ಬೆಂಗಳೂರು, ಡಿಸೆಂಬರ್ 02: ಐತಿಹಾಸಿಕ ಕಡ್ಲೆಕಾಯಿ ಪರಿಷೆ (Kadlekai Parishe) ಅಂದರೆ ಸಿಟಿ ಜನರಿಗೆ ಅಚ್ಚುಮೆಚ್ಚು. ದೊಡ್ಡ ಗಣಪನ ದರ್ಶನ ಪಡೆದು, ಒಂದೆರೆಡು ಸೇರು ಕಡ್ಲೆಕಾಯಿ ಖರೀದಿ ಮಾಡಿ, ಜಾತ್ರೆ ಏಂಜಾಯ್ ಮಾಡಿ ಖುಷಿ ಪಡ್ತಾರೆ. ಆದರೆ ಸಿಟಿ ಜನರ ಖುಷಿ ಒಂದು ಕಡೆಯಾದರೆ, ಬಸವನಗುಡಿ ನಿವಾಸಿಗಳ ಸಂಕಷ್ಟ ಮತ್ತೊಂದು ಕಡೆ. ಪರಿಷೆ ಮಾಡಿ, ಆದರೆ ಮೂರೇ ದಿನಕ್ಕೆ ಸೀಮಿತಗೊಳಿಸಿ ಅಂತ ಇದೀಗ ಬಸವನಗುಡಿ ನಿವಾಸಿಗಳು ಪೊಲೀಸ್ ಕಮಿಷನರ್ಗೆ ಪತ್ರ ಬರೆದಿದ್ದಾರೆ.
ಐತಿಹಾಸಿಕ ಕಡ್ಲೆಕಾಯಿ ಪರಿಷೆ ಬೆಂಗಳೂರಿನ ಒನ್ ಆಫ್ ದಿ ಬಿಗೆಸ್ಟ್ ಇವೆಂಟ್. ಪರಿಷೆ ನೋಡೊಕ್ಕೆ ಸಿಟಿ ಜನ ಮೂಲೆ ಮೂಲೆಗಳಿಂದ ಬರ್ತಾರೆ. ಸಿಟಿ ಜನ ಏನೋ ಪರಿಷೆ ಏಂಜಾಯ್ ಮಾಡ್ತಾರೆ, ಆದರೆ ಬಸವನಗುಡಿ ನಿವಾಸಿಗಳು ಮಾತ್ರ ಸಿಕ್ಕಾಪಟ್ಟೆ ತೊಂದರೆ ಅನುಭವಿಸ್ತಿದ್ದಾರೆ. ದಯವಿಟ್ಟು ಪರಿಷೆ ಮಾಡಿ, ಆದರೆ ಮೂರೇ ದಿನಕ್ಕೆ ಪರಿಷೆ ಸೀಮಿತಗೊಳಿಸಿ ಅಂತ ಇದೀಗ ಹೆರಿಟೇಜ್ ಬಸವನಗುಡಿ ರೆಸಿಡೆಂಟ್ಸ್ ವೆಲ್ಫೇರ್ ಫೋರಂ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕಾರ್ತಿಕ ಮಾಸದ ಕೊನೆ ಸೋಮವಾರ ನಡೆಯುವ ಕಡ್ಲೆಕಾಯಿ ಪರಿಷೆ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಪರಿಷೆಗೆ ಲಕ್ಷಾಂತರ ಜನ ಸೇರ್ತಾರೆ. ಕಡ್ಲೆಕಾಯಿ ಮಾರಾಟ ಮಾಡಲು ಬೇರೆ ಊರು, ಜಿಲ್ಲೆಗಳಿಂದ ವ್ಯಾಪಾರಿಗಳು ಬಂದು ಬಸವನಗುಡಿಯಲ್ಲಿ ಬಿಡಾರ ಹೂಡ್ತಾರೆ. ಆದರೆ ಈ ವ್ಯಾಪಾರಿಗಳಿಗೆ ಯಾವ ಕನಿಷ್ಠ ಸೌಲಭ್ಯವನ್ನು ಕಲ್ಪಿಸಲಾಗುವುದಿಲ್ಲ. ಹೋಗಲಿ, ಅವರ ಶೌಚಕ್ಕೆ ಶೌಚಾಲಯ ಕೂಡ ಇರೋಲ್ಲ. ಹೀಗಾಗಿ ಅವರೆಲ್ಲಾ ಮನೆ ಮುಂದೆ, ರಸ್ತೆ ಗಲ್ಲಿಗಳಲ್ಲಿ ಬಹಿರ್ದೆಸೆ ಮುಗಿಸಿಕೊಳ್ತಾರೆ. ರಾಶಿ ರಾಶಿ ಕಸ, ಗಲೀಜಿನಿಂದ ಬಸವನಗುಡಿಯಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿದೆ. ಮಕ್ಕಳು ಸೇರಿ ಹಿರಿಯ ನಾಗರಿಕರು ಹುಷಾರ್ ಇಲ್ಲದೆ ಹಾಸಿಗೆ ಹಿಡಿದಿದ್ದಾರೆ ಎಂದು ಸ್ಥಳೀಯರಾದ ದಯಾನಂದ ಅವರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆ ಇತಿಹಾಸ, ಕಾರ್ತಿಕ ಮಾಸದಲ್ಲೇ ನಡೆಯಲು ಕಾರಣವೇನು? ಇಲ್ಲಿದೆ ಮಾಹಿತಿ
ಬಸವನಗುಡಿ ಕಡ್ಲೆಕಾಯಿ ಪರಿಷೆ ಈ ಹಿಂದೆ ಮೂರು ದಿನಗಳು ನಡೆಯುತ್ತಿತ್ತು. ಆದರೆ ಈ ವರ್ಷ 5 ದಿನಗಳಿಗೆ ಅವಕಾಶ ನೀಡಲಾಗಿದೆ. 5 ದಿನ ಅವಕಅಶ ಕೊಟ್ಟರೂ ಯಾವ ಕನಿಷ್ಠ ವ್ಯಸವ್ಥೆಗಳನ್ನು ಮಾಡಿಲ್ಲ. ಹೀಗಾಗಿ ಸ್ಥಳೀಯರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:52 pm, Mon, 2 December 24