ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸಪ್ರೆಸ್​​ ಪುನಾರಂಭ ಸೇರಿ, ಇತರೆ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ: ಇಲ್ಲಿದೆ ಮಾಹಿತಿ

ಹಾವೇರಿ ಮತ್ತು ಬ್ಯಾಡಗಿ ನಡುವಿನ ರೈಲ್ವೆ ಹಳಿಗಳಲ್ಲಿ ನಡೆಯುತ್ತಿರುವ ನಿರ್ವಹಣೆ ಕಾರ್ಯದಿಂದಾಗಿ, ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳಾಗಿವೆ. ವಿಶ್ವಮಾನವ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳು ತಡವಾಗಿ ಹೊರಡುತ್ತಿವೆ ಅಥವಾ ಮಾರ್ಗ ಮಧ್ಯೆ ನಿಲ್ಲಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಬದಲಾವಣೆಯಾದ ವೇಳಾಪಟ್ಟಿ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸಪ್ರೆಸ್​​ ಪುನಾರಂಭ ಸೇರಿ, ಇತರೆ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ: ಇಲ್ಲಿದೆ ಮಾಹಿತಿ
ವಿಶ್ವಮಾನವ ಎಕ್ಸಪ್ರೆಸ್ (ಸಂಗ್ರಹ ಚಿತ್ರ)

Updated on: May 06, 2025 | 8:15 AM

ಬೆಂಗಳೂರು, ಮೇ 06: ವಿಶ್ವಮಾನವ ಎಕ್ಸ್‌ಪ್ರೆಸ್ (Vishwamanava Express) ಪುನರಾರಂಭ ಮತ್ತು ಇತರೆ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಗೆ ಬಗ್ಗೆ ನೈರುತ್ಯ ರೈಲ್ವೆ (SWR) ಮಾಹಿತಿ ನೀಡಿದೆ. ಹಾವೇರಿ ಮತ್ತು ಬ್ಯಾಡಗಿ ನಿಲ್ದಾಣಗಳ ನಡುವಿನ ರೈಲ್ವೆ ಹಳಿಯಲ್ಲಿ ಅಗತ್ಯ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳು ನಡೆಯುತ್ತಿರುವುದರಿಂದ, ಕೆಲ ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಹಾಗಾದರೆ ಯಾವೆಲ್ಲಾ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.

ಯಾವೆಲ್ಲಾ ರೈಲುಗಳ ವೇಳಾಪಟ್ಟಿ ಬದಲಾವಣೆ

ಈ ಬಗ್ಗೆ ನೈರುತ್ಯ ರೈಲ್ವೆ ತನ್ನ ಅಧಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಯಾವೆಲ್ಲಾ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

ಇದನ್ನೂ ಓದಿ
ಬೆಂಗಳೂರಿನಲ್ಲಿ ಇಂದು ಸಾಧಾರಣ ಮಳೆ ಸಾಧ್ಯತೆ
ಜಿಲೇಬಿಯಲ್ಲಿ ಕೃತಕ ಬಣ್ಣ ಶಂಕೆ: ಮಾದರಿ ಸಂಗ್ರಹಕ್ಕೆ ಮುಂದಾದ ಆಹಾರ ಇಲಾಖೆ
ಬೆಂಗಳೂರು ಮೆಟ್ರೋ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ ದಂಡ
ಮನೆ ಬಾಗಿಲಿಗೆ ಡ್ರೋನ್ ಡೆಲಿವರಿ! ಬೆಂಗಳೂರು ಅಪಾರ್ಟ್​ಮೆಂಟ್ ಹೊಸ ಪ್ರಯೋಗ

ನೈರುತ್ಯ ರೈಲ್ವೆ ಟ್ವೀಟ್​

  • ರೈಲು ಸಂಖ್ಯೆ 17325: ಬೆಳಗಾವಿ-ಮೈಸೂರು ವಿಶ್ವಮಾನವ ದೈನಂದಿನ ಎಕ್ಸ್‌ಪ್ರೆಸ್ ರೈಲು ಈ ಮೊದಲು ಮೇ 5, 6, 8, 9, 11, 12, 13, 15 ಮತ್ತು 16, 2025ರಂದು ಬೆಳಗಾವಿಯಿಂದ 60 ನಿಮಿಷಗಳ ಕಾಳ ತಡವಾಗಿ ಹೊರಡಲಿದೆ. ಮತ್ತು ಮಾರ್ಗ ಮಧ್ಯೆ 45 ನಿಮಿಷಗಳ ಕಾಲ ನಿಲ್ಲಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಈಗ ಈ ರೈಲು ಮೇ 5, 2025 ರಿಂದ ತನ್ನ ಮೊದಲಿನ ವೇಳಾಪಟ್ಟಿಯ ಪ್ರಕಾರ ಎಂದಿನಂತೆ ಸಂಚಾರ ಆರಂಭಿಸಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕ: ದಂಡ ವಿಧಿಸಿದ ಬಿಎಂಆರ್​ಸಿಎಲ್​​

  • ಮೇ 6, 8, 13, 15 ಮತ್ತು 20, 2025 ರಂದು ಬಿಕಾನೇರ್​ನಿಂದ ಹೊರಡುವ ರೈಲು ಸಂಖ್ಯೆ 16588 ಬಿಕಾನೇರ್​-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸಪ್ರೆಸ್​​​​ ರೈಲು ಮಾರ್ಗ ಮಧ್ಯೆ 75 ನಿಮಿಷಗಳ ಕಾಲ ನಿಲ್ಲಿಸಲಾಗುವುದು.

ಇದನ್ನೂ ಓದಿ: ಮನೆ ಬಾಗಿಲಿಗೆ ಡ್ರೋನ್ ಡೆಲಿವರಿ! ಹೊಸ ಪ್ರಯೋಗ ಆರಂಭಿಸಿದ ಬೆಂಗಳೂರು ಅಪಾರ್ಟ್​ಮೆಂಟ್

  • ಮೇ 5, 6, 8, 9, 11, 12, 13, 15, 16, 18, 19, 20, 22 ಮತ್ತು 23, 2025 ರಂದು ಹೊರಡುವ ರೈಲು
    ಸಂಖ್ಯೆ 17347 ಹುಬ್ಬಳ್ಳಿ-ಚಿತ್ರದುರ್ಗ ಡೈಲಿ ಎಕ್ಸ್‌ಪ್ರೆಸ್ ಹುಬ್ಬಳ್ಳಿಯಿಂದ 75 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ ಮತ್ತು ಮಾರ್ಗ ಮಧ್ಯೆ 25 ನಿಮಿಷಗಳ ಕಾಲ ನಿಲ್ಲಿಸಲಾಗುವುದು ಎಂದು ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.