AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gali Anjaneya Swamy: ಗಾಳಿ ಆಂಜನೇಯ ಸ್ವಾಮಿ ರಥೋತ್ಸವ: ಮೈಸೂರು ರಸ್ತೆಯಲ್ಲಿ ಸಂಚಾರ ಬದಲಾವಣೆ

ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗಾಳಿ ಅಂಜನೇಯಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ ಏ. 17 ರಿಂದ 19 ರವರೆಗೆ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿರುವುದರಿಂದ ಮೈಸೂರು ಮುಖ್ಯರಸ್ತೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಠಿಯಿಂದ ಮೈಸೂರು ರಸ್ತೆಯಲ್ಲಿ ಸವಾರರಿಗೆ ಮಾರ್ಗ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Gali Anjaneya Swamy: ಗಾಳಿ ಆಂಜನೇಯ ಸ್ವಾಮಿ ರಥೋತ್ಸವ: ಮೈಸೂರು ರಸ್ತೆಯಲ್ಲಿ ಸಂಚಾರ ಬದಲಾವಣೆ
ಗಾಳಿ ಆಂಜನೇಯ ಸ್ವಾಮಿ ರಥೋತ್ಸವ
ಗಂಗಾಧರ​ ಬ. ಸಾಬೋಜಿ
|

Updated on: Apr 18, 2024 | 8:12 AM

Share

ಬೆಂಗಳೂರು, ಏಪ್ರಿಲ್​ 18: ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ (gali Anjaneya Swamy) ರಥೋತ್ಸವ ಏ. 17 ರಿಂದ 19ರ ವರೆಗೆ ನಡೆಯಲಿದೆ. ಹೀಗಾಗಿ ದೇವಸ್ಥಾನದ ಸುತ್ತಮುತ್ತ ಸಂಚಾರ (Traffic) ಬದಲಾವಣೆ ಮಾಡಲಾಗಿದೆ. ನಿನ್ನೆಯಿಂದ ಮೈಸೂರು ರಸ್ತೆಯಲ್ಲಿ ಸವಾರರಿಗೆ ಮಾರ್ಗ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಗಾಳಿ ಆಂಜನೇಯ ಸ್ವಾಮಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಸೇರುವ ಹಿನ್ನೆಲೆ ಮುಂಜಾಗ್ರತ ಕ್ರಮಕೈಗೊಳ್ಳಲಾಗಿದೆ. ಕೆಂಗೇರಿ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ಮಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಗೆ ಸಾಗುವ ಎಲ್ಲಾ ಮಾದರಿಯ ವಾಹನಗಳಿಗೆ ಎಂದಿನಂತೆ ಮೈಸೂರು ಮುಖ್ಯರಸ್ತೆಯಲ್ಲಿ ಚಲಿಸಲು ಅನುಮತಿಸಲಾಗಿದೆ.

ಸಂಚಾರ ನಿಷೇಧ

ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ಮೈಸೂರು ಕಡೆಗೆ ಹೋಗುವ ಎಲ್ಲಾ ಮಾದರಿಯ ವಾಹನಗಳನ್ನು ಹೊಸಗುಡ್ಡದಹಳ್ಳಿ ಜಂಕ್ಷನ್‌‌ ನಿಂದ ಕಿಂಕೋ ಜಂಕ್ಷನ್‌ ವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.

ಪರ್ಯಾಯ ಮಾರ್ಗಗಳು

ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಯಿಂದ ಮೈಸೂರು ಮುಖ್ಯರಸ್ತೆ ಮುಖಾಂತರ ಮೈಸೂರು ಕಡೆಗೆ ಹೋಗುವ ಎಲ್ಲಾ ಮಾದರಿಯ ವಾಹನಗಳು ಹೊಸಗುಡ್ಡದಹಳ್ಳಿ ಜಂಕ್ಷನ್‌ನಲ್ಲಿ ಎಡತಿರುವು ಪಡೆದು, ಅವಲಹಳ್ಳಿ ಮುಖ್ಯ ರಸ್ತೆ ಮೂಲಕ, ಬೆಂಗಳೂರು ಒನ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಕೆ.ಇ.ಬಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಪಿ.ಇ.ಎಸ್.ಐ.ಟಿ. ಕಾಲೇಜು ದೇವೆಗೌಡ ಸರ್ಕಲ್ ಮುಖಾಂತರ ನಾಯಂಡಹಳ್ಳಿ ಹತ್ತಿರ ಎಡತಿರುವು ಪಡೆದು ಮೈಸೂರು ರಸ್ತೆ ತಲುಪುವುದು.

ಏ. 18 ರ ಬೆಳಿಗ್ಗೆ 6 ಗಂಟೆಯಿಂದ ದಿ 19ರ ಬೆಳಿಗ್ಗೆ 10 ಗಂಟೆವರೆಗೆ

ಸಂಚಾರ ನಿಷೇಧ

ಕೆಂಗೇರಿ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ನಗರಕ್ಕೆ ಪ್ರವೇಶಿಸುವ ಎಲ್ಲಾ ಮಾದರಿಯ ವಾಹನಗಳನ್ನು ಕಿಂಕೋ ಜಂಕ್ಷನ್‌ನಿಂದ ಹೊಸಗುಡ್ಡದಹಳ್ಳಿ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಕಡೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.

ಮಾರ್ಗ ಬದಲಾವಣೆ

ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ಕೆಂಗೇರಿ ಮತ್ತು ಮೈಸೂರು ಕಡೆಗೆ ಹೋಗುವ ಎಲ್ಲಾ ಮಾದರಿಯ ವಾಹನಗಳನ್ನು ಹೊಸಗುಡ್ಡದಹಳ್ಳಿ ಜಂಕ್ಷನ್‌ ನಿಂದ ಕಿಂಕೋ ಜಂಕ್ಷನ್‌ ವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.

ಪರ್ಯಾಯ ಮಾರ್ಗ-1

ಕೆಂಗೇರಿ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ನಗರ ಪ್ರವೇಶಿಸುವ ಎಲ್ಲಾ ಮಾದರಿಯ ವಾಹನಗಳು ನಾಯಂಡಹಳ್ಳಿ ಜಂಕ್ಷನ್‌ ನಲ್ಲಿ ಎಡ ತಿರುವು ಪಡೆದು, ನಾಗರಭಾವಿ ಜಂಕ್ಷನ್ ಹತ್ತಿರ ಬಲತಿರುವು ಪಡೆದು ಚಂದ್ರಾಲೇಔಟ್ 80 ಅಡಿ ರಸ್ತೆಯಲ್ಲಿ ಚಲಿಸಿ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮುಖಾಂತರ ಮುಂದೆ ಸಾಗಿ ಎಂ.ಸಿ. ಸರ್ಕಲ್ ಬಳಿ ಬಲತಿರುವು ಪಡೆದು ಮಾಗಡಿ ರಸ್ತೆ ಮುಖಾಂತರ ಸಾಗಬಹುದಾಗಿದೆ.

ಇದನ್ನೂ ಓದಿ: Bangaluru: ಹೆಚ್ಚು ಖಾಸಗಿ ವಾಹನಗಳಿರುವ ನಗರಗಳಲ್ಲಿ ದೆಹಲಿಯನ್ನು ಹಿಂದಿಕ್ಕಿದ ಬೆಂಗಳೂರು ನಂ 1

  • ಮೆಜೆಸ್ಟಿಕ್​​ಗೆ ಹೋಗುವ ವಾಹನಗಳು ಹುಣಸೇಮರ ಜಂಕ್ಷನ್ ಬಳಿ ಎಡ ತಿರುವು ಪಡೆದು ಕೆ.ಬಿ ಜಂಕ್ಷನ್ ಮುಖಾಂತರ ಸಾಗಿ ಖೋಡೆ ಸರ್ಕಲ್ ತಲುಪಿ ಮೆಜೆಸ್ಟಿಕ್ ಕಡೆಗೆ ಹೋಗುವುದು.
  • ಸಿಟಿ ಮಾರ್ಕೆಟ್ ಹೋಗುವ ವಾಹನ ಸವಾರರು ಹುಣಸೇಮರ ಜಂಕ್ಷನ್ ಬಳಿ ಬಲ ತಿರುವು ಪಡೆದು ಬಿನ್ನಿಮಿಲ್ ಜಂಕ್ಷನ್ ಮುಖಾಂತರ ಸಿರ್ಸಿ ಸರ್ಕಲ್ ಬಳಿ ಎಡತಿರುವು ಪಡೆದು ಮಾರ್ಕೆಟ್ ತಲುಪುವುದು.

ಪರ್ಯಾಯ ಮಾರ್ಗ-2

ನಾಯಂಡಹಳ್ಳಿ ಹಾಗೂ ಬಿ.ಹೆಚ್.ಇ.ಎಲ್. ಮತ್ತು ಮೈಸೂರು ರಸ್ತೆ ಮುಖಾಂತರ ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್‌ಗೆ ಬರುವ ವಾಹನಗಳು ಕಿಂಕೋ ಜಂಕ್ಷನ್ ಬಳಿ ಎಡತಿರುವು ಪಡೆದು ಅತ್ತಿಗುಪ್ಪೆ ಜಂಕ್ಷನ್, ವಿಜಯನಗರ ಬಸ್ ನಿಲ್ದಾಣ ಮುಖಾಂತರ, ಎಂ.ಸಿ. ಸರ್ಕಲ್‌ನಲ್ಲಿ ಬಲತಿರುವು ಪಡೆದು ಮಾಗಡಿ ಮುಖ್ಯರಸ್ತೆ ಮುಖಾಂತರ ಸಾಗಬಹುದು.

ಇದನ್ನೂ ಓದಿ: ಹಲಸೂರ್ ಗೇಟ್ ಠಾಣಾ ವ್ಯಾಪ್ತಿಯಲ್ಲಿ 2 ದಿನ ಮದ್ಯ ಮಾರಾಟ ನಿಷೇಧ: ಕಾರಣವೇನು ಗೊತ್ತಾ?

  • ಮೆಜೆಸ್ಟಿಕ್​ಗೆ ಹೋಗುವ ವಾಹನಗಳು ಹುಣಸೇಮರ ಜಂಕ್ಷನ್ ಬಳಿ ಎಡ ತಿರುವು ಪಡೆದು ಕೆ.ಬಿ ಜಂಕ್ಷನ್ ಮುಖಾಂತರ ಸಾಗಿ ಖೋಡೆ ಸರ್ಕಲ್ ತಲುಪಿ ಮೆಜೆಸ್ಟಿಕ್ ಹೋಗುವುದು.
  • ಸಿಟಿ ಮಾರ್ಕೆಟ್ ಹೋಗುವ ವಾಹನ ಸವಾರರು ಹುಣಸೇಮರ ಜಂಕ್ಷನ್ ಬಳಿ ಬಲ ತಿರುವು ಪಡೆದು ಬಿನ್ನಿಮಿಲ್ ಜಂಕ್ಷನ್ ಮುಖಾಂತರ ಸಿರ್ಸಿ ಸರ್ಕಲ್ ಬಳಿ ಎಡತಿರುವು ಪಡೆದು ಮಾರ್ಕೆಟ್ ತಲುಪುವುದು.

ಪರ್ಯಾಯ ಮಾರ್ಗ-3

ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಯಿಂದ ಮೈಸೂರು ಮುಖ್ಯರಸ್ತೆ ಮುಖಾಂತರ ಮೈಸೂರು ಕಡೆಗೆ ಹೋಗುವ ಎಲ್ಲಾ ಮಾದರಿಯ ವಾಹನಗಳು ಹೊಸಗುಡ್ಡದಹಳ್ಳಿ ಜಂಕ್ಷನ್‌ನಲ್ಲಿ ಎಡತಿರುವು ಪಡೆದು, ಆವಲಹಳ್ಳಿ ಮುಖ್ಯ ರಸ್ತೆ ಮೂಲಕ, ಬೆಂಗಳೂರು ಒನ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಕೆ.ಇ.ಬಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಪಿ.ಇ.ಎಸ್.ಐ.ಟಿ. ಕಾಲೇಜು ದೇವೆಗೌಡ ಸರ್ಕಲ್ ಮುಖಾಂತರ ನಾಯಂಡಹಳ್ಳಿ ಹತ್ತಿರ ಎಡತಿರುವು ಪಡೆದು ಮೈಸೂರು ರಸ್ತೆ ತಲುಪುವುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.