ಬೆಂಗಳೂರು, ಡಿಸೆಂಬರ್ 12: ನಗರದಲ್ಲಿ ನಡೆದಿದ್ದ ಟೆಕ್ಕಿ ಅತುಲ್ (Atul Subhash) ಆತ್ಮಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಅತುಲ್ ಪತ್ನಿಯೇ A1 ಆಗಿದ್ದು, ಇನ್ನೂ ಮೂವರ ವಿರುದ್ದ ದೂರು ನೀಡಲಾಗಿದೆ. ಒಂದು ಕಡೆ ಆತ್ಮಹತ್ಯೆ ಸಂಬಂಧ ಸ್ಪೋಟಕ ವಿಚಾರಗಳು ಬಯಲಾಗಿದ್ದರೆ, ಮತ್ತೊಂದು ಕಡೆ ಅತುಲ್ ಸಾವಿಗೆ ನ್ಯಾಯ ಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡಲಾಗುತ್ತಿದೆ. ಈ ಮಧ್ಯೆ ಸಾವಿಗೆ ಮುಂಚೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಸುಪ್ರೀಂ ಕೋರ್ಟ್ ಜಡ್ಜ್‌ಗೆ ಇ-ಮೇಲ್ ಕಳುಹಿಸಿರುವುದು ಬಹಿರಂಗವಾಗಿದೆ.
ಹೌದು.. ಸಾವಿಗೂ ಮುಂಚೆ ಅಂದರೆ ಡಿಸೆಂಬರ್ 9ರಂದು ರಾತ್ರಿ 1 ಗಂಟೆ 31 ನಿಮಿಷಕ್ಕೆ ಟೆಕ್ಕಿ ಅತುಲ್ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಸುಪ್ರೀಂ ಕೋರ್ಟ್ ಜಡ್ಜ್‌ಗೆ ಇ-ಮೇಲ್ ಒಂದನ್ನು ಕಳುಹಿಸಿದ್ದು, ನಿಮ್ಮ ಕೈಯಲ್ಲಿ ದೊಡ್ಡ ಅಧಿಕಾರ ಇದೆ. ಮನಸ್ಸು ಮಾಡಿದರೆ ದೇಶದಲ್ಲಿ ಬದಲಾವಣೆ ತರಬಹುದು.
ಇದನ್ನೂ ಓದಿ: Justice Is Due ಎಂದು ಕತ್ತಿಗೆಗೆ ಬೋರ್ಡ್ ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ, ಸಾಯಲು ಟೈಮ್ ಟೇಬಲ್ ಹಾಕಿದ್ದ
ಅಸಮರ್ಥ ಮತ್ತು ಪಕ್ಷಪಾತಿ ನ್ಯಾಯಾಧೀಶರನ್ನು ವಜಾಗೊಳಿಸಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆ ತರಬೇಕು ಎಂಬ ಈ ರೀತಿಯಲ್ಲಿ ಹಲವು ವಿಚಾರಗಳನ್ನ ಉಲ್ಲೇಖಿಸಿದ್ದು, ತನ್ನ ಮೇಲೆ ಸುಳ್ಳು ಕೇಸ್, ಸೆಕ್ಷನ್ಗಳು ಹಾಕಿದ್ದಾರೆಂದು ಕೂಡ ಮೇಲ್ನಲ್ಲಿ ಉಲ್ಲೇಖಿಸಿದ್ದಾರೆ.
ಎರಡು ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಟೆಕ್ಕಿ ಅತುಲ್ ಸುಭಾಷ್ 40 ಪುಟಗಳ ಡೆತ್ ನೋಟ್ ಬರೆದಿದ್ದು, ಆತನ ಸಾವಿಗೆ ಆಕೆಯ ಪತ್ನಿ ಮನೆಯವರ ಮಾನಸಿಕ ಹಿಂಸೆಯೇ ಕಾರಣ ಅನ್ನೋದು ಬಟಬಯಲಾಗಿತ್ತು. ಹೀಗಾಗಿಯೇ ಅತುಲ್ ಸಹೋದರ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಅತುಲ್ ಸಾವಿಗೆ ಕಾರಣರಾದವರ ವಿರುದ್ದ ದೂರು ನೀಡಿದ್ದು, ಆತ್ಮಹತ್ಯೆ ಕಾರಣ ಏನು ಅನ್ನೋದನ್ನ ಬಿಚ್ಚಿಟ್ಟಿದ್ದರು.
ಅತುಲ್ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಅತುಲ್ ಮಡದಿ ನಿಕಿತಾ ಸಿಂಘಾನಿಯ, ಅತ್ತೆ ನಿಶಾ ಸಿಂಘಾನಿಯ, ಬಾಮೈದ ಅನುರಾಗ್ ಸಿಂಘಾನಿಯ ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯ ವಿರುದ್ಧ ಮಾರತ್ ಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವರದಿ: ಪ್ರದೀಪ್ ಕ್ರೈಂ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.