೂ ನಿರ್ಮಲವಾದ ಪರಿಸರಪೂರಕ ನಗರಾಭಿವೃದ್ದಿಗೆ ನಾಂದಿಹಾಡೋಣ. ಪ್ರಕೃತಿ ನಮ್ಮ ಅಗತ್ಯಗಳಿಗೆ ಎಲ್ಲವು ಕೊಡುತ್ತದೆ. ಆದರೆ ನಮ್ಮ ದುರಾಸೆಗೆ ಅದರ ವಿಕೃತಿಯ ದರ್ಶನವಾಗುತ್ತೆ. ಎಚ್ಚರ…ಎಚ್ಚರ…” ಎಂದು ಹೇಳಿದ್ದಾರೆ.

ಬೆಂಗಳೂರಿನ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ

ಭಾರಿ ಮಳೆಯಿಂದ ಬೆಂಗಳೂರು ಜನರ ಪರದಾಟ ಹಿನ್ನೆಲೆ ಸಮಸ್ಯೆ ಕೇಳದ ಸರ್ಕಾರದ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆಗೆ ಇಳಿದಿದೆ. ಇಂದು ಬೆಂಗಳೂರಿನ ಕಾಂಗ್ರೆಸ್ ಶಾಸಕರಿಂದ ಬೆಳಗ್ಗೆ 10 ಗಂಟೆಗೆ ಫ್ರೀಡಂಪಾರ್ಕ್​ನಲ್ಲಿ ಪ್ರತಿಭಟನೆ ನಡೆಯಲಿದ್ದು, ಮಾಜಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ವಹಿಸಲಿದ್ದಾರೆ. ರಾಜಧಾನಿಯಲ್ಲಿ ಮೂಲಸೌಕರ್ಯ ಕೊರತೆ ಬಗ್ಗೆ ಸರ್ಕಾರದ ಗಮನಸೆಳೆಯಲಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:40 am, Tue, 6 September 22

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!