AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವನ್ನು ಅಟ್ಟಾಡಿಸಿ ತಿಂದ ಸಾಕು ಬೆಕ್ಕು; ಇದು ಮೊದಲೇನಲ್ಲ

ಕೆಲಕಾಲ ಬೆಕ್ಕು ಹಾಗೂ ಹಾವಿನ ಮಧ್ಯೆ ಘೋರ ಕಾಳಗವೆ ನಡೆದಿದೆ. ಆದರೆ ಹಾವು ಬೆಕ್ಕಿನ ರೋಷವನ್ನು ಕಂಡು ತಪ್ಪಿಸಿಕೊಳ್ಳಲು ಯೋಚಿಸಿತ್ತು. ಆದರೆ ಬೆಕ್ಕು ಹಾವನ್ನು ಹೋಗಲು ಬಿಟ್ಟಿಲ್ಲ. ಹಾವನ್ನು ಹಿಡಿದು ತನ್ನ ಬಾಯಿಯಿಂದ ಮೂರು ತುಂಡು ಮಾಡಿದೆ.

ಹಾವನ್ನು ಅಟ್ಟಾಡಿಸಿ ತಿಂದ ಸಾಕು ಬೆಕ್ಕು; ಇದು ಮೊದಲೇನಲ್ಲ
ಹಾವನ್ನು ತಿಂದ ಬೆಕ್ಕು
TV9 Web
| Edited By: |

Updated on:Jul 07, 2021 | 2:26 PM

Share

ಚಿಕ್ಕಬಳ್ಳಾಪುರ: ಸಾಕುಪ್ರಾಣಿಗಳು ಮಕ್ಕಳಿಗಿಂತಲೂ ಹೆಚ್ಚು ನಿಯತ್ತಾಗಿರುತ್ತವೆ ಎನ್ನುವ ಮಾತಿಗೆ ಬೆಕ್ಕೊಂದು ಸಾಕ್ಷಿಯಾಗಿದೆ. ತನ್ನ ಒಡೆಯನ ಮನೆ ಬಳಿ ಬಂದ ಹಾವಿನ ಮೇಲೆ ಬೆಕ್ಕು ದಾಳಿ ನಡೆಸಿದ ಆಶ್ಚರ್ಯಕರ ಘಟನೆಯೊಂದು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅರಿಕೇರೆ ಗ್ರಾಮದ ದೊಡ್ಡಮುನಿಯಪ್ಪ ಎನ್ನುವವರ ಮನೆಯಲ್ಲಿ ನಡೆದಿದೆ. ದೊಡ್ಡಮುನಿಯಪ್ಪನ ಮನೆ ಬಳಿ ಇಂದು (ಜುಲೈ 7) ಹಾವೊಂದು ಬಂದಿದೆ. ಅದನ್ನು ಗಮನಿಸಿದ ಬೆಕ್ಕು, ತಕ್ಷಣ ಹಾವಿನ ಮೇಲೆ ಹಾರಿ ದಾಳಿ ನಡೆಸಿದೆ.

ಕೆಲಕಾಲ ಬೆಕ್ಕು ಹಾಗೂ ಹಾವಿನ ಮಧ್ಯೆ ಘೋರ ಕಾಳಗವೆ ನಡೆದಿದೆ. ಆದರೆ ಹಾವು ಬೆಕ್ಕಿನ ರೋಷವನ್ನು ಕಂಡು ತಪ್ಪಿಸಿಕೊಳ್ಳಲು ಯೋಚಿಸಿತ್ತು. ಆದರೆ ಬೆಕ್ಕು ಹಾವನ್ನು ಹೋಗಲು ಬಿಟ್ಟಿಲ್ಲ. ಹಾವನ್ನು ಹಿಡಿದು ತನ್ನ ಬಾಯಿಯಿಂದ ಮೂರು ತುಂಡು ಮಾಡಿದೆ. ನಂತರ ಸತ್ತ ಹಾವನ್ನು ಅಲ್ಪ ಸ್ವಲ್ಪ ಬೆಕ್ಕು ತಿಂದಿದೆ. ಈ ಅಪರೂಪದ ಕ್ಷಣಗಳನ್ನು ದೊಡ್ಡಮುನಿಯಪ್ಪನ ಮಗ ಮುನಿರಾಜು ಎಂಬುವವರು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ್ದಾನೆ.

ಬೆಕ್ಕು ಹಾವನ್ನು ತಿಂದಿದ್ದು ಇದೆ ಮೊದಲೇನಲ್ಲ ದೊಡ್ಡಮುನಿಯಪ್ಪ ಸಾಕಿದ ಬೆಕ್ಕು ಇದೆ ಮೊದಲ ಭಾರಿಗೆ ಹಾವನ್ನು ಕೊಂದು, ತಿಂದಿಲ್ಲ. ಇದಕ್ಕೂ ಮೊದಲು ತೋಟದ ಬಳಿ ಬಂದ ನಾಗರಹಾವನ್ನು ಇದೆ ರೀತಿ ಕಚ್ಚಿ ಕಚ್ಚಿ ಗಾಯಗೊಳಿಸಿ, ನಂತರ ನಾಗರಹಾವನ್ನೇ ಸ್ವಾಹ ಮಾಡಿತ್ತು.

ಬೆಕ್ಕು ಮೊಲವನ್ನೂ ತಿಂದಿತ್ತು ಬೆಕ್ಕು ಕಳೆದ ಎರಡು ತಿಂಗಳ ಹಿಂದೆ ಅರಿಕೇರೆ ಗ್ರಾಮದ ದೊಡ್ಡಮುನಿಯಪ್ಪನ ಜಮೀನಿನ ಬಳಿ ಬಂದ ಮೊಲವನ್ನು ಅಟ್ಟಾಡಿಸಿ ಹಿಡಿದು ನಂತರ ಅದನ್ನು ತಿಂದು ಹಾಕಿತ್ತು ಎಂದು ಮುನಿರಾಜು ತಿಳಿಸಿದರು.

ಇದನ್ನೂ ಓದಿ

World Chocolate Day 2021 : ಸುಪ್ರಿಯಾ ‘ಫೆರೆರೋಧಾರೆ’ಯೊಂದಿಗೆ ‘ಪಿಂಕಿ’ಯ ಟ್ಯಾಂಗೋ ಜುಗಲಬಂದಿ

Viral Video: ಜೀಪು ವೇಗವಾಗಿ ಚಲಿಸುತ್ತಿರುವಾಗಲೇ ರಸ್ತೆಗಿಳಿಯುವ ದುಸ್ಸಾಹಸ! ಶಾಂಕಿಂಗ್​ ವಿಡಿಯೋ ನೋಡಿ

(cat has bitten and eat the snake at Chikkaballapur)

Published On - 2:09 pm, Wed, 7 July 21

'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!