ಮತ್ತೆ ಫ್ಲೆಕ್ಸ್ ಜಾಹೀರಾತು ದುಸ್ಸಾಹಸಕ್ಕೆ ಕೈ ಹಾಕಿತಾ ಬಿಬಿಎಂಪಿ?
ಬೆಂಗಳೂರು: ಫ್ಲೆಕ್ಸ್ ಬ್ಯಾನರ್ಗಳನ್ನು ಅಳವಡಿಸದಂತೆ ಹೈಕೋರ್ಟ್ ಚೀಮಾರಿ ಹಾಕಿತ್ತು. ಒಂದು ವರ್ಷ ಬಾಲ ಮುದುಡಿಕೊಂಡಿದ್ದ ಬಿಬಿಎಂಪಿ ಈಗ ತನ್ನ ಬಾಲ ಬಿಚ್ಚಿದೆ. ಫ್ಲೇಕ್ಸ್ ಬ್ಯಾನರ್ ಇಲ್ದೆ ಬೆಂಗಳೂರನ್ನ ನೋಡೋಕ್ಕೆ ಚಂದ. ಕಳೆದ ಒಂದ್ ವರ್ಷದಿಂದ ನಗರದಲ್ಲಿ ಬ್ಯಾನ್ ಆಗಿದ್ದ ಬ್ಯಾನರ್, ಫ್ಲೆಕ್ಸ್ ಅನ್ನೋ ಭೂತಕ್ಕೆ ಬಿಬಿಎಂಪಿ ಮತ್ತೆ ಚಾಲನೆ ನೀಡ್ತಿದೆ. ನಗರದ ಸೌಂದರ್ಯಕ್ಕೆ ಕಂಟಕವಾಗಿರೋ ಬ್ಯಾನರ್, ಫ್ಲೆಕ್ಸ್ ಬೇಕಾ ಅನ್ನೋ ಪ್ರಶ್ನೆ ಮತ್ತೆ ಉದ್ಭವಿಸಿದೆ. ಫ್ಲೆಕ್ಸ್‌ಗಳ ಅಬ್ಬರದಲ್ಲಿ ಮರೆಯಾಗಿದ್ದ ಕಟ್ಟಡಗಳು ಕಣ್ಣಿಗೆ ಕಾಣ್ತಿದ್ವು. ಫ್ಲೆಕ್ಸ್‌ಗಳ ಹಿಂದೆ ಮರೆಯಾಗಿದ್ದ […]

ಬೆಂಗಳೂರು: ಫ್ಲೆಕ್ಸ್ ಬ್ಯಾನರ್ಗಳನ್ನು ಅಳವಡಿಸದಂತೆ ಹೈಕೋರ್ಟ್ ಚೀಮಾರಿ ಹಾಕಿತ್ತು. ಒಂದು ವರ್ಷ ಬಾಲ ಮುದುಡಿಕೊಂಡಿದ್ದ ಬಿಬಿಎಂಪಿ ಈಗ ತನ್ನ ಬಾಲ ಬಿಚ್ಚಿದೆ. ಫ್ಲೇಕ್ಸ್ ಬ್ಯಾನರ್ ಇಲ್ದೆ ಬೆಂಗಳೂರನ್ನ ನೋಡೋಕ್ಕೆ ಚಂದ. ಕಳೆದ ಒಂದ್ ವರ್ಷದಿಂದ ನಗರದಲ್ಲಿ ಬ್ಯಾನ್ ಆಗಿದ್ದ ಬ್ಯಾನರ್, ಫ್ಲೆಕ್ಸ್ ಅನ್ನೋ ಭೂತಕ್ಕೆ ಬಿಬಿಎಂಪಿ ಮತ್ತೆ ಚಾಲನೆ ನೀಡ್ತಿದೆ. ನಗರದ ಸೌಂದರ್ಯಕ್ಕೆ ಕಂಟಕವಾಗಿರೋ ಬ್ಯಾನರ್, ಫ್ಲೆಕ್ಸ್ ಬೇಕಾ ಅನ್ನೋ ಪ್ರಶ್ನೆ ಮತ್ತೆ ಉದ್ಭವಿಸಿದೆ.
ಫ್ಲೆಕ್ಸ್‌ಗಳ ಅಬ್ಬರದಲ್ಲಿ ಮರೆಯಾಗಿದ್ದ ಕಟ್ಟಡಗಳು ಕಣ್ಣಿಗೆ ಕಾಣ್ತಿದ್ವು. ಫ್ಲೆಕ್ಸ್‌ಗಳ ಹಿಂದೆ ಮರೆಯಾಗಿದ್ದ ಗಿಡಮರಗಳ ಹಸಿರು ನಗರದ ಸೌಂದರ್ಯ ಹೆಚ್ಚಿಸಿತ್ತು. ನಗರದಲ್ಲಿ ಬ್ಯಾನರ್‌ಗಳು ಬ್ಯಾನ್ ಆದ ಬಳಿಕ ಸಿಲಿಕಾನ್ ಸಿಟಿಯ ಅಂದಚೆಂದ ಹಿಮ್ಮಡಿಯಾಗಿತ್ತು. ಆದ್ರೀಗ ಮತ್ತೆ ಫ್ಲೆಕ್ಸ್ ಅಬ್ಬರಕ್ಕೆ ತಯಾರಿ ನಡೆದಿದೆ. ಗ್ರೀನ್ ಸಿಟಿಯನ್ನ ಮರೆಮಾಚೋ ಫ್ಲೆಕ್ಸ್ ಮಾಫಿಯಾಗೆ ಬಿಬಿಎಂಪಿ ಗ್ರೀನ್ ಸಿಗ್ನಲ್ ಕೊಟ್ಟಿದೆ ಅನ್ನೋ ಮಾತು ಕೇಳಿಬರ್ತಿದೆ.
‘ಗ್ರೀನ್‌ಸಿಟಿ’ ಮರೆಮಾಚೋ ಫ್ಲೆಕ್ಸ್‌ಗಳಿಗೆ ‘ಗ್ರೀನ್ ಸಿಗ್ನಲ್’!? ನಗರದಲ್ಲಿ ಅನಧಿಕೃತ ಬ್ಯಾನರ್‌ಗಳು ಮೀತಿಮೀರಿದಾಗ ಹೈಕೋರ್ಟ್ ಎಂಟ್ರಿ ಕೊಟ್ಟಿತ್ತು. ಬಿಬಿಎಂಪಿಯ ಕಿವಿ ಹಿಂಡಿತ್ತು. ಇದಕ್ಕೆ ಹೆದರಿದ ಪಾಲಿಕೆ 1 ವರ್ಷದ ಮಟ್ಟಿಗೆ ಪ್ಲಾಸ್ಟಿಕ್ ಬ್ಯಾನರ್, ಫ್ಲೆಕ್ಸ್, ಹೋರ್ಡಿಂಗ್‌ಗಳನ್ನ ಹಾಕಲು ನಿರ್ಬಂಧ ಹೇರಿತ್ತು. ಆದ್ರೀಗ ಒಂದು ವರ್ಷದ ಅವಧಿ ಮುಗಿಯುತ್ತಿದ್ದಂತೆ ಹೊಸ ಬೈಲಾ, ಹೊಸ ರೂಲ್ಸ್ ತಯಾರು ಮಾಡಿರುವ ಬಿಬಿಎಂಪಿ ಮತ್ತೆ ಫ್ಲೆಕ್ಸ್ ಬ್ಯಾನರ್ಗಳಿಗೆ ಅನುಮತಿ ನೀಡಲು ಮುಂದಾಗಿದೆ.
ಈಗಾಗಲೇ ಹೊಸ ಬೈಲಾ ತಯಾರಿಸಿರೋ ಪಾಲಿಕೆ ಬೈಲಾಗೆ ಅನುಮೋದನೆ ಪಡೆದುಕೊಂಡಿದ್ದು, ಸರ್ಕಾರದ ಅನುಮೋದನೆಗೆ ಕಳುಹಿಸಿಕೊಟ್ಟಿದೆ. ಈ ಬಗ್ಗೆ ಪಾಲಿಕೆ ಆಯುಕ್ತರನ್ನ ಕೇಳಿದ್ರೆ ಹಾಗೇನಿಲ್ಲ ಎನ್ನುತ್ತಲೇ ಹೊಸ ರೂಲ್ಸ್‌ನ್ನ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೇವೆ ಅಂತಿದ್ದಾರೆ.
ಇನ್ನು ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್‌ಗಳಿಗೆ ಬ್ರೇಕ್ ಹಾಕಿದ್ದ ಹೈಕೋರ್ಟ್, ಲೀಗಲ್ ಆಗಿ ಅನುಮತಿ ಪಡೆದು ಹೋರ್ಡಿಂಗ್ಸ್ ಹಾಕಬಹುದು ಅಂತಾ ಈ ಹಿಂದೆಯೇ ಅಭಿಪ್ರಾಯ ಪಟ್ಟಿತ್ತು. ಇದೀಗ ಬಿಬಿಎಂಪಿಯಿಂದ ಅನುಮತಿ ಪಡೆದು, ಪ್ಲಾಸ್ಟಿಕ್ ಬಳಕೆ ಮಾಡ್ದೆ ಫ್ಲೆಕ್ಸ್ , ಬ್ಯಾನರ್, ಹೋರ್ಡಿಂಗ್‌ಗಳನ್ನ ಹಾಕ್ಬಹುದಂತೆ. ಆದ್ರೆ, ಬಿಬಿಎಂಪಿ ಈ ಸುದ್ದಿ ಮುಚ್ಚಿಟ್ಟಿದ್ದು, ಕೆಲ ಮಾಫಿಯಾದವರಿಗೆ ಅನುಕೂಲ ಮಾಡಿಕೊಡ್ತಿದೆ. ತಮಗೆ ಬೇಕಾದವರಿಗೆ ಟೆಂಡರ್ ನೀಡಲು ಮುಂದಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಒಟ್ನಲ್ಲಿ ಬೆಂಗಳೂರಿನಿಂದ ಮರೆಯಾಗಿದ್ದ ಫ್ಲೆಕ್ಸ್ ಬ್ಯಾನರ್ ಅನ್ನೋ ಭೂತ ಮತ್ತೆ ಎಂಟ್ರಿ ಕೊಡ್ತಿದೆ. ಇದಕ್ಕೆ ಬಿಬಿಎಂಪಿ ರೆಡ್ ಕಾರ್ಪೆಟ್ ಹಾಸಿದ್ದು, ಇನ್ಮುಂದೆ ಎಲ್ಲೆಲ್ಲೂ ಬ್ಯಾನರ್‌ಗಳೇ ರಾರಾಜಿಸಲಿವೆ.
Published On - 2:17 pm, Fri, 27 December 19