ಬೆಂಗಳೂರಿನ ಈ ರೈಲು ನಿಲ್ದಾಣದಲ್ಲಿದೆ ರೈಲ್ವೆ ಕೋಚ್​​​ ಎಸಿ ರೆಸ್ಟೋರೆಂಟ್! ಏನಿದರ ವಿಶೇಷ? ಇಲ್ಲಿದೆ ಮಾಹಿತಿ

Rail coach restaurant: ಕೊನೆಗೂ ಬೆಂಗಳೂರಿನ ‘ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್’ ರೈಲು ನಿಲ್ದಾಣದ ಪ್ರಯಾಣಿಕರ ಬೇಡಿಕೆ ಈಡೇರಿದೆ. ಪ್ರಯಾಣಿಕರ ಹಸಿವು ನೀಗಿಸಲು ಅದ್ಭುತವಾದ ರೆಸ್ಟೋರೆಂಟ್ ಒಂದನ್ನು ರೈಲ್ವೆ ಇಲಾಖೆ ಆರಂಭಿಸಿದೆ. ಆದರೆ, ಈ ರೆಸ್ಟೋರೆಂಟ್ ನಿರ್ಮಾಣವಾಗಿರುವುದು ಹಳೆಯ ರೈಲು ಬೋಗಿಯಲ್ಲಿ! ರೈಲು ಬೋಗಿ ರೆಸ್ಟೋರೆಂಟ್​​ನ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನ ಈ ರೈಲು ನಿಲ್ದಾಣದಲ್ಲಿದೆ ರೈಲ್ವೆ ಕೋಚ್​​​ ಎಸಿ ರೆಸ್ಟೋರೆಂಟ್! ಏನಿದರ ವಿಶೇಷ? ಇಲ್ಲಿದೆ ಮಾಹಿತಿ
ರೈಲ್ವೆ ಕೋಚ್​​​ ಎಸಿ ರೆಸ್ಟೋರೆಂಟ್ ಒಳಭಾಗದ ನೋಟ
Follow us
Kiran Surya
| Updated By: Ganapathi Sharma

Updated on: Apr 17, 2024 | 8:11 AM

ಬೆಂಗಳೂರು, ಏಪ್ರಿಲ್ 17: ಬೆಂಗಳೂರಿನ ‘ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್’ (Sir M Visvesvaraya Terminal) ರೈಲು ನಿಲ್ದಾಣಕ್ಕೆ ಪ್ರತಿದಿನ ಬೇರೆಬೇರೆ ರಾಜ್ಯಗಳಿಂದ ಸಾವಿರಾರು ಪ್ರಯಾಣಿಕರು ಬರುತ್ತಾರೆ. ಆದರೆ, ಅವರಿಗೆ ಕುಳಿತುಕೊಂಡು ಊಟ ಮಾಡಲು ಒಂದೊಳ್ಳೆಯ ರೆಸ್ಟೋರೆಂಟ್ ಇರಲಿಲ್ಲ. ಅದಕ್ಕೆ ವಿಭಿನ್ನವಾಗಿ ಯೋಚನೆ ಮಾಡಿದ ಮಾಡಿದ ರೈಲ್ವೆ ಇಲಾಖೆ (Indian Railways), ರೈಲಿನಲ್ಲೇ ಅದ್ಭುತವಾದ ಎಸಿ ರೆಸ್ಟೋರೆಂಟ್ (Rail coach restaurant) ಓಪನ್ ಮಾಡಿದೆ! ಆ ಮೂಲಕ, ಕಡೆಗೂ ಪ್ರಯಾಣಿಕರ ಹಲವು ದಿನಗಳ ಕನಸು ನನಸಾಗಿದೆ.

ನೈರುತ್ಯ ರೈಲ್ವೆ ವಲಯವು ‘ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್’ ರೈಲು ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ರೈಲ್ವೆ ಕೋಚ್​ನಲ್ಲಿ ರೆಸ್ಟೋರೆಂಟ್ ನಿರ್ಮಾಣ ಮಾಡಿದೆ. ಹಳೆಯ ರೈಲ್ವೆ ಕೋಚ್​​ಗಳನ್ನು ನವೀಕರಣ ಮಾಡಿ ಅವುಗಳಿಗೆ ರೆಸ್ಟೋರೆಂಟ್ ರೂಪ ಕೊಡಲಾಗಿದೆ. ಇದು ಹಲವು ದಿನಗಳ ಕನಸಾಗಿದ್ದು, ಕಡೆಗೂ ಇದೀಗ ಆರಂಭಗೊಂಡಿದೆ. ಈ ರೆಸ್ಟೋರೆಂಟ್ ಹಲವು ವಿಶೇಷತೆಗಳನ್ನು ಹೊಂದಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಸಂಪೂರ್ಣ ಹವಾ ನಿಯಂತ್ರಿತ: 40 ಜನ ಕುಳಿತುಕೊಳ್ಳಲು ವ್ಯವಸ್ಥೆ

ರೈಲ್ವೆ ಕೋಚ್ ರೆಸ್ಟೋರೆಂಟ್​​ನಲ್ಲಿ 40 ಜನರು ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಕೋಚ್ ಒಳಗೆ ಮತ್ತು ಹೊರಗೂ ಕುಳಿತುಕೊಳ್ಳಲು ಅವಕಾಶ ಇದೆ. ಹಳೆಯ ಬಳಕೆಗೆ ಬಾರದ ಸ್ಕ್ರ್ಯಾಪ್ ರೈಲ್ವೆ ಕೋಚ್​​ಗಳನ್ನು ಬಳಸಿ, ಅವುಗಳ ಒಳಾಂಗಣವನ್ನು ವಿನ್ಯಾಸಗೊಳಿಸಿ ರೆಸ್ಟೋರೆಂಟ್ ನಿರ್ಮಿಸಲಾಗಿದೆ. ಇದು 24×7 ರೆಸ್ಟೋರೆಂಟ್​ ಆಗಿದ್ದು ಸಂಪೂರ್ಣ ಹವಾ ನಿಯಂತ್ರಿತವಾಗಿರುತ್ತವೆ. ಪ್ರತಿದಿನ ಈ ರೈಲ್ವೆ ನಿಲ್ದಾಣಕ್ಕೆ ಕರ್ನಾಟಕ ಮತ್ತು ಬೇರೆಬೇರೆ ರಾಜ್ಯಕ್ಕೆ ಸಂಚಾರ ಮಾಡಲು 58 ರೈಲುಗಳು ಬರುತ್ತವೆ. 30 ರಿಂದ 35 ಸಾವಿರ ಪ್ರಯಾಣಿಕರು ಈ ರೈಲ್ವೆ ಸ್ಟೇಷನ್ ಮೂಲಕ ಪ್ರಯಾಣ ಮಾಡುತ್ತಾರೆ. ಈ ರೈಲ್ವೆ ಕೋಚ್ ರೆಸ್ಟೋರೆಂಟ್​​​ನಲ್ಲಿ ಟಿವಿ ಮ್ಯೂಸಿಕ್ ಸಿಸ್ಟಮ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಯಾವೆಲ್ಲ ಆಹಾರ ಲಭ್ಯ?

ಸೌತ್ ಇಂಡಿಯನ್, ನಾರ್ಥ್ ಇಂಡಿಯನ್ ಸೇರಿದಂತೆ ಚೈನೀಸ್ ಫುಟ್​ಗಳನ್ನು ಕೂಡ ಈ ರೆಸ್ಟೋರೆಂಟ್​​ನಲ್ಲಿ ಸವಿಯಬಹುದು. ರೈಲ್ವೆ ಇಲಾಖೆ ಈ ರೆಸ್ಟೋರೆಂಟ್ ಅನ್ನು ಖಾಸಗಿ ಹೋಟೆಲ್​​ಗೆ ಟೆಂಡರ್ ನೀಡಿದ್ದು ಇದರಿಂದ ಪ್ರತಿವರ್ಷ ‌37 ಲಕ್ಷ ರೂಪಾಯಿ ಆದಾಯ ಬರಲಿದೆಯಂತೆ.

ಪ್ರಯಾಣಿಕರು ಏನಂತಾರೆ?

ಈ ಬಿಸಿಲಿನಲ್ಲಿ ಹೊರಗೆ ಕುಳಿತುಕೊಂಡು ಊಟ ಮಾಡಲು ತುಂಬಾ ಕಷ್ಟ ಆಗುತ್ತದೆ. ಈ ಧೂಳಿ‌ನಲ್ಲಿ ಊಟ ಮಾಡಲು ಆಗುವುದಿಲ್ಲ. ಯಾವುದೇ ದೊಡ್ಡ ರೆಸ್ಟೋರೆಂಟ್​​ಗೂ ಕಡಿಮೆ ಇಲ್ಲದಂತೆ ರೆಡಿ ಮಾಡಿದ್ದಾರೆ. ನಾನು ನಾರ್ಥ್ ಮೀಲ್ಸ್ ಆರ್ಡರ್ ಮಾಡಿದೆ. ರುಚಿ ತುಂಬಾ ಚೆನ್ನಾಗಿದೆ ಎಂದು ಮಾತಾನಾಡಿದ ಗ್ರಾಹಕ ಪರಮೇಶ್ ಎಂಬವರು ‘ಟಿವಿ9’ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ವಕೀಲರಿಗೆ ಕಪ್ಪು ಕೋಟಿನಿಂದ ತಾತ್ಕಾಲಿಕ ಮುಕ್ತಿ! ಕಾರಣ ಇಲ್ಲಿದೆ

ಒಟ್ಟಿನಲ್ಲಿ ರೈಲ್ವೆ ಇಲಾಖೆಯ ಈ ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಯಶವಂತಪುರ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಸೇರಿದಂತೆ ರಾಜಧಾನಿಯ ಬೇರೆ ಬೇರೆ ರೈಲ್ವೆ ನಿಲ್ದಾಣದಲ್ಲೂ ಇದೇ ರೀತಿ ರೆಸ್ಟೋರೆಂಟ್ ತೆರೆಯುವ ಯೋಜನೆ ಹಾಕಿಕೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ