ಒಕ್ಕಲಿಗರ ಮತಾಂತರದ ಉದ್ದೇಶವಿದೆಯಾ ಶಿವಕುಮಾರ್? -ಪ್ರತಾಪ್‌ ಸಿಂಹ

ಒಕ್ಕಲಿಗರ ಮತಾಂತರದ ಉದ್ದೇಶವಿದೆಯಾ ಶಿವಕುಮಾರ್? -ಪ್ರತಾಪ್‌ ಸಿಂಹ

ಮೈಸೂರು: ಸ್ವಕ್ಷೇತ್ರದಲ್ಲಿ ಯೇಸು ಪ್ರತಿಮೆ ನಿರ್ಮಿಸಲು ಮುಂದಾಗಿರುವ ಕಾಂಗ್ರೆಸ್​ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ರಾಜ್ಯ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಯೇಸು ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಕನಕಪುರದ ಒಕ್ಕಲಿಗರನ್ನು ಮತಾಂತರ ಮಾಡುವ ಸ್ಕೀಮಾ ಇದು? ಸಿದ್ಧಗಂಗಾ, ಸುತ್ತೂರು, ಸಿರಿಗೆರೆ, ಆದಿಚುಂಚನಗಿರಿಯ ಶ್ರೀಗಳನ್ನು ಮರೆತು ಹೋದರೆ? ಬಾಲಗಂಗಾಧರನಾಥ ಶ್ರೀಗಳು ಮರೆತು ಹೋದ್ರಾ ನಿಮಗೆ ಎಂದು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವಜಾತಿ ಜನಾಂಗದ ದೈವ ಲಿಂಗೈಕ್ಯ ಶಿವಕುಮಾರ್ ಸ್ವಾಮೀಜಿಯವರ ಪ್ರತಿಮೆ ನಿರ್ಮಿಸಿದ್ದರೆ ಕಪಾಲಿ ಬೆಟ್ಟಕ್ಕೆ […]

sadhu srinath

|

Dec 28, 2019 | 2:55 PM

ಮೈಸೂರು: ಸ್ವಕ್ಷೇತ್ರದಲ್ಲಿ ಯೇಸು ಪ್ರತಿಮೆ ನಿರ್ಮಿಸಲು ಮುಂದಾಗಿರುವ ಕಾಂಗ್ರೆಸ್​ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ರಾಜ್ಯ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಯೇಸು ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಕನಕಪುರದ ಒಕ್ಕಲಿಗರನ್ನು ಮತಾಂತರ ಮಾಡುವ ಸ್ಕೀಮಾ ಇದು? ಸಿದ್ಧಗಂಗಾ, ಸುತ್ತೂರು, ಸಿರಿಗೆರೆ, ಆದಿಚುಂಚನಗಿರಿಯ ಶ್ರೀಗಳನ್ನು ಮರೆತು ಹೋದರೆ? ಬಾಲಗಂಗಾಧರನಾಥ ಶ್ರೀಗಳು ಮರೆತು ಹೋದ್ರಾ ನಿಮಗೆ ಎಂದು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ವಜಾತಿ ಜನಾಂಗದ ದೈವ ಲಿಂಗೈಕ್ಯ ಶಿವಕುಮಾರ್ ಸ್ವಾಮೀಜಿಯವರ ಪ್ರತಿಮೆ ನಿರ್ಮಿಸಿದ್ದರೆ ಕಪಾಲಿ ಬೆಟ್ಟಕ್ಕೆ ಕಳಶಪ್ರಾಯವಾಗುತ್ತಿರಲಿಲ್ಲವೇ? ಸ್ವಂತ ಹಣದಿಂದ 114 ಅಡಿ ಪ್ರತಿಮೆ ನಿರ್ಮಾಣದ ಉದ್ದೇಶ ಏನು? ಆಂಧ್ರದಲ್ಲಿ ಜಗನ್ ಮತಾಂತರವನ್ನೇ ಅಧಿಕಾರದ ಮೆಟ್ಟಿಲು ಮಾಡಿಕೊಂಡರು. ನೀವು ಅದೇ ರೀತಿ ಮಾಡುತ್ತಿದ್ದೀರಾ? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಸಿಂಹ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada