Bangalore Rain Updates: ಬೆಂಗಳೂರಲ್ಲಿ ಬೆಳಗ್ಗೆಯಿಂದಲೇ ವರುಣಸಿಂಚನ; ರಾತ್ರಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ
Bengaluru Weather: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಹೀಗೆ ಅಕಾಲದಲ್ಲಿ ಮಳೆ ಶುರುವಾಗಿದೆ. ಬೆಂಗಳೂರಿನಲ್ಲಿ ಮೊನ್ನೆಯಿಂದಲೂ ಮಳೆಯ ಸಿಂಚನ ಆಗುತ್ತಿದೆ. ಗಾಳಿ, ಚಳಿ ಸಹಿತ ಅತ್ಯಂತ ಕೆಟ್ಟ ವಾತಾವರಣ ಇದೆ.

ಬೆಂಗಳೂರು: ನಗರದಲ್ಲಿ ಇಂದು ಬೆಳಗ್ಗೆ ವರುಣಸಿಂಚನವಾಗಿದೆ. ಕಳೆದ ಎರಡು ದಿನಗಳಿಂದಲೂ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ನಗರದಲ್ಲಿ ಬೆಳಗ್ಗೆಯಿಂದಲೇ ಮಳೆ ಶುರುವಾಗಿದೆ. ಮುಂಜಾನೆಯಿಂದಲೂ ಚಳಿಗಾಳಿ ಮತ್ತು ಮೋಡ ಮುಸುಕಿದ ವಾತಾವರಣವೇ ಇತ್ತು. ಇನ್ನು ಮಳೆ ಬಂದು ಹೋದ ಬೆನ್ನಲ್ಲೇ ಸ್ವಲ್ಪ ಮಟ್ಟಿಗಿನ ಬಿಸಿಲು ಬಿದ್ದಿದೆ. ಬೆಂಗಳೂರಿನಲ್ಲಿ ಇದೇ ರೀತಿಯ ಹವಾಮಾನ ಫೆ.22ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 24ಗಂಟೆಗಳು ಇದೇ ರೀತಿ ಮೋಡಕವಿದ ವಾತಾವರಣವೇ ಇದ್ದು, ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಮುಂಜಾನೆ ಮಂಜು ಕವಿಯಬಹುದು ಎಂದೂ ಹೇಳಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಹೀಗೆ ಅಕಾಲದಲ್ಲಿ ಮಳೆ ಶುರುವಾಗಿದೆ. ಬೆಂಗಳೂರಿನಲ್ಲಿ ಮೊನ್ನೆಯಿಂದಲೂ ಮಳೆಯ ಸಿಂಚನ ಆಗುತ್ತಿದೆ. ಗಾಳಿ, ಚಳಿ ಸಹಿತ ಅತ್ಯಂತ ಕೆಟ್ಟ ವಾತಾವರಣ ಇದೆ. ನಿನ್ನೆ ಸಂಜೆ 5ಗಂಟೆ ಹೊತ್ತಿಗೆ ಮಳೆಸುರಿದಿತ್ತು. ಅದೇ ವಾತಾವರಣ ಇಂದು ಮುಂಜಾನೆಯಿಂದಲೂ ಮುಂದುವರಿದು ಬೆಳಗ್ಗೆಯೇ ಮಳೆ ಸುರಿದಿದೆ.
ದಿಕ್ಕಾಪಾಲಾಗಿ ಓಡಿದ ಜನ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಂಚಮಸಾಲಿ ಬೃಹತ್ ಸಮಾವೇಶ ನಡೆಯುತ್ತಿದ್ದು, ಲಕ್ಷಾಂತರ ಜನರು ಭಾಗವಹಿಸಿದ್ದಾರೆ. ಮಳೆ ಬರುತ್ತಿದ್ದಂತೆ ದಿಕ್ಕಾಪಾಲಾಗಿ ಓಡಿದ್ದಾರೆ. ಅನೇಕರು ಕುಳಿತಿದ್ದ ಕುರ್ಚಿಯನ್ನು ತೆಗೆದು ತಲೆಯ ಮೇಲೆ ಇಟ್ಟುಕೊಂಡಿದ್ದಾರೆ. ಇನ್ನು ಅನೇಕರು ಜಾಗಖಾಲಿ ಮಾಡುತ್ತಿದ್ದಾರೆ.
ಇದನ್ನೂ ಓದಿ: Bangalore Rain Updates: ಬೆಂಗಳೂರಲ್ಲಿ ಮಳೆ ಆರಂಭ, 2 ದಿನ ಮುಂದುವರಿಯಲಿದೆ ಇದೇ ವಾತಾವರಣ
Published On - 1:16 pm, Sun, 21 February 21



