ಮಡಿಕೇರಿಯಲ್ಲಿ ಮತಾಂತರಕ್ಕೆ ಯತ್ನ ಆರೋಪ; ಪ್ರಥಮ ದರ್ಜೆ ಸಹಾಯಕನ ಬಂಧನ
ನಗರದ ಜ.ತಿಮ್ಮಯ್ಯ ವೃತ್ತದ ಬಸ್ ನಿಲ್ದಾಣ ಬಳಿ ಮತಾಂತರಕ್ಕೆ ಪ್ರಚೋದಿಸುತ್ತಿದ್ದ ಆರೋಪದ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ(FDA) ನಿಶಾಂತ್ ಹೆಚ್.ಬಿ ಎನ್ನುವವರನ್ನು ಬಂಧಿಸಲಾಗಿದೆ.
ಮಡಿಕೇರಿ: ಜಿಲ್ಲೆಯಲ್ಲಿ ಮತಾಂತರ (Conversion) ಸುದ್ದು ಮಾಡುತ್ತಿದ್ದು, ನಗರದ ಜ.ತಿಮ್ಮಯ್ಯ ವೃತ್ತದ ಬಸ್ ನಿಲ್ದಾಣದ ಬಳಿ ಮತಾಂತರಕ್ಕೆ ಪ್ರಚೋದಿಸುತ್ತಿದ್ದ ಸರ್ಕಾರಿ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರು ನೀಡಿದ ದೂರಿನಂತೆ ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಪೊಲೀಸರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ (FDA) ನಿಶಾಂತ್ ಹೆಚ್.ಬಿ ಎಂಬಾತನನ್ನು ಬಂಧಿಸಿದ್ದಾರೆ. ಮತಾಂತರಕ್ಕೆ ಪ್ರಚೋದನೆ (Incitement to conversion) ನೀಡಲು ಜೊತೆಗೆ ಇಟ್ಟುಕೊಂಡಿದ್ದ ಕ್ರೈಸ್ತ ಮಿಷನರಿ (Christian Missionary) ಪುಸ್ತಕಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆ ಪತ್ತೆಯಾದ ಹಿಂದೂಗಳ ಮತಾಂತರ ಪ್ರಕರಣದಲ್ಲಿ ಕ್ರಿಶ್ಚಿಯನ್ ಮತಾಂತರಿಗೆಳು ಹಿಂದೂ ದೇವಾನು ದೇವತೆಗಳನ್ನು ನಿಂದಿಸಿ ಅವರದ್ದೇ ದೇವರು ಶ್ರೇಷ್ಠ ಎಂಬಂತೆ ಬಿಂಬಿಸುವುದು ಕಂಡುಬಂದಿದ್ದವು. ಸದ್ಯ ಬಂಧಿತನಾಗಿರುವ ನಿಶಾಂತ್ ಕೂಡ ಇದೇ ರೀತಿ ಮಾಡುತ್ತಿದ್ದನು. ಮತಾಂತರಕ್ಕೆ ಆಮಿಷವೊಡ್ಡುವುದರ ಜೊತೆಗೆ ಹಿಂದೂ ದೇವರುಗಳನ್ನು ನಿಂದಿಸುತ್ತಿದ್ದನು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮತಾಂತರ ನಿಷೇಧದ ಬಗ್ಗೆ ಸರ್ಕಾರ ಅನೇಕ ಕಾನೂನುಗಳನ್ನು ತಂದರು ಆಗಾಗ ಈ ರೀತಿಯ ಘಟನೆಗಳು ಸಂಭವಿಸುತ್ತಿದೆ. ಬಲವಂತ, ವಂಚನೆ, ಒತ್ತಾಯ ಹಾಗೂ ಆಮಿಷದ ಮೂಲಕ ನಡೆಸುವ ಮತಾಂತರ ಮತ್ತು ಮದುವೆಯಾಗುವ ಭರವಸೆಯ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧವಿದೆ. ಸುಪ್ರೀಕೋರ್ಟ್ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ ವಸೂಲಾತಿಗೆ ಅವಕಾಶವಿದೆ ಎಂದು ಹೇಳಿದೆ. ಇಷ್ಟೋಂದು ನಿಯಮಗಳಿದ್ದರು ಇಂತಹ ಘಟನೆಗಳು ನಡೆಯುತ್ತಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Sun, 8 January 23