Belagavi Session: ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಎರಡನೇ ತಿದ್ದುಪಡಿ ವಿಧೇಯಕ-2023 ಅಂಗೀಕಾರ
Karnataka Assembly Session: ಆನ್‌ಲೈನ್ ಗೇಮಿಂಗ್, ಆನ್‌ಲೈನ್ ಮನಿ ಗೇಮಿಂಗ್, ಬೆಟ್ಟಿಂಗ್, ಕ್ಯಾಸಿನೋ, ಜೂಜು, ಕುದುರೆ ರೇಸ್, ಲಾಟರಿ ಆಟಗಳಿಗೆ ನಿರ್ದಿಷ್ಟ ಪಡಿಸಿದ ಕ್ರಮಗಳಲ್ಲಿ ಕ್ಲೇಮುಗಳ ಹಾಗೂ ವರ್ಚುವಲ್ ಡಿಜಿಟಲ್ ಆಸ್ತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ 2017 ಮತ್ತು ಅನುಸೂಚಿ 3ಕ್ಕೆ ತಿದ್ದುಪಡಿ ಮಾಡಲಾಗಿದೆ.

ಬೆಳಗಾವಿ, ಡಿಸೆಂಬರ್ 11: ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಎರಡನೇ ತಿದ್ದುಪಡಿ ವಿಧೇಯಕ-2023 ಸೋಮವಾರ ವಿಧಾನಸಭೆಯಲ್ಲಿ (Belagavi Session) ಅಂಗೀಕಾರ ಮಾಡಲಾಗಿದೆ. ಆನ್‌ಲೈನ್ ಗೇಮಿಂಗ್, ಆನ್‌ಲೈನ್ ಮನಿ ಗೇಮಿಂಗ್, ಬೆಟ್ಟಿಂಗ್, ಕ್ಯಾಸಿನೋ, ಜೂಜು, ಕುದುರೆ ರೇಸ್, ಲಾಟರಿ ಆಟಗಳಿಗೆ ನಿರ್ದಿಷ್ಟ ಪಡಿಸಿದ ಕ್ರಮಗಳಲ್ಲಿ ಕ್ಲೇಮುಗಳ ಹಾಗೂ ವರ್ಚುವಲ್ ಡಿಜಿಟಲ್ ಆಸ್ತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ 2017 ಮತ್ತು ಅನುಸೂಚಿ 3ಕ್ಕೆ ತಿದ್ದುಪಡಿ ಮಾಡಲಾಗಿದೆ. ಇದನ್ನು ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧಿನಿಯಮದ ಮೂಲಕ ಸೇರ್ಪಡೆ ಮಾಡಲಾಗಿದೆ.
2023ರ ಅಕ್ಟೋಬರ್ 1ರಂದು ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮಕ್ಕೆ ಈ ತಿದ್ದುಪಡಿಗಳನ್ನು ಸೇರಿಸುವಂತೆ ಜಿಎಸ್‌ಟಿ ಪರಿಷತ್ ಸಚಿವಾಲಯ ಸೂಚಿಸಿದ್ದರು.
ಇದನ್ನೂ ಓದಿ: Belagavi Session: ಬೆಳಗಾವಿ ಸುವರ್ಣ ಸೌಧ ಸಭಾ ಭವನದಲ್ಲಿ 10 ಮಂದಿ ಗಣ್ಯರ ಭಾವಚಿತ್ರ ಅಳವಡಿಸಲು ಸ್ಪೀಕರ್ಗೆ ರಾಯರೆಡ್ಡಿ ಪತ್ರ
ಆನ್‌ಲೈನ್ ಗೇಮಿಂಗ್, ಆನ್‌ಲೈನ್ ಮನಿ ಗೇಮಿಂಗ್, ಬೆಟ್ಟಿಂಗ್, ಕ್ಯಾಸಿನೋ, ಜೂಜು, ಕುದುರೆ ರೇಸ್, ಲಾಟರಿ ಆಟಗಳಿಗೆ ತೆರೆಗೆ ವಿಧಿಸುವ ಸಂಬಂಧ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ 2023 ನ್ನು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ವಿಧಾನಸಭೆಯಲ್ಲಿ ಮಂಡಿಸಿದ್ದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಜಮೀರ್ ಅಹ್ಮದ್ ರನ್ನು ವಜಾ ಮಾಡುವಂತೆ ಬಿಜೆಪಿ ಶಾಸಕರಿಂದ ಸದನ ಬಾವಿಗಿಳಿದು ಪ್ರತಿಭಟನೆ
ಪ್ರಸಕ್ತ ಸಾಲಿನ ಅ. 1 ರಿಂದು ಜಾರಿಗೆ ಬರುವಂತೆ ಸಂಬಂಧಪಟ್ಟ ರಾಜ್ಯದ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ ಕ್ಕೆ ತಿದ್ದುಪಡಿಗಳನ್ನು ಸೇರಿಸುವಂತೆ ಆ.11 ರಂದು ಜಿಎಸ್‌ಟಿ ಸಚಿವಾಲಯವು ತಿಳಿಸಿದೆ. ಹೀಗಾಗಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ-2017 ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿತ್ತು. ಆ ನಿಟ್ಟಿನಲ್ಲಿ ಸದ್ಯ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಎರಡನೇ ತಿದ್ದುಪಡಿ ವಿಧೇಯಕಯನ್ನು ಅಂಗೀಕಾರ ಮಾಡಲಾಗಿದೆ.
2023ನೇ ಸಾಲಿನ ಕರ್ನಾಟಕ ಸ್ಟಾಂಪು(ತಿದ್ದುಪಡಿ) ವಿಧೇಯಕ ಅಂಗೀಕಾರ
2023ನೇ ಸಾಲಿನ ಕರ್ನಾಟಕ ಸ್ಟಾಂಪು(ತಿದ್ದುಪಡಿ) ವಿಧೇಯಕವನ್ನು ಅಂಗೀಕಾರ ಮಾಡಲಾಗಿದೆ. ನೋಂದಣಿ ಇಲಾಖೆಯಲ್ಲಿ ಸ್ಟಾಂಪ್ನಿಂದ ಬರುವ ಆದಾಯ ಕೇವಲ 10%. ಸೋರಿಕೆ ತಡೆಗಟ್ಟಲು ಕ್ರಮದ ಜೊತೆಗೆ ಪರಿಷ್ಕರಣೆಗೆ ನಿರ್ಧಾರಿಸಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟೀಕರಣ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:52 pm, Mon, 11 December 23