ಬಿಜೆಪಿ 2ನೇ ಪಟ್ಟಿ ಪ್ರಕಟ: ರಾಯಚೂರಿಗೆ ಹೊರಟಿದ್ದ ಶೆಟ್ಟರ್​ ಕಾರು ವಾಪಸ್ ಹುಬ್ಬಳ್ಳಿಯತ್ತ ತಿರುಗಿತು

ಲೋಕಸಭಾ ಚುನಾವಣೆಗೆ ಕರ್ನಾಟಕದ 20 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಒಟ್ಟು 28 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದ್ದು, ಇನ್ನುಳಿದ 25 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಹೀಗಾಗಿ ಇನ್ನೂ ಐದು ಕ್ಷೇತ್ರ ಟಿಕೆಟ್ ಕಾಯ್ದಿರಿಸಿದೆ. ಇನ್ನು ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ರಾಯಚೂರಿನತ್ತ ಹೊರಟ್ಟಿದ್ದ ಜಗದೀಶ್ ಶೆಟ್ಟರ್​ ಕಾರು ವಾಪಸ್ ಹುಬ್ಬಳ್ಳಿಯತ್ತ ತಿರುಗಿದೆ.

ಬಿಜೆಪಿ 2ನೇ ಪಟ್ಟಿ ಪ್ರಕಟ: ರಾಯಚೂರಿಗೆ ಹೊರಟಿದ್ದ ಶೆಟ್ಟರ್​ ಕಾರು ವಾಪಸ್ ಹುಬ್ಬಳ್ಳಿಯತ್ತ ತಿರುಗಿತು
ಜಗದೀಶ್ ಶೆಟ್ಟರ್
Edited By:

Updated on: Mar 13, 2024 | 11:06 PM

ಹುಬ್ಬಳ್ಳಿ, (ಮಾರ್ಚ್ 13): ಲೋಕಸಭಾ ಚುನಾವಣೆಗೆ (Loksabha Elections 2024) ಬಿಜೆಪಿ ಎರಡನೇ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕ ಒಟ್ಟು 8 ಹಾಲಿ  ಬಿಜೆಪಿ(BJP) ಸಂಸದರಿಗೆ ಟಿಕೆಟ್​ ಮಿಸ್ ಆಗಿದೆ. ಇನ್ನು ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ (jagadish shettar) ಅವರ ಕಾರು ವಾಪಸ್ ಹುಬ್ಬಳ್ಳಿ ಕಡೆ ತಿರುಗಿದೆ. ಹೌದು.. ಜಗದೀಶ್ ಶೆಟ್ಟರ್ ಬೆಳಗಾವಿ(Belagavi) ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದ್ರೆ, 2ನೇ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದು ಕಂಡು ಶೆಟ್ಟರ್ ರಾಯಚೂರು(Raichur) ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ಹುಬ್ಬಳ್ಳಿಗೆ(Hubballi) ಬಂದಿದ್ದಾರೆ.

ಅಭ್ಯರ್ಥಿ ಸಂಪರ್ಕ ಅಭಿಯಾನ,ಗೋಡೆ ಬರಹಕ್ಕೆ ಚಾಲನೆ ನೀಡಲ ರಾಯಚೂರಿಗೆ ಹೋಗಬೇಕಿತ್ತು. ಮೊದಲೇ ರಾಯಚೂರು ಪ್ರವಾಸ ನಿಗದಿಯಾಗಿತ್ತು. ಅಲ್ಲದೇ ರಾಯಚೂರಿನಲ್ಲಿ ಸುದ್ದಿಗೋಷ್ಠಿಗೂ ಸಮಯ ನಿಗದಿಪಡಿಸಿದ್ದರು. ಆದ್ರೆ, ಯಾವಾಗ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ತಿಳಿಯಿತೋ ಕೂಡಲೇ ರಾಯಚೂರು ಪ್ರವಾಸ ರದ್ದುಗೊಳಿಸಿ ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಹುಬ್ಬಳ್ಳಿಗೆ ವಾಪಸ್ ಆಗಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಬಿಜೆಪಿಯ 2ನೇ ಪಟ್ಟಿ ಪ್ರಕಟ, ಕರ್ನಾಟಕದ ಹಲವು ಹಾಲಿ ಸಂಸದರಿಗೆ ಟಿಕೆಟ್ ಕಟ್

ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ್ದರಿಂದ ಮುನಿಸಿಕೊಂಡು ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆದ್ರೆ, ಇತ್ತೀಚೆಗೆ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು ವಾಪಸ್ ಬಿಜೆಪಿ ಸೇರ್ಪಡೆಯಾಗಿದ್ದರು. ಬಿಜೆಪಿ ಸೇರ್ಪಡೆಗೂ ಮುನ್ನವೇ ಅವರು ಬೆಳಗಾವಿ ಅಥವಾ ಹುಬ್ಬಳ್ಳಿ-ಧಾರವಾಡ, ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನಿಡಬೇಕೆಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ಬಿಜೆಪಿ ನಾಯಕರು ಸಹ ಯಾವುದಾದರೂ ಒಂದು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದರು.

ಆದ್ರೆ, ಇದೀಗ ಧಾರವಾಡ ಟಿಕೆಟ್ ಪ್ರಹ್ಲಾದ್ ಜೋಶಿಗೆ ಅವರಿಗೆ ನೀಡಿದ್ದರೆ, ಹಾವೇರಿ ಟಿಕೆಟ್ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ನೀಡಲಾಗಿದೆ. ಇದೀಗ ಉಳಿದಿರುವುದು ಬೆಳಗಾವಿ ಮಾತ್ರ. ಆದರೆ, ಬಿಜೆಪಿ ಹೈಕಮಾಂಡ್ ಬೆಳಗಾವಿ ಟಿಕೆಟ್ ಘೋಷಣೆ ಮಾಡದೇ ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ 2ನೇ ಪಟ್ಟಿಯಲ್ಲಿ ಬೆಳಗಾವಿ ಇಲ್ಲದಿರುವುದರಿಂದ ಜಗದೀಶ್ ಶೆಟ್ಟರ್​ಗೆ ಆತಂಕಗೊಂಡು ಪೂರ್ವ ನಿಗದಿತ ರಾಯಚೂರು ಪ್ರವಾಸವನ್ನು ಮೊಟುಕುಗೊಳಿಸಿ ವಾಪಸ್ ಹುಬ್ಬಳ್ಳಿಗೆ ದೌಡಾಯಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ