ಬೆಂಗಳೂರಿನಲ್ಲಿ ಪೊಲೀಸರನ್ನೇ ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದ ಮೂವರ ಸೆರೆ

ಆರೋಪಿಗಳು ಪೀಣ್ಯ ಮೂಲದವರು. ಇವರು ದುಡ್ಡು ಮಾಡುವುದಕ್ಕೆ ದರೋಡೆ ಮಾಡುವ ದಾರಿ ಹಿಡಿದಿದ್ದರು. ಜುಲೈ 3ರಂದು ಕರ್ತವ್ಯ ಮುಗಿಸಿ ಬರುತ್ತಿದ್ದ ಪಿಎಸ್ಐ ಬೈಕ್​ನ ಅಡ್ಡಹಾಕಿ ದರೋಡೆಗೆ ಯತ್ನಿಸಿದ್ದರು. ಈ ಪ್ರಕರಣ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಪಿಎಸ್ಐ ದೂರು ದಾಖಲಿಸಿದ್ದರು.

ಬೆಂಗಳೂರಿನಲ್ಲಿ ಪೊಲೀಸರನ್ನೇ ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದ ಮೂವರ ಸೆರೆ
ಸಾಂದರ್ಭಿಕ ಚಿತ್ರ
Edited By: sandhya thejappa

Updated on: Jul 07, 2021 | 2:45 PM

ಬೆಂಗಳೂರು: ಪೊಲೀಸರನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದ ಮೂವರನ್ನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಕರ್ತವ್ಯ ಮುಗಿಸಿ ಬರುತ್ತಿದ್ದ ಆರ್.ಟಿ ನಗರ ಟ್ರಾಫಿಕ್ ಪಿಎಸ್ಐ ಬೈಕ್​ನ ಮೂವರು ಅಡ್ಡಗಟ್ಟಿದ್ದರು. ಚಾಕು ತೋರಿಸಿ ಹಣ, ಮೊಬೈಲ್ ನೀಡುವಂತೆ ಬೆದರಿಕೆ ಹಾಕಿದ್ದರು. ನಂತರ ಪೊಲೀಸ್ ಹೆಲ್ಮೆಟ್ ನೋಡಿ ದಂಗಾದ ಮೂವರು ಪರಾರಿಯಾಗಿದ್ದರು. ಆದರೆ ಪರಾರಿಯಾಗಿದ್ದ ಬಾಲು, ಆಶಿತ್ ಗೌಡ, ರವಿಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಪೀಣ್ಯ ಮೂಲದವರು. ಇವರು ದುಡ್ಡು ಮಾಡುವುದಕ್ಕೆ ದರೋಡೆ ಮಾಡುವ ದಾರಿ ಹಿಡಿದಿದ್ದರು. ಜುಲೈ 3ರಂದು ಕರ್ತವ್ಯ ಮುಗಿಸಿ ಬರುತ್ತಿದ್ದ ಪಿಎಸ್ಐ ಬೈಕ್​ನ ಅಡ್ಡಹಾಕಿ ದರೋಡೆಗೆ ಯತ್ನಿಸಿದ್ದರು. ಈ ಪ್ರಕರಣ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಪಿಎಸ್ಐ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಇದೀಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಸರಗಳ್ಳನ ಬಂಧನ
ನೆಲಮಂಗಲ ಟೌನ್ ಪೊಲೀಸರು ಸರಗಳ್ಳನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಶ್ರೀನಗರದ ಎಸ್.ಕುಮಾರ್ (22) ಬಂಧಿತ ಆರೋಪಿ. ಆರೋಪಿಯಾದ ಎಸ್.ಕುಮಾರ್ ಶಿಕ್ಷಕಿ ಶಾಂತಕುಮಾರಿ ಎಂಬುವರ ಮೇಲೆ ಹಲ್ಲೆ ನೆಡೆಸಿ ಸರಗಳ್ಳತನ ಮಾಡಿದ್ದ. ಇದೀಗ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, 2 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ

ಹಾವನ್ನು ಅಟ್ಟಾಡಿಸಿ ತಿಂದ ಸಾಕು ಬೆಕ್ಕು; ಇದು ಮೊದಲೇನಲ್ಲ

ಜಿಂಕೆಗಳ ಕಾಟಕ್ಕೆ ಹೊಲದಲ್ಲಿದ್ದ ಬೆಳೆ ನಾಶ; ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೀದರ್​ ರೈತರ ಆಕ್ರೋಶ

(Bangalore Three Thieves attacks on Police officers in Bengaluru and try to stole things)

TV9 Web

TV9 Kannada

Read More
Loading...
Unable to load recommendations.
Follow Us