Belagavi Session: ಬೆಳಗಾವಿ ಸುವರ್ಣ ಸೌಧ ಸಭಾ ಭವನದಲ್ಲಿ 10 ಮಂದಿ ಗಣ್ಯರ ಭಾವಚಿತ್ರ ಅಳವಡಿಸಲು ಸ್ಪೀಕರ್​ಗೆ ರಾಯರೆಡ್ಡಿ ಪತ್ರ

ಯಾರ ಫೋಟೋಗಳನ್ನು ಯಾಕೆ ಹಾಕಬೇಕು ಎಂಬುದಾಗಿ ವಿಧಾನ ಸಭೆಯ ಕಲಾಪದಲ್ಲಿ ಚರ್ಚೆ ಮಾಡಲು ಸ್ಪೀಕರ್ ಅವರಿಗೆ ಅನುಮತಿ ಕೇಳಿದ್ದೆ. ಆದರೆ, ಅವರು ಪತ್ರ ಬರೆಯಲು ಹೇಳಿದರು. ತುಂಬಾ ಅಧ್ಯಯನ ಮಾಡಿ ಈಗ ಒಂದು ಪಟ್ಟಿ ಸಿದ್ದಪಡಿಸಿದ್ದೇನೆ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

Belagavi Session: ಬೆಳಗಾವಿ ಸುವರ್ಣ ಸೌಧ ಸಭಾ ಭವನದಲ್ಲಿ 10 ಮಂದಿ ಗಣ್ಯರ ಭಾವಚಿತ್ರ ಅಳವಡಿಸಲು ಸ್ಪೀಕರ್​ಗೆ ರಾಯರೆಡ್ಡಿ ಪತ್ರ
ಬಸವರಾಜ ರಾಯರೆಡ್ಡಿ
Follow us
Sunil MH
| Updated By: Ganapathi Sharma

Updated on: Dec 11, 2023 | 2:23 PM

ಬೆಳಗಾವಿ, ಡಿಸೆಂಬರ್ 11: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (Suvarna Vidhana Soudha) ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್​ ಅವರ ಭಾವಚಿತ್ರ ಇಟ್ಟಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆ ನಂತರ ಮೊದಲ ಪ್ರಧಾನಿ ನೆಹರು ಅವರ ಭಾವಚಿತ್ರ ಅಳವಡಿಸುವ ಬಗ್ಗೆಯೂ ಚರ್ಚೆಗಳಾಗಿದ್ದವು. ಇದೀಗ 10 ಮಂದಿ ಗಣ್ಯರ ಫೋಟೋ ಅಳವಡಿಸಬೇಕೆಂದು ಆಗ್ರಹಿಸಿ ಸ್ಪೀಕರ್ ಯುಟಿ ಖಾದರ್​ ಅವರಿಗೆ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ (Basvaraj Rayareddi) ಪತ್ರ ಬರೆದಿದ್ದಾರೆ.

ಯಾರ ಫೋಟೋಗಳನ್ನು ಯಾಕೆ ಹಾಕಬೇಕು ಎಂಬುದಾಗಿ ವಿಧಾನ ಸಭೆಯ ಕಲಾಪದಲ್ಲಿ ಚರ್ಚೆ ಮಾಡಲು ಸ್ಪೀಕರ್ ಅವರಿಗೆ ಅನುಮತಿ ಕೇಳಿದ್ದೆ. ಆದರೆ, ಅವರು ಪತ್ರ ಬರೆಯಲು ಹೇಳಿದರು. ತುಂಬಾ ಅಧ್ಯಯನ ಮಾಡಿ ಈಗ ಒಂದು ಪಟ್ಟಿ ಸಿದ್ದಪಡಿಸಿದ್ದೇನೆ. ಈ ಪಟ್ಟಿ ಇರುವ ಪತ್ರವನ್ನು ಬ್ಯುಸಿನೆಸ್ ಅಡ್ವೈಸರಿ ಕಮಿಟಿಗೆ ನೀಡುತ್ತಿದ್ದೇನೆ. ಒಂದು ಸಮಿತಿ ರಚನೆ ಮಾಡಿ ಈ ಫೋಟೋಗಳನ್ನು ಹಾಕಲು ಕ್ರಮ ಕೈಗೊಳ್ಳಬೇಕು ಎಂದು ರಾಯರೆಡ್ಡಿ ಹೇಳಿದ್ದಾರೆ.

ಕೈಯಲ್ಲಿ ಲಿಂಗ ಹಿಡಿದಿರುವ ಬಸವೇಶ್ವರರ ಈಗಿರುವ ಫೋಟೋ ಬದಲಿಗೆ ತಲೆ ಮೇಲೆ ಕಿರೀಟ ಇರುವ ಫೋಟೋ ಹಾಕಬೇಕು. ಮಹಾತ್ಮ ಗಾಂಧೀಜಿ ಅವರ ಫೋಟೋವನ್ನು ಕೆಳಗೆ ಹಾಕಲಾಗಿದೆ, ಅದನ್ನು ಬಸವೇಶ್ವರರ ಫೋಟೋಗೆ ಸಮಾನವಾಗಿ ಹಾಕಬೇಕು. ಸದ್ಯ ಇರುವ ಧೋತಿ ಶರ್ಟ್ ಧರಿಸಿರುವ ಸುಭಾಷ್ ಚಂದ್ರ ಬೋಸ್ ಅವರ ಪೋಟೋ ಬದಲಿಗೆ, ಸೇನಾ ವಸ್ತ್ರ ಧರಿಸಿರುವ ಫೋಟೋ ಹಾಕಬೇಕು. ಅಂಬೇಡ್ಕರ್ ಅವರ ಈಗಿರುವ ಫೋಟೋ ಬದಲಿಗೆ, ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದಿರುವ ಫೋಟೋ ಹಾಕಬೇಕು. ಸಂವಿಧಾನ ರಚನಾ ಸಭೆಯ ಮೊದಲ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಫೋಟೋವನ್ನು ಸುವರ್ಣಸೌಧದಲ್ಲಿ ಹಾಕಬೇಕು ಎಂದು ರಾಯರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಜಮೀರ್ ಅಹ್ಮದ್ ಹೇಳಿಕೆ: ವಿಧಾನಸಭೆಯಲ್ಲಿ ವಿಪಕ್ಷ- ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ, ಸ್ಪೀಕರ್ ಕಚೇರಿಯಲ್ಲಿ ಸಂಧಾನ ಸಭೆ

17 ವರ್ಷ ಭಾರತದ ಆಡಳಿತ ನಡೆಸಿದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಫೋಟೋ ಹಾಕಬೇಕು. ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಫೋಟೋ ಹಾಕಬೇಕು. ಭಾರತದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಫೋಟೋ ಕೂಡ ಇರಬೇಕು. ಕರ್ನಾಟಕ ರಾಜ್ಯದ ಏಕೀಕರಣದ ಪ್ರಥಮ ಸಿಎಂ ಎಸ್. ನಿಜಲಿಂಗಪ್ಪ ಫೋಟೋ ಹಾಕಬೇಕು. ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಫೋಟೋ ಕೂಡ ಸದನದಲ್ಲಿ ಇರಬೇಕು ಎಂದು ರಾಯರೆಡ್ಡಿ ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ