Belagavi: ಕ್ರಿಶ್ಚಿಯನ್ ಧರ್ಮಗುರು ನೇತೃತ್ವದಲ್ಲಿ ಗೋವಾಗೆ ತೆರಳುತ್ತಿದ್ದ ತಂಡದ ಮೇಲೆ ದಾಳಿ; ಫಾದರ್ ಕಾನ್ಸ್ಟಿ‌ ರಾಡ್ರಿಕ್ಸ್ ಹೇಳಿದ್ದಿಷ್ಟು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 17, 2023 | 6:27 PM

ಕ್ರಿಶ್ಚಿಯನ್ ಧರ್ಮಗುರು ನೇತೃತ್ವದಲ್ಲಿ ಗೋವಾಗೆ ರೈಲಿನಲ್ಲಿ ತೆರಳುತ್ತಿದ್ದ 40 ಜನರ ತಂಡದ ಮೇಲೆ ಗುಂಪೊಂದು ಏಕಾಎಕಿ ದಾಳಿ ಮಾಡಿದೆ ಎಂದು ಫಾದರ್ ಕಾನ್ಸ್ಟಿ‌ ರಾಡ್ರಿಕ್ಸ್ ಆರೋಪಿಸಿದ್ದಾರೆ.

Belagavi: ಕ್ರಿಶ್ಚಿಯನ್ ಧರ್ಮಗುರು ನೇತೃತ್ವದಲ್ಲಿ ಗೋವಾಗೆ ತೆರಳುತ್ತಿದ್ದ ತಂಡದ ಮೇಲೆ ದಾಳಿ; ಫಾದರ್ ಕಾನ್ಸ್ಟಿ‌ ರಾಡ್ರಿಕ್ಸ್ ಹೇಳಿದ್ದಿಷ್ಟು
ಮತಾಂತರ ಆರೋಪ ನೀಡಿದ ಸಂಘಟನೆಗಳು
Follow us on

ಬೆಳಗಾವಿ: ಕ್ರಿಶ್ಚಿಯನ್ ಧರ್ಮಗುರು ಫಾದರ್ ಕಾನ್ಸ್ಟಿ‌ ರಾಡ್ರಿಕ್ಸ್ ನೇತೃತ್ವದಲ್ಲಿ 40 ಜನರ ತಂಡ ಮಹಾರಾಷ್ಟ್ರದಿಂದ ಹಜರತ್ ನಿಜಾಮುದ್ದಿನ್ ರೈಲಿನ ಮೂಲಕ ಗೋವಾಗೆ ರೈಲಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಬಳಿ ಕಾರಣ ಇಲ್ಲದೇ ಏಕಾಏಕಿ ದಾಳಿ ಮಾಡಿದ್ದಾರೆ. ನಾವು ಟಿಕೆಟ್ ರಿಸರ್ವ್ ಮಾಡಿಕೊಂಡು ಹೋಗುತ್ತಿದ್ದೇವು. ಅವರಿಗೆ ಹೇಗೆ ಮಾಹಿತಿ ಸಿಕ್ಕಿತೋ ಗೊತ್ತಿಲ್ಲ. ನಂತರ ಅಲ್ಲಿಂದ ಮಧ್ಯರಾತ್ರಿ ಬೆಳಗಾವಿ ರೇಲ್ವೆ ನಿಲ್ದಾಣದಲ್ಲಿ ಬಂಧಿಳಿದ ಸಂದರ್ಭದಲ್ಲಿಯೂ ಕೂಡ ಗುಂಪು ಜಮಾವಣೆಯಾಗಿದ್ದು ಬಳಿಕ ಬೆಳಗಾವಿಯ ಕ್ಯಾಂಪ್ ಪೊಲೀಸರ ಭದ್ರತೆಯ ಮೂಲಕ ಸೇಂಟ್‌ ಪೌಲ್ ಕಾಲೇಜಿನಲ್ಲಿ ಬೆಳಗ್ಗೆವರೆಗೆ ಆಶ್ರಯದಲ್ಲಿದ್ದು, ಬಳಿಕ ಪೊಲೀಸರು ವಾಪಸ್ ಮಹಾರಾಷ್ಟ್ರಕ್ಕೆ ಹೋಗುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ನಾವೆಲ್ಲ ಮಹಾರಾಷ್ಟ್ರಕ್ಕೆ ವಾಪಸ್ ಹೋಗುತ್ತಿದ್ದೇವೆ ಎಂದು ಫಾದರ್ ಕಾನ್ಸ್ಟಿ‌ ರಾಡ್ರಿಕ್ಸ್ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರದ ಧುಲೆ ಜಿಲ್ಲೆಯ ಶಿರಪುರ ಪಟ್ಟಣದ 40 ಜನರ ತಂಡವು ವಿಶ್ವಮಂಡಲ ಸೇವಾಶ್ರಮ ಎನ್‌ಜಿಒ ವತಿಯಿಂದ ಗೋವಾ ಪ್ರವಾಸಕ್ಕೆ ತೆರಳುತ್ತಿದ್ದೆವು. ಬೆಳಗಾವಿ ಮೂಲಕ ಗೋವಾಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಶಂಕೆ ಹಿನ್ನೆಲೆ ದಾಳಿ ಮಾಡಿತ್ತಾ ಸಂಘಟನೆ? ಎಂಬುದು ಪ್ರಶ್ನೆಯಾಗಿದೆ. ಈ ಹಿಂದೆ ಪತ್ತೆಯಾದ ಹಿಂದೂಗಳ ಮತಾಂತರ ಪ್ರಕರಣದಲ್ಲಿ ಕ್ರಿಶ್ಚಿಯನ್ ಮತಾಂತರಿಗಳು ಹಿಂದೂ ದೇವಾನು ದೇವತೆಗಳನ್ನು ನಿಂಧಿಸಿ ಅವರದ್ದೇ ದೇವರು ಶ್ರೇಷ್ಠ ಎಂಬಂತೆ ಬಿಂಬಿಸಿ ಮತಾಂತರ ಮಾಡಲಾಗುತ್ತಿತ್ತು. ಇವರು ಕೂಡ ಮತಾಂತರ ಮಾಡುತ್ತಿದ್ದರಾ ಎಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ:ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದ ಒಂದೇ ಕುಟುಂಬದ 7 ಜನರು ಹಿಂದು ಧರ್ಮಕ್ಕೆ ಘರ್ ವಾಪಸ್ಸಿ

ಒಂದು ವೇಳೆ ಮತಾಂತರ ಮಾಡಲು ಯತ್ನಿಸಿದ್ದಾದರೆ ಮತಾಂತರ ನಿಷೇಧದ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕಾನೂನುಗಳನ್ನು ತಂದಿದೆ. ಆದರೂ ಆಗಾಗ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಬಲವಂತ, ವಂಚನೆ,  ಒತ್ತಾಯ ಹಾಗೂ ಆಮಿಷದ ಮೂಲಕ ನಡೆಸುವ ಮತಾಂತರ ಮತ್ತು ಮದುವೆಯಾಗುವ ಭರವಸೆಯ  ಮೂಲಕ ನಡೆಸುವ ಮತಾಂತರಕ್ಕೆ ನಿಷೇಧವಿದೆ.‌ ಸುಪ್ರೀಕೋರ್ಟ್​ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಐದು ವರ್ಷಗಳವರೆಗೆ  ಜೈಲು ಶಿಕ್ಷೆ ಹಾಗೂ ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ‌ ವಸೂಲಾತಿಗೆ ಅವಕಾಶವಿದೆ ಎಂದು ಹೇಳಿದೆ. ಇಷ್ಟೋಂದು ನಿಯಮಗಳಿದ್ದರು ಇಂತಹ ಘಟನೆಗಳು ನಡೆಯುತ್ತಿರುತ್ತದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:09 pm, Tue, 17 January 23