ಬೆಳಗಾವಿ ಬಿಜೆಪಿ ಮುಖಂಡನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ
ಬೆಳಗಾವಿಯ ಬಿಜೆಪಿ ಮುಖಂಡನ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಕಿರುಕುಳ ಆರೋಪ ಕೇಳಿಬಂದಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆ ಬೆಳಗಾವಿ ನಗರದ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.
ಬೆಳಗಾವಿ, ಆಗಸ್ಟ್ 23: ಬೆಳಗಾವಿಯ (Belagavi) ಬಿಜೆಪಿ (BJP) ಮುಖಂಡನ ವಿರುದ್ಧ ಲೈಂಗಿಕ ದೌರ್ಜನ್ಯದ (physically harassment) ಆರೋಪ ಕೇಳಿಬಂದಿದೆ. ಬಿಜೆಪಿ ಮುಖಂಡ ಪೃಥ್ವಿಸಿಂಗ್ ಲುಧಾರ ಹಾಗೂ ಅವರ ಮಗ ಜಶ್ವಿರ್ ಸಿಂಗ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತ್ರಸ್ತೆ ಮತ್ತು ಆರೋಪಿ ಪೃಥ್ವಿಸಿಂಗ್ ಲುಧಾರ 2019 ರಿಂದ ಪರಿಚಯಿಸ್ತರು. ಆರೋಪಿ ಪೃಥ್ವಿಸಿಂಗ್ ಲುಧಾರ ಸಂತ್ರಸ್ತ ಮಹಿಳೆ, ಆಕೆಯ ಪತಿ ಗಣೇಶ ಹಾಗೂ ಆಕೆಯ ಅತ್ತೆ- ಮಾವನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಿದ್ದಾನೆ. ಆರೋಪಿ ಪೃಥಿಸಿಂಗ್ ತನ್ನ ಬೆಳಗಾವಿಯ ಜಯನಗರದ ಮನೆಯಲ್ಲಿ ಸಂತ್ರಸ್ತೆಯ ಮೈಮುಟ್ಟಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಸಂತ್ರಸ್ತೆ ತಾಯಿಯೊಂದಿಗೆ ಬಡಕಲಗಲ್ಲಿಯಲ್ಲಿ ವಾಸವಿದ್ದಾಗ, ಪೃಥ್ವಿಸಿಂಗ್ ತನ್ನ ಪರಿಯಸ್ತನಾದ ಇಮ್ರಾನ್ ಜಮಾದಾರನಿಗೆ ಸಂತ್ರಸ್ತೆಯನ್ನು ಹಿಂಬಾಲಿಸುವಂತೆ ಹೇಳಿದ್ದಾನೆ.
ಇದನ್ನೂ ಓದಿ: 60 ವರ್ಷದ ಅರ್ಚಕನ ಜತೆ ಚಾಟಿಂಗ್ ಮಾಡಿದ ಯುವತಿ ಚೀಟಿಂಗ್, ಮಂಡ್ಯ ಪೂಜಾರಿ ಕಂಗಾಲು
ಅದರಂತೆ ಇಮ್ರಾನ್, ಸಂತ್ರಸ್ತೆ ಹೋದ ಕಡೆಯಲ್ಲೆಲ್ಲಾ ಹಿಂಬಾಲಿಸಿ ಮುಜುಗರ ಉಂಟು ಮಾಡಿದ್ದಾನೆ. ಪೃಥ್ವಿಸಿಂಗ್ ಲುಧಾರ ಸಂತ್ರಸ್ತೆಗೆ ಬಲವಂತವಾಗಿ ವಿಷಕಾರಿ ಪದಾರ್ಥವನ್ನು ತಿನ್ನಿಸಿದ್ದಾನೆ. ಬಳಿಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾನೆ. ಈ ವೇಳೆ ನನಗೆ ವಿಷ ನೀಡಿದವರು ಗಂಡ, ಅತ್ತೆ-ಮಾವ ಎಂದು ಹೇಳುವುಂತೆ ಸಂತ್ರಸ್ತೆಗೆ ಒತ್ತಾಯಿಸಿದ್ದಾರೆ.
ಸಂಸತ್ರಸ್ತೆ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದಮೇಲೆ ಆಕೆಯನ್ನು ಪೃಥ್ವಿಸಿಂಗ್ ತನ್ನ ಮನೆಗೆ ಕರೆದುಕೊಂಡು ಹೋಗಿ ಮೊಬೈಲ್ ಕಿತ್ತುಕೊಂಡು, ಒಂದು ತಿಂಗಳುವರೆಗೆ ಮನೆಯಲ್ಲಿ ಅಕ್ರಮ ಬಂಧನದಲ್ಲಿ ಇರಿಸಿ, ಹಲ್ಲೆ, ಮಾಡಿದ್ದಲ್ಲದೆ ಬಂದೂಕು ತೋರಿಸಿ ಧಮಕಿ ಹಾಕಿದ್ದನು. ನಂತರ ಪೃಥ್ವಿಸಿಂಗ್ ಮಗ ಜಸ್ವೀರಸಿಂಗ್ ಲುಧಾರ ಸಂತ್ರಸ್ತೆ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದಾಳೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ